“ನಮ್ಮ ಗೆಲುವು ಕೇವಲ ಹಿಂದೂ ಮತಗಳ ಮೇಲೆ ಅವಲಂಬಿತವಾಗಿದ್ದರೆ, ನಾವು ಸೋತರೂ ಪರವಾಗಿಲ್ಲ. ಡಿಎಂಕೆ ಹಿಂದೂಗಳ ಮತ ಭಿಕ್ಷೆ ಬೇಡುವ ಮಟ್ಟಕ್ಕೆ ಇಳಿಯುವುದಿಲ್ಲ.” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಿಂದೂ ವಿರೋಧಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ನ್ಯೂಸ್ 7 ತಮಿಳ್ ಸುದ್ದಿ ಮಾಧ್ಯಮ ವರದಿ ಮಾಡಿದೆ. ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಪೋಸ್ಟ್ ನಿಜವೆ ಎಂದು ಪರಿಶೀಲಿಸಿದಾಗ ಅಸಲಿ ಸತ್ಯ ಹೊರ ಬಿದ್ದಿದೆ.
ಫ್ಯಾಕ್ಟ್‌ಚೆಕ್
ಹೀಗೆ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ಗೂಗಲ್ ರಿವರ್ಸ್ ಇಮೇಜಿನಲ್ಲಿ ಹುಡುಕಿದಾಗ ನ್ಯೂಸ್ 7 ತಮಿಳ್ ಮಾಧ್ಯಮಕ್ಕೆ ಸಂಬಂಧಿಸಿದ ಹಲವಾರು ಪೋಸ್ಟ್‌ಗಳು ಕಂಡು ಬಂದಿವೆ. ಹಾಗಾಗಿ ಇದರಲ್ಲಿ ಯಾವುದು ನಿಜವಾದ ಮೂಲ ಪೋಸ್ಟ್ ಎಂಬುದನ್ನು ನಿಖರವಾಗಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದರೆ ವೈರಲ್ ಪೋಟೋ ಹಲವು ಫೋಟೋಗಳೊಂದಿಗೆ ಹೊಂದಿಕೆ ಆಗುತ್ತಿದೆ.
ನ್ಯೂಸ್ 7 ತಮಿಳ್ ಸುದ್ದಿ ಮಾಧ್ಯಮ ಈ ಬಗ್ಗೆ ವರದಿಯನ್ನು ಮಾಡಿದೆಯೇ ಎಂದು ಹುಡುಕಿದಾಗ ಎಂ.ಕೆ. ಸ್ಟಾಲಿನ್ ಕುರಿತು ಈ ರೀತಿಯ ಯಾವುದೇ ವರದಿಗಳು ಕೂಡ ಕಂಡು ಬಂದಿಲ್ಲ.
இந்த செய்தியை நியூஸ்7 தமிழ் வெளியிடவில்லைhttps://t.co/WciCN2SiwX | #Fake | #misinformation | #FakeNews | #News7Tamil | #News7TamilUpdates pic.twitter.com/0BCoBmFA3P
— News7 Tamil (@news7tamil) September 8, 2023
ಹೀಗಾಗಿ ವೈರಲ್ ಪೋಸ್ಟ್‌ಗೆ ಸಂಬಂಧಿಸಿದ ಕೀ ವರ್ಡ್ಸ್ ಬಳಸಿ ಗೂಗಲ್‌ನಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿ ಹುಡುಕಿದಾಗ ಕೆಲವೊಂದು ಪೋಸ್ಟ್‌ಗಳು ಕಂಡು ಬಂದಿವೆ. ಇದೇ ವೇಳೆ ನ್ಯೂಸ್ 7 ತಮಿಳ್ ಸುದ್ದಿ ಮಾಧ್ಯಮದ ಎಕ್ಸ್ ಖಾತೆಯಲ್ಲಿನ ಪೋಸ್ಟ್‌ವೊಂದು ಕಂಡು ಬಂದಿದೆ. ಈ ಪೋಸ್ಟ್ 8 ಸೆಪ್ಟೆಂಬರ್ 2023ರಲ್ಲಿ ನ್ಯೂಸ್ 7 ತಮಿಳ್ ಇದೊಂದು ನಕಲಿ ಸುದ್ದಿ ಎಂಬುದನ್ನು ಖಚಿತ ಪಡಿಸಿದೆ. ಹಾಗಾಗಿ ಈ ಸುಳ್ಳು ಸುದ್ದಿ ಕಳೆದ 4 ತಿಂಗಳಿನಿಂದ ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದು ಕಂಡು ಬಂದಿದೆ. ಹಾಗಾಗಿ ವೈರಲ್ ಪೋಸ್ಟ್ ಎಡಿಟೆಡ್ ಆಗಿದೆ
ಇದನ್ನೂ ಓದಿ : Fact Check: ಮುಸ್ಲಿಂ ಒಲೈಕೆಗಾಗಿ ಇಂದಿರಾ ಗಾಂಧಿಯವರು ಹಿಜಾಬ್ ಧರಿಸಿದ್ದರು ಎಂಬುದು ಸುಳ್ಳು
ವಿಡಿಯೋ ನೋಡಿ : Fact Check: ಮುಸ್ಲಿಂ ಒಲೈಕೆಗಾಗಿ ಇಂದಿರಾ ಗಾಂಧಿಯವರು ಹಿಜಾಬ್ ಧರಿಸಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.