Fact Check: ‘ಪ್ರಧಾನ ಮಂತ್ರಿ ವಿಶ್ವಕರ್ಮ ಉಚಿತ ಹೊಲಿಗೆ ಯಂತ್ರ ಯೋಜನೆ’ಯಡಿಯಲ್ಲಿ ಕೇಂದ್ರ ಸರ್ಕಾರ 15 ಸಾವಿರ ನೀಡಲಿದೆ ಎಂಬುದು ಸುಳ್ಳು

ಪ್ರಧಾನ ಮಂತ್ರಿ ವಿಶ್ವಕರ್ಮ

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಂಗವಾಗಿ ಕೇಂದ್ರ ಸರ್ಕಾರ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದರ ಅಡಿಯಲ್ಲಿ, ಹೊಲಿಗೆ ಯಂತ್ರವನ್ನು ಖರೀದಿಸಲು ಕೇಂದ್ರ ಸರ್ಕಾರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ 15,000 ರೂ ಜಮೆ ಮಾಡಲಾಗುತ್ತದೆ. ಹಾಗಾಗಿ ಟೈಲರಿಂಗ್ ಮಾಡಿ ಹಣ ಸಂಪಾದಿಸಬಹುದು. ಕೇಂದ್ರ ಸರ್ಕಾರ ರೂ.20 ಸಾವಿರದವರೆಗೆ ಸಾಲ ನೀಡುತ್ತಿದೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಇದನ್ನು ಅನೇಕ ಸ್ಥಳೀಯ ಮಾಧ್ಯಮಗಳು ಈ ಸುದ್ಧಿಯನ್ನು ವರದಿ ಮಾಡಿ ಪಿಎಂ ವಿಶ್ವಕರ್ಮ ಯೋಜನೆಯ ಅಂಗವಾಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲಾಗುತ್ತದೆ ಎಂದು ಹಬ್ಬಿಸಲಾಗುತ್ತಿದೆ. ಅವುಗಳನ್ನು ನಾವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

 

ಫ್ಯಾಕ್ಟ್‌ಚೆಕ್: ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್‌ಗಳನ್ನು ಬಳಸಿಕೊಂಡು ಪಿಎಂ ವಿಶ್ವಕರ್ಮ ಯೋಜನೆ ಕುರಿತು ಗೂಗಲ್ ಸರ್ಚ್ ಮಾಡಿದಾಗ, ‘ಪ್ರಧಾನಿ ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆ’ ಅಡಿಯಲ್ಲಿ ಯಾವುದೇ ಉಚಿತ ಹೊಲಿಗೆ ಯಂತ್ರ ಯೋಜನೆ ಲಭ್ಯವಿಲ್ಲ ಮಾಹಿತಿ ಲಭ್ಯವಾಗಿದೆ. ಇದಲ್ಲದೆ, ಪಿಐಬಿ ಫ್ಯಾಕ್ಟ್ ಚೆಕ್ ‘ಎಕ್ಸ್’ ವೇದಿಕೆಯಲ್ಲಿ ‘ಕೇಂದ್ರ ಸರ್ಕಾರವು ಯಾವುದೇ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಜಾರಿಗೊಳಿಸುತ್ತಿಲ್ಲ, ಇದು ನಕಲಿ ಸುದ್ದಿ’ ಎಂದು ಪೋಸ್ಟ್ ಮಾಡಿದೆ.

ಮುಂದುವರೆದು, ‘ಪ್ರಧಾನಿ ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆ’ ಅಡಿಯಲ್ಲಿ, 18 ಕೌಶಲ್ಯ ಕಲೆಗಳಲ್ಲಿ  ಯಾವುದಾದರೂ ಒಂದರಲ್ಲಿ ತೊಡಗಿರುವ ಕುಶಲಕರ್ಮಿಗಳು, ಕುಟುಂಬ ಆಧಾರಿತ ಸಾಂಪ್ರದಾಯಿಕ ವ್ಯಾಪಾರಗಳು, ಕೈ ಮತ್ತು ಸಾಧನಗಳೊಂದಿಗೆ ಕೆಲಸ ಮಾಡುವವರು ಈ ಯೋಜನೆಗೆ ಅರ್ಹರಾಗಿದ್ದಾರೆ ಎಂದು ಮಾರ್ಗಸೂಚಿಗಳ ಪ್ಯಾರಾ 2.3 ರಲ್ಲಿ ಉಲ್ಲೇಖಿಸಲಾಗಿದೆ. ಈ 18 ಕಲೆಗಳಲ್ಲಿ ಟೈಲರಿಂಗ್ ಸೇರಿರುವುದನ್ನು ನಾವು ಕಾಣುತ್ತೇವೆ.

ಹೊಲಿಗೆ ಯಂತ್ರ ಖರೀದಿಸಲು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ 15 ಸಾವಿರ ರೂ.ಗಳನ್ನು ಕೇಂದ್ರ ಜಮಾ ಮಾಡುವುದಾಗಿ ಎಲ್ಲಿಯೂ ಹೇಳಿಲ್ಲ. ಆದರೆ, ಈ ಯೋಜನೆಯಡಿ ಫಲಾನುಭವಿಗಳ ಕೌಶಲ್ಯ ಮೌಲ್ಯಮಾಪನದ ನಂತರ, ಇ-ರೂಪಿ/ಇ-ವೋಚರ್‌ಗಳ ರೂಪದಲ್ಲಿ ಅವರ ಮೂಲಭೂತ ತರಬೇತಿಯ ಆರಂಭದಲ್ಲಿ ರೂ. 15000 ಪ್ರೋತ್ಸಾಹಧನ ನೀಡಲಾಗುವುದು. ಈ ವೋಚರ್‌ಗಳನ್ನು ಟೂಲ್‌ಕಿಟ್‌ಗಳನ್ನು ಖರೀದಿಸಲು ಸರ್ಕಾರ ಗೊತ್ತುಪಡಿಸಿದ ಕೇಂದ್ರಗಳಲ್ಲಿ ಬಳಸಬಹುದು.

ಇದಲ್ಲದೆ, ಫಲಾನುಭವಿಗಳ ಮೂಲ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಫಲಾನುಭವಿಗಳಿಗೆ ‘ಉದ್ಯಮ ಅಭಿವೃದ್ಧಿ ಸಾಲ’ ರೂಪದಲ್ಲಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಅರ್ಹ ವ್ಯಕ್ತಿಗಳು ರೂ ಐದು ಶೇಕಡಾ ರಿಯಾಯಿತಿ ಬಡ್ಡಿ ದರದಲ್ಲಿ 3 ಲಕ್ಷ ಸಾಲ ದೊರೆಯಲಿದೆ. ಇದಲ್ಲದೇ ಕೇಂದ್ರ ಸರ್ಕಾರ ಟೈಲರಿಂಗ್ ಶಾಪ್ ಸ್ಥಾಪಿಸಲು ರೂ. 20,000 ವರೆಗೆ ಸಾಲ ನೀಡುವುದಾಗಿ ಎಲ್ಲಿಯೂ ನಮೂದಿಸಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ’ ಅಡಿಯಲ್ಲಿ ಯಾವುದೇ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ನೀಡುತ್ತಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪದನೆ ತಪ್ಪಾಗಿದೆ.


ಇದನ್ನು ಓದಿ: ಮಸೀದಿಯೊಂದು ಬಾಂಬ್‌ ತಯಾರಿಕೆಯ ತರಬೇತಿ ಸಂದರ್ಭದಲ್ಲಿ ಕುಸಿದಿದೆ ಎಂಬುದು ಸುಳ್ಳು


ವೀಡಿಯೋ ನೋಡಿ: ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

Leave a Reply

Your email address will not be published. Required fields are marked *