ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬರು ದೊಣ್ಣೆಯಿಂದ ಥಳಿಸುತ್ತಿರುವ ದೃಶ್ಯ ಕಂಡು ಬಂದಿದೆ. ಈ ವೀಡಿಯೊ ಉತ್ತರ ಪ್ರದೇಶದ ಜೌನ್‌ಪುರ್‌ನ ಬಿಜೆಪಿ ಶಾಸಕ ವಿಪುಲ್ ದುಬೆ ಅವರು ಸಂಬಳವನ್ನು ಕೇಳಿದ ಎಂದು ಅವರ ಕೆಲಸಗಾರನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
Vipul Dube BJP MLA from UP beating his emploee for asking his salary@vipuldubeymla @myogiadityanath @Uppolice @RahulGandhi @PMOIndia @ncbn @NitishKumar @hd_kumaraswamy @INCIndia @rashtrapatibhvn @siddaramaiah @sdpofindia @PrasthuthaNews @varthabharati pic.twitter.com/YhkE3UJJiu
— @Mk📨0322 (@Mk03222) June 27, 2024
ಅನೇಕರು ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್: ಜೌನ್‌ಪುರ ಪೊಲೀಸರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ವೈರಲ್ ಪೋಸ್ಟ್ ಒಂದಕ್ಕೆ ಉತ್ತರವನ್ನು ನೀಡಿದ್ದು. ಅದರಲ್ಲಿ, “ಪ್ರಕರಣವು ಜಾನ್‌ಪುರಕ್ಕೆ ಸಂಬಂಧಿಸಿಲ್ಲ. ದಯವಿಟ್ಟು ಸರಿಯಾದ ಮಾಹಿತಿಯಿಲ್ಲದೆ ಹಕ್ಕುಗಳನ್ನು ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಘಟನೆಯ ಬಗ್ಗೆ ಎಸ್ಪಿ ಸಂಜಯ್ ಕುಮಾರ್ ಅವರ ಅಧಿಕೃತ ಹೇಳಿಕೆಯನ್ನು ಹೊಂದಿರುವ ಶಹಜಹಾನ್ಪುರ ಪೊಲೀಸರ ಅಧಿಕೃತ ಟ್ವೀಟ್‌ನ ಸ್ಕ್ರೀನ್ಶಾಟ್ ಅನ್ನು ಸಹ ಅವರು ಹಂಚಿಕೊಂಡಿದ್ದಾರೆ. ಈ ಹೇಳಿಕೆಯು ಏಪ್ರಿಲ್ 2022 ರಲ್ಲಿ ನೀಡಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಜಯ್ ಕುಮಾರ್, “ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯನ್ನು ಥಳಿಸುತ್ತಿರುವುದನ್ನು ಕಾಣಬಹುದು. ವಿಚಾರಣೆಯ ನಂತರ, ಆರೋಪಿಗಳು ಮತ್ತು ಸಂತ್ರಸ್ತ ಹೆಸರುಗಳು ನಮಗೆ ತಿಳಿದುಬಂದವು. ಕೋಲಿನಿಂದ ಹೊಡೆದ ವ್ಯಕ್ತಿ ಪ್ರತೀಕ್ ತಿವಾರಿ ಮತ್ತು ರಾಜೀವ್ ಭಾರದ್ವಾಜ್ ಎಂಬುವರು ಥಳಿಸಲ್ಪಟ್ಟ ವ್ಯಕ್ತಿ. ಅಲ್ಲಿ ಇತರ ಜನರೂ ಇದ್ದರು… ರಾಜೀವ್ ಅವರು ಇನ್ನೊಬ್ಬ ವ್ಯಕ್ತಿಗಾಗಿ ಕೆಲಸ ಮಾಡುತ್ತಿದ್ದರಿಂದ ಅವರನ್ನು ಥಳಿಸಲಾಗಿದೆ ಎಂದು ಹೇಳಿದರು, ಅದನ್ನು ಅವರು ಪ್ರತೀಕ್ ಗೆ ಬಹಿರಂಗಪಡಿಸಿರಲಿಲ್ಲ”.
ಬಾಂಡಾ ಪೊಲೀಸರ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ಈ ವೀಡಿಯೊವನ್ನು ಹಂಚಿಕೊಂಡಿದೆ. ಕೆಳಗಿನ ಎರಡೂ ಟ್ವೀಟ್‌ಗಳನ್ನು ನೋಡಬಹುದು:
— Banda Police (@bandapolice) April 17, 2022
“ಸದರ್ ಬಜಾರ್ ಪ್ರದೇಶದ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯನ್ನು ಕೋಲಿನಿಂದ ಹೊಡೆಯುವ ವೀಡಿಯೊ ವೈರಲ್ ಆಗಿದ್ದು, ಕ್ರಮ ಕೈಗೊಳ್ಳಲಾಗಿದೆ” ಎಂದು ನಗರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಸಂಜಯ್ ಕುಮಾರ್ @SPcitysha ಸ್ಪಷ್ಟಪಡಿಸಿದ್ದಾರೆ. #UPPolice @Uppolice pic.twitter.com/MKytYegSNr
थाना सदर बाजार क्षेत्र मे "व्यक्ति द्वारा डण्डे से अन्य व्यक्ति की पिटाई किये जाने का वीडियो वायरल होने तथा कार्यवाही" के सम्बन्ध मे श्री संजय कुमार, अपर पुलिस अधीक्षक नगर @SPcitysha की बाइट।#UPPolice @Uppolice pic.twitter.com/MKytYegSNr
— SHAHJAHANPUR POLICE (@shahjahanpurpol) April 16, 2022
ಏಪ್ರಿಲ್ 16, 2022 ರಂದು ಶಹಜಹಾನ್ಪುರದ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ FRIನ ಪ್ರತಿಯನ್ನು ನಾವು ಪಡೆದುಕೊಂಡಿದ್ದು. ಎಫ್ಐಆರ್ ಸಂಖ್ಯೆ 354 ರಲ್ಲಿ, ಪ್ರತೀಕ್ ತಿವಾರಿ, ಸತ್ತಾರ್ ಮತ್ತು ಇತರ ನಾಲ್ವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿಯ ಸೆಕ್ಷನ್ 147, 323 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆದರೆ ಈ ಘಟನೆ ಬಿಜೆಪಿ ಕಚೇರಿಯಲ್ಲಿಯೇ ನಡೆದಿದೆ ಎಂದು ವೈರಲ್ ವೀಡಿಯೋದ ಮೂಲಕ ತಿಳಿಯುತ್ತದೆ. ಧರಿಸಿರುವ ಶಾಲು ಮತ್ತು ಕಚೇರಿಯಲ್ಲಿ ಬಿಜೆಪಿಯ ಕಮಲದ ಚಿಹ್ನೆ ಇರುವುದನ್ನು ವೈರಲ್ ವೀಡಿಯೋದಲ್ಲಿ ನೀವು ಕಾಣಬಹುದು.
ಆದ್ದರಿಂದ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊ ವಾಸ್ತವವಾಗಿ ಉತ್ತರ ಪ್ರದೇಶದ ಶಹಜಹಾನ್ಪುರದ ಸದರ್ ಬಜಾರ್ ಪ್ರದೇಶದಲ್ಲಿ 2022 ರಲ್ಲಿ ನಡೆದ ಘಟನೆಯಾಗಿದೆ. ಆರೋಪಿಯ ಹೆಸರು ಪ್ರತೀಕ್ ತಿವಾರಿ ಮತ್ತು ಸಂತ್ರಸ್ತ ರಾಜೀವ್ ಭಾರದ್ವಾಜ್. ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿರುವಂತೆ ಚಿತ್ರಹಿಂಸೆ ನೀಡುತ್ತಿರುವ ಆರೋಪಿ ಬಿಜೆಪಿ ಶಾಸಕ ವಿಪುಲ್ ದುಬೆ ಅಲ್ಲ. ಬದಲಾಗಿ ಬಿಜೆಪಿ ಕಾರ್ಯಕರ್ತ ಪ್ರತೀಕ್ ತಿವಾರಿ.
ಇದನ್ನು ಓದಿ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿ ನಡೆದ ಕೊಲೆಗೆ ಮುಸ್ಲಿಂ ಯುವಕ ಕಾರಣ ಎಂಬುದು ಸುಳ್ಳು
ವೀಡಿಯೋ ನೋಡಿ: 5ನೇ ಕಿಂಗ್ ಜಾರ್ಜ್ ಶ್ಲಾಘಿಸಿ ರವೀಂದ್ರನಾಥ ಟ್ಯಾಗೋರ್‌ರವರು “ಜನ ಗಣ ಮನ” ಗೀತೆ ರಚಿಸಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ