Fact Check: ಉದ್ಯಮಿ ಜಾರ್ಜ್ ಸೊರೊಸ್ ಜೊತೆ ಫೋಟೋದಲ್ಲಿರುವ ಮಹಿಳೆ ಅವರ ಪತ್ನಿಯೇ ಹೊರತು ಮನಮೋಹನ್ ಸಿಂಗ್ ಅವರ ಮಗಳಲ್ಲ

ಹಂಗೇರಿಯನ್ ಅಮೇರಿಕನ್ ಉದ್ಯಮಿ ಜಾರ್ಜ್ ಸೊರೊಸ್ ಮಹಿಳೆಯೊಂದಿಗೆ ಇರುವ ಆತ್ಮೀಯ ಘಳಿಗೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ, ಜೊತೆಗೆ ಚಿತ್ರದಲ್ಲಿರುವ ಮಹಿಳೆ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಗಳು ಎಂಬ ಹೇಳಿಕೆಯೊಂದಿಗೆ. ಈ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. 

ಫ್ಯಾಕ್ಟ್‌ಚೆಕ್: ಈ ಕುರಿತು ನಾವು ಹೆಚ್ಚಿನ ಮಾಹಿತಿ ತಿಳಿಯಲು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ, ಸೊರೊಸ್‌ನೊಂದಿಗೆ ಪೋಟೋದಲ್ಲಿ ನಿಂತಿರುವ ಮಹಿಳೆ, ಜಾರ್ಜ್ ಸೊರೊಸ್ ಅವರ ಪತ್ನಿ ಟೊಮಿಕೊ ಬೋಲ್ಟನ್ ಎಂದು ನಾವು ಕಂಡುಕೊಂಡಿದ್ದೇವೆ. ಈ ವೈರಲ್ ಚಿತ್ರವು 2012 ರಲ್ಲಿ ಅವರು ನಿಶ್ಚಿತಾರ್ಥ ಮಾಡಿಕೊಂಡಾಗ ಸಂದರ್ಭದ್ದಾಗಿದೆ ಮತ್ತು ಈ ದಂಪತಿಗಳು 2013 ರಲ್ಲಿ ವಿವಾಹವಾದರು.

ತಮಿಕೊ ಬೋಲ್ಟನ್ ಜಪಾನಿನ ಅಮೆರಿಕನ್. ಅವರು ಪ್ರಸ್ತುತ ಜಾರ್ಜ್ ಸೊರೊಸ್‌ನ ಓಪನ್ ಸೊಸೈಟಿ ಫೌಂಡೇಶನ್‌ನ ಮಂಡಳಿಯ ಸದಸ್ಯರಾಗಿದ್ದಾರೆ. ಬೋಲ್ಟನ್ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಡಾ. ಮನಮೋಹನ್ ಸಿಂಗ್ ಪುತ್ರಿ ಕುರಿತು:

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಮೂವರು ಪುತ್ರಿಯರಿದ್ದಾರೆ: ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್. ಇದರಲ್ಲಿ ಮೊದಲನೆಯವರಾದ ಉಪಿಂದರ್ ಸಿಂಗ್‌ ಇತಿಹಾಸಕಾರರಾಗಿದ್ದು ಅಶೋಕ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ಪ್ರಾಧ್ಯಾಪಕಿ ಮತ್ತು ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ ಮತ್ತು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದರು. 

ಎರಡನೆಯ ಪುತ್ರಿ ದಮನ್ ಸಿಂಗ್ ಅವರು ಬರಹಗಾರ್ತಿಯಾಗಿದ್ದಾರೆ. ಮೂರನೆಯ ಮಗಳು ಅಮೃತ್ ಸಿಂಗ್ ಅವರು ಜಾರ್ಜ್ ಸೊರೊಸ್ ಅವರ ಓಪನ್ ಸೊಸೈಟಿ ಫೌಂಡೇಶನ್ಸ್‌ನಲ್ಲಿ ಓಪನ್ ಸೊಸೈಟಿ ಜಸ್ಟೀಸ್ ಇನಿಶಿಯೇಟಿವ್ (OSJI) ನಲ್ಲಿ ಮಾನವ ಹಕ್ಕುಗಳ ವಕೀಲೆಯಾಗಿ ಕೆಲಸ ಮಾಡಿದ್ದಾರೆ. 

ಆದ್ದರಿಂದ ವೈರಲ್ ಆಗುತ್ತಿರುವ ಪೋಟೋದಲ್ಲಿರುವ ಮಹಿಳೆ ಅಮೇರಿಕನ್ ಉದ್ಯಮಿ ಜಾರ್ಜ್ ಸೊರೊಸ್ ಅವರ ಪತ್ನಿ ಟೊಮಿಕೊ ಬೋಲ್ಟನ್ ಆಗಿದ್ದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಪುತ್ರಿಯಲ್ಲ.


ಇದನ್ನು ಓದಿ: NEET ಹಗರಣದ ಆರೋಪಿಗಳನ್ನು ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಬಂಧಿಸಿದ್ದಾರೆ ಎಂಬುದು ಸುಳ್ಳು


ವೀಡಿಯೋ ನೋಡಿ: ಜನ್‌ಧನ್‌ ಯೋಜನೆಯಲ್ಲಿ 30 ಲಕ್ಷದವರೆಗೆ ಸಾಲ, ಸಬ್ಸಿಡಿ ಸಿಗಲಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *