Fact Check: ‘ರಿಕಿ’ ಎಂಬ ಫ್ರೆಂಚ್ ಚಲನಚಿತ್ರದ ತುಣುಕನ್ನು ಜೋಡಿ ರೆಕ್ಕೆಗಳೊಂದಿಗೆ ಮಗುವೊಂದು ಜನಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ರಿಕಿ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡುತ್ತಿದ್ದು, ಈ ವೀಡಿಯೋದಲ್ಲಿ ಮಗುವೊಂದಕ್ಕೆ ಹುಟ್ಟಿನಿಂದಲೇ ಬೆನ್ನಿನ ಹಿಂದೆ ರೆಕ್ಕೆಗಳು ಮೂಡಿ ಬಂದಿದ್ದು, ಈ ಕುರಿತು ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಈ ರೆಕ್ಕೆಯ ಮೂಳೆಗಳು ಮಗುವಿನ ಬೆನ್ನು ಮೂಳೆಯ ಜೊತೆಗೆ ಜೋಡಣೆಯಾಗಿದೆ ಎಂದು ಕಂಡು ಬಂದಿದೆ. ನಂತರ ಮಗು ಬೆಳೆದಂತೆ ಇದರ ರೆಕ್ಕೆಯೂ ಬೆಳವಣಿಗೆಯಾಗಿ ಹಾರುವ ಶಕ್ತಿಯನ್ನು ಮಗು ಪಡೆದಿದೆ” ಎಂದು ಪ್ರತಿಪಾದಿಸಲಾಗುತ್ತಿದೆ. ಇದು ಈಶ್ವರನ ಅಥವಾ ಅಲ್ಲಾನ ಶಕ್ತಿ ಎಂದು ಹಂಚಿಕೊಳ್ಳಲಾಗುತ್ತಿದೆ(ಇಲ್ಲಿ ಮತ್ತು ಇಲ್ಲಿ).

ಫ್ಯಾಕ್ಟ್‌ಚೆಕ್: ಈ ವೀಡಿಯೋ ಫ್ರಾಂಕೋಯಿಸ್ ಓಝೋನ್ ನಿರ್ದೇಶಿಸಿದ 2009 ರಲ್ಲಿ ಬಿಡುಗಡೆಯಾದ ರಿಕಿ ಎಂಬ ಫ್ರೆಂಚ್ ಫ್ಯಾಂಟಸಿ ಚಲನಚಿತ್ರವಾಗಿದ್ದು, ಸಿನಿಮಾದ ತುಣುಕನ್ನೇ ಅನೇಕರು ಇದು ನಿಜವಾಗಿಯೂ ನಡೆದಿರುವ ಘಟನೆ ಎಂದು ಹಂಚಿಕೊಳ್ಳುತ್ತಿದ್ದಾರೆ.

ಸಿನಿಮಾದ ಸಾರಂಶ:

ಕೇಟೀ (ಅಲೆಕ್ಸಾಂಡ್ರಾ ಲ್ಯಾಮಿ) ತನ್ನ ಮಗಳು ಲೀಸಾ (ಮೆಲುಸಿನ್ ಮೇಯನ್ಸ್) ಜೊತೆಗೆ ಪೂರ್ವ ಪ್ಯಾರಿಸ್‌ನಲ್ಲಿರುವ ವಸತಿಗೃಹದಲ್ಲಿ ವಾಸಿಸುತ್ತಿರುತ್ತಾಳೆ. ಕಾಸ್ಮೆಟಿಕ್ಸ್ ಫ್ಯಾಕ್ಟರಿಯಲ್ಲಿ ಅವಳ ಸ್ಪ್ಯಾನಿಷ್ ಸಹ-ಕೆಲಸಗಾರನಾದ ಪ್ಯಾಕೊ (ಸೆರ್ಗಿ ಲೋಪೆಜ್) ಳನ್ನು ಕೇಟೀ ಪ್ರೀತಿಸಿದಾಗ ಅವರ ಕುಟುಂಬವು ಅಡ್ಡಿಪಡಿಸುತ್ತದೆ. ಪ್ಯಾಕೊ ಸ್ಥಳಾಂತರಗೊಂಡ ನಂತರ ಕೇಟೀಗೆ ಒಂದು ಮಗು ಜನಿಸುತ್ತದೆ. ಅವರು ರಿಕಿ (ಆರ್ಥರ್ ಪೇರೆಟ್) ಎಂದು ಹೆಸರಿಡುತ್ತಾರೆ. ಈ ಮಗುವು ಅವರ ಆತಂಕದ ಮೂಲವಾಗುತ್ತದೆ. ರಿಕಿಯ ಭುಜಗಳಲ್ಲಿ ರೆಕ್ಕೆಗಳು ಬೆಳೆಯಲು ಪ್ರಾರಂಭಿಸುತ್ತವೆ. ಮಗು ಕೂಡ ಹಾರಲು ಪ್ರಾರಂಭಿಸುತ್ತದೆ. ಅವನು ಸಾರ್ವಜನಿಕ ಕುತೂಹಲಕ್ಕೆ ಒಳಗಾಗುತ್ತಾನೆ ಮತ್ತು ಕುಟುಂಬವನ್ನು ಅಸ್ತವ್ಯಸ್ತಗೊಳಿಸುತ್ತಾನೆ. 

ಪೋಷಕರು ರಿಕಿಯ ಸುರಕ್ಷತೆಗಾಗಿ ಭಯಪಡುತ್ತಾರೆ. ಕೇಟೀ ಮತ್ತು ಪ್ಯಾಕೊ ರಿಕಿಯ ಮೇಲೆ ಹಗ್ಗವನ್ನು ಕಟ್ಟಿ ನಿಯಂತ್ರಿಸುತ್ತಿರುತ್ತಾರೆ, ಆದ್ದರಿಂದ ಅವನು ಹಾರಿಹೋಗಲು ಸಾಧ್ಯವಾಗುವುದಿಲ್ಲ. ಒಂದು ದಿನ ರಿಕಿಯನ್ನು ಸಾರ್ವಜನಿಕವಾಗಿ ಪೋಷಕರು ಹಾರಲು ಬಿಡುತ್ತಾರೆ ರಿಕಿ ಹಾರುತ್ತಿರುವುದನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಾರೆ. ಆದರೆ ಕೇಟೀ ಆಕಸ್ಮಿಕವಾಗಿ ಹಗ್ಗವನ್ನು ಬಿಟ್ಟಾಗ ರಿಕಿ ಹಾರಿಹೋಗುತ್ತಾನೆ ಮತ್ತು ಅವರು ಅವನನ್ನು ಹಿಂಬಾಲಿಸಿದರೂ ಅವನು ಹಿಂದಿರುಗುವುದಿಲ್ಲ. ಅನೇಕ ದಿನಗಳು ಕಾಯ್ದರೂ ರಿಕಿ ಬರದಿರುವುದನ್ನು ನೋಡಿ ಕೇಟೀ ಮತ್ತು ಪ್ಯಾಕೊ ರಿಕಿ ಸತ್ತನೆಂದು ಭಾವಿಸುತ್ತಾರೆ. ಒಂದು ದಿನ ಕೇಟಿ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ ರಿಕಿ ಮತ್ತೆ ಪ್ರತ್ಯಕ್ಷನಾಗುತ್ತಾನೆ. ತನ್ನ ತಾಯಿಗೆ ಕಾನಿಸಿಕೊಂಡ ಬಳಿಕ ಮತ್ತೆ ಆಕಾಶಕ್ಕೆ ಹಾರಿ ಹೋಗುತ್ತಾನೆ. 

ಈ ಸಂಪೂರ್ಣ ಸಿನಿಮಾ ಯೂಟೂಬ್ ನಲ್ಲಿ ಲಭ್ಯವಿದ್ದು ನೀವದನ್ನು ಇಲ್ಲಿ ನೋಡಬಹುದು.

(11) Ricky (2009) HD -| Full Movie in French with English Subtitles – YouTube

ಆದ್ದರಿಂದ ಮಗುವೊಂದಕ್ಕೆ ರೆಕ್ಕೆ ಮೂಡಿ ಬಂದಿದೆ ಎಂಬ ಪ್ರತಿಪಾದನೆ ಸುಳ್ಳು. ಇದು ರಿಕಿ ಎಂಬ ಸಿನಿಮಾ ಒಂದರ ವೀಡಿಯೋ ತುಣುಕು.


ಇದನ್ನು ಓದಿ: ಸಂಸತ್‌ನಲ್ಲಿ ಮಹುವಾ ಮೊಯಿತ್ರಾ, ಸಯೋನಿ ಘೋಷ್ ನಿದ್ದೆ ಮಾಡಿದರು ಎಂಬುದು ಎಡಿಟೆಡ್‌ ವಿಡಿಯೋ


ವೀಡಿಯೋ ನೋಡಿ: 2024ರಲ್ಲಿ 9,60,000 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *