ಇತ್ತೀಚೆಗೆ ಮುಸ್ಲಿಂ ಲೀಗ್ ಕಚೇರಿಯೊಂದರ ಮುಂದೆ ಯುವಕರು ಹಸಿರು ಜರ್ಸಿ ತೊಟ್ಟು ಮಲಯಾಳಂ ನಲ್ಲಿ ಹಾಡುವ ವೀಡಿಯೋ ಒಂದು ವೈರಲ್ ಆಗಿದ್ದು, ಪಾಕಿಸ್ತಾನದ ಜರ್ಸಿ ಹಾಕಿ ಕೇರಳ ಮುಸ್ಲಿಮರು ಸಂಭ್ರಮಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಪ್ರೋ. ಸುಧನಂಶು ತ್ರಿವೇದಿ ಎಂಬುವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ” ಇಸ್ಲಾಮಾಬಾದ್ ಅಲ್ಲ, ಪೇಶಾವರದಲ್ಲ!! ಕೇರಳದ ಕಾಸರಗೋಡಿನಲ್ಲಿ ಮುಸ್ಲಿಂ ಲೀಗ್ ಕಛೇರಿ ಉದ್ಘಾಟನೆಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿಯನ್ನು ಧರಿಸಿ ಸಂಭ್ರಮಿಸುತ್ತಿರುವ ಶಾಂತಿಯುತ ಜನರು.!” ಎಂದು ಹಂಚಿಕೊಂಡಿದ್ದಾರೆ.
Not in Islamabad, Not in Peshawar!!
In Kasargod, Kerala,
Peaceful people are celebrating the opening of the Muslim League office by wearing like as Pakistan's cricket team jerseys.!!🤬
— Prof Sudhanshu (@Sudanshutrivedi) July 1, 2024
ಈ ವೀಡಿಯೋ ತುಣುಕು ವಾಟ್ಸಾಪ್ನಲ್ಲಿ ಇದೇ ರೀತಿಯ ಹೇಳಿಕೆಯೊಂದಿಗೆ ಸಾಕಷ್ಟು ಹಂಚಿಕೊಳ್ಳಳಾಗುತ್ತಿದೆ.
ಫ್ಯಾಕ್ಟ್ಚೆಕ್: ವೈರಲ್ ವಿಡಿಯೋ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಚೇರಿ ಮುಂದೆ ಯುವ ಸಂಘಟನೆಯವರು ಆರಂಗಡಿ ಎಂಬ ಟೀ ಶರ್ಟ್ ಧರಿಸಿದ್ದಾರೆ. ಅದು ಪಾಕ್ ಕ್ರಿಕೆಟ್ ಟೀಂ ಜೆರ್ಸಿಯಲ್ಲ. ಆರಂಗಡಿ ಎಂಬುದು ಕಾಸರಗೋಡಿನ ಒಂದು ಪ್ರಮುಖ ಗ್ರಾಮವಾಗಿದೆ.
ಪೇಸ್ಬುಕ್ನಲ್ಲಿ ಐಯುಎಂಎಲ್ ಆರಂಗಡಿ(IUML Arangadi) ಎಂಬ ಪುಟದಲ್ಲಿ ಈ ಎಲ್ಲಾ ವಿಡಿಯೋಗಳು ಲಭ್ಯವಿದ್ದು. ಇಲ್ಲಿನ ಚಿತ್ರಗಳಲ್ಲಿ ಯುವಕರು ಮತ್ತು ಬಾಲಕರ ಜರ್ಸಿಯ ಮೇಲೆ ಆರಂಗಡಿ ಎಂದು ಊರಿನ ಹೆಸರು ಬರೆದಿರುವುದನ್ನು ಕಾಣಬಹುದೇ ಹೊರತು. ಪಾಕಿಸ್ತಾನದ ಕ್ರಿಕೆಟ್ ತಂಡದ ಜರ್ಸಿ ಅಲ್ಲ.
ವೈರಲ್ ಆಗುತ್ತಿರುವ ವೀಡಿಯೋ ಮತ್ತು ಗುಂಪಿನ ಪೋಟೋ ಸಹ ಇದೇ ಪುಟದಲ್ಲಿ ಲಭ್ಯವಿದ್ದು, ಟೀ ಶರ್ಟ್ ಮೇಲೆ ಬರೆದಿರುವ ಬರಹವನ್ನು ನೀವು ಗಮನಿಸಬಹುದು.
ಆದ್ದರಿಂದ ಕೇರಳದ ಕಾಸರಗೋಡಿನಲ್ಲಿ ಮುಸ್ಲಿಂ ಯುವಕರು ಪಾಕಿಸ್ತಾನ ಕ್ರಿಕೆಟ್ ತಂಡದ ಜರ್ಸಿಯನ್ನು ಧರಿಸಿ ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು.
ಇದನ್ನು ಓದಿ: 2007ರ T-20 ವಿಶ್ವಕಪ್ ವಿಜೇತ ಭಾರತ ತಂಡವನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಭೇಟಿ ಮಾಡಿಲ್ಲವೆಂಬುದು ಸುಳ್ಳು
ವೀಡಿಯೋ ನೋಡಿ: ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್ ಮೋದಿ ಘೋಷಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ