Fact Check: ನೀಟ್ (ಯುಜಿ) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಮುಸ್ಲಿಮರನ್ನು ಮಾತ್ರ ಬಂಧಿಸಲಾಗಿದೆ ಎಂಬುದು ಸುಳ್ಳು

ನೀಟ್ (ಯುಜಿ)

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿಂದೆ ‘ಎಕ್ಸಾಮ್ ಜಿಹಾದ್’ ಪಿತೂರಿ ಇದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಿಬಿಐ ಬಂಧಿಸಿರುವ ಮೂವರು ಮುಸ್ಲಿಂ ವ್ಯಕ್ತಿಗಳ ಫೋಟೋಗಳನ್ನು ಹೊಂದಿರುವ ಪೋಸ್ಟ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್: ಈ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಹುಡುಕಾಟವನ್ನು ನಡೆಸಿದಾಗ, ಈ ಮೂವರು ಮುಸ್ಲಿಂ ವ್ಯಕ್ತಿಗಳನ್ನು ಸಿಬಿಐ ಬಂಧಿಸಿರುವ ಬಗ್ಗೆ ಹಲವಾರು ಸುದ್ದಿ ವರದಿಗಳು (ಇಲ್ಲಿಇಲ್ಲಿ ಮತ್ತು ಇಲ್ಲಿ) ನಮಗೆ ಲಭ್ಯವಾಗಿವೆ.

ಪೋಟೋದಲ್ಲಿರುವ ವ್ಯಕ್ತಿಗಳಲ್ಲಿ ಒಬ್ಬರು, ಜಮಾಲುದ್ದೀನ್ ಅನ್ಸಾರಿ ಎಂಬ ಪತ್ರಕರ್ತ; ಎರಡನೆಯವರು, ಜಾರ್ಖಂಡ್‌ನ ಹಜಾರಿಬಾಗ್‌ನ ಒಯಾಸಿಸ್ ಶಾಲೆಯ ಪ್ರಾಂಶುಪಾಲ ಎಹ್ಸಾನುಲ್ ಹಕ್; ಮೂರನೆಯವರು ಅದೇ ಶಾಲೆಯ ಉಪ ಪ್ರಾಂಶುಪಾಲ ಇಮ್ತಿಯಾಜ್ ಆಲಂ.

ಅದೇ ಸುದ್ದಿ ವರದಿಗಳ ಮೂಲಕ, ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈ ಹಿಂದೆ ಗುಜರಾತ್‌ನಲ್ಲಿ ಮುಸ್ಲಿಮೇತರರಾದ ಇನ್ನೂ ಕೆಲವರನ್ನು ಬಂಧಿಸಿತ್ತು ಎಂದು ನಾವು ತಿಳಿದುಕೊಂಡಿದ್ದೇವೆ. ಇವರಲ್ಲಿ ಜಯ್ ಜಲರಾಮ್ ಶಾಲೆಯ ಪ್ರಾಂಶುಪಾಲ ಪುರುಷೋತ್ತಮ ಶರ್ಮಾ, ಶಿಕ್ಷಕ ತುಷಾರ್ ಭಟ್ ಮತ್ತು ಮಧ್ಯವರ್ತಿ ವಿಭೋರ್ ಆನಂದ್ ಸೇರಿದ್ದಾರೆ.

ಈ ಶಾಲೆಯ ಮಾಲೀಕ ದೀಕ್ಷಿತ್ ಪಟೇಲ್ ಅವರನ್ನೂ ಸಿಬಿಐ ಬಂಧಿಸಿದೆ.

ಈ ಪ್ರಕರಣದ ಎಲ್ಲಾ ಆರೋಪಿಗಳ ಸಂಪೂರ್ಣ ಪಟ್ಟಿಯನ್ನು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಇಲ್ಲಿ ಪ್ರಕಟಿಸಿದೆ. ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳು ಮುಸ್ಲಿಮರು ಮಾತ್ರವಲ್ಲ, ಹಿಂದೂಗಳೂ ಆಗಿದ್ದಾರೆ ಎಂದು ಈ ಪುರಾವೆಗಳು ಸ್ಪಷ್ಟಪಡಿಸುತ್ತವೆ.

ಆದ್ದರಿಂದ, ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಮೂವರು ಮುಸ್ಲಿಂ ಪುರುಷರನ್ನು ಬಂಧಿಸಲಾಗಿದೆ ಎಂಬ ಸುದ್ದಿಯನ್ನು ಸುಳ್ಳು ಮತ್ತು ಕೋಮು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ:  ರಾಹುಲ್ ಗಾಂಧಿ ಸದನದಲ್ಲಿ ಹಿಂದು ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಎಡಿಟ್ ವೀಡಿಯೋ ಹಂಚಿಕೊಂಡ ನಿರ್ಮಲ ಸೀತಾರಾಮನ್


ವೀಡಿಯೋ ನೋಡಿ: ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನರನ್ನು ಜಿಹಾದಿ, ಅತ್ಯಾಚಾರಿ ಎಂದು ಘೋಷಿಸಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *