ಹತ್ರಾಸ್‌ನ ಧಾರ್ಮಿಕ ಸಭೆಯಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 121 ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಫುಲ್ರಾಯ್ ಗ್ರಾಮದಲ್ಲಿ ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಅಲಿಯಾಸ್ ನಾರಾಯಣ್ ಸಕರ್ ಹರಿ “ಸತ್ಸಂಗ” ಎಂಬ ಧಾರ್ಮಿಕ ಸಮಾವೇಶವನ್ನು ನಡೆಸಿದ್ದರು. ಈ ದುರಂತ ಸುದ್ದಿ ಹೊರಬಂದ ತಕ್ಷಣ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹತ್ರಾಸ್ ಕಾಲ್ತುಳಿತದ ಕಾರ್ಯಕ್ರಮದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
ಸುದ್ದಿ ಸಂಸ್ಥೆ ಟೈಮ್ಸ್ ನೌ ಈ ವಿಡಿಯೋವನ್ನು ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು, “ಕಾಲ್ತುಳಿತಕ್ಕೆ ಕೆಲವೇ ಕ್ಷಣಗಳ ಮೊದಲು, ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ: ನಿನ್ನೆ (ಜುಲೈ 2) ಕಾಲ್ತುಳಿತ ಸಂಭವಿಸಿದ ಹತ್ರಾಸ್‌ನ ಮೈದಾನದಲ್ಲಿ ಭಕ್ತರ ಸಮುದ್ರ ಕಂಡುಬಂದಿದೆ, ಇದರಲ್ಲಿ 121 ಜನರು ಸಾವನ್ನಪ್ಪಿದ್ದಾರೆ- #WATCH” ಎಂದು ಶೀರ್ಷಿಕೆ ನೀಡಿದೆ. ನಂತರ ಪೋಸ್ಟ್ ಅನ್ನು ಅಳಿಸಲಾಗಿದೆ, ಆದಾಗ್ಯೂ, ಅದರ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.ಅನೇಕ ಎಕ್ಸ್ ಬಳಕೆದಾರರು ಹತ್ರಾಸ್ ದುರಂತದ ಕಾಲ್ತುಳಿತಕ್ಕೆ ಹೋಲಿಸಿ ಧೀರ್ಘವಾದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಇದಲ್ಲದೆ, ಪರದೆಯ ಮಧ್ಯದಲ್ಲಿ “ಟ್ರಾವೆಲರ್ ಸಚಿನ್”ನ ವಾಟರ್ ಮಾರ್ಕ್ ಅನ್ನು ಸಹ ನಾವು ಗಮನಿಸಿದ್ದೇವೆ.ಈ ಸುಳಿವಿನಿಂದ, ನಾವು ಗೂಗಲ್‌ನಲ್ಲಿ “ಟ್ರಾವೆಲರ್ ಸಚಿನ್” ಎಂದು ಹುಡುಕಿದಾಗ ಅದೇ ಹೆಸರಿನ ಯೂಟ್ಯೂಬ್ ಚಾನೆಲ್ ಲಭ್ಯವಾಗಿದೆ. ನಾವು ಚಾನೆಲ್ ಮೂಲಕ ವೈರಲ್ ವೀಡಿಯೋ ಹುಡುಕಿದಾಗ, ಫೆಬ್ರವರಿ 9, 2024 ರಂದು “ಮಂಗಲ್ ದಿವಸ್ ರುಪ್ವಾಸ್ ಭರತ್ಪುರ್ ರಾಜಸ್ಥಾನ್” ಎಂಬ ಶೀರ್ಷಿಕೆಯ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ. ನಾರಾಯಣ್ ಸಕರ್ ಹರಿ ಕೆ ಭಜನ್ | ಸತಾಯ ಕಾ ಸಾಥ್ ರಾಜಸ್ಥಾನ”
ನಾವು ವೀಡಿಯೊವನ್ನು ಸ್ಕ್ಯಾನ್ ಮಾಡಿದಾಗ ವೈರಲ್ ತುಣುಕಿನಲ್ಲಿ ಕಂಡುಬರುವ ವೇದಿಕೆ ಮತ್ತು ಟವರ್ ನಲ್ಲಿ ಹೋಲಿಕೆ ಇರುವುದು ಕಾಣಬಹುದು.
ಇದಲ್ಲದೆ, ವೀಡಿಯೊದಲ್ಲಿ ಸುಮಾರು 7 ನಿಮಿಷಗಳ ನಂತರ, ವೈರಲ್ ವೀಡಿಯೋದ ತುಣುಕುಗಳನ್ನು ಕಾಣಬಹುದು.
ಭರತ್ಪುರದಲ್ಲಿ ನಾರಾಯಣ್ ಸಕರ್ ಹರಿ ಅವರ ಕಾರ್ಯಕ್ರಮದ ವೀಡಿಯೊವನ್ನು ಹೊಂದಿರುವ 2024 ರ ಫೆಬ್ರವರಿಯಿಂದ ‘‘अजय देवगन का भक्त नाहर न्यूज’’ ಎಂಬ ಫೇಸ್‌ಬುಕ್ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ.
ಫೇಸ್‌ಬುಕ್ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳನ್ನು ವೈರಲ್ ತುಣುಕಿನೊಂದಿಗೆ ಹೋಲಿಸಿದ ನಂತರ, ಅವೆರಡೂ ಒಂದೇ ಘಟನೆಯನ್ನು ತೋರಿಸುತ್ತವೆ ಎಂದು ನಾವು ತೀರ್ಮಾನಿಸಬಹುದು.
ವೀಡಿಯೊದ ಬಗ್ಗೆ ಇತರ ವಿವರಗಳನ್ನು ಕಂಡುಹಿಡಿಯಲು ನಮಗೆ ಸ್ವತಂತ್ರವಾಗಿ ಸಾಧ್ಯವಾಗಲಿಲ್ಲ. ಆದಾಗ್ಯೂ, ಇದು ಕನಿಷ್ಠ ಫೆಬ್ರವರಿ, 2024 ರ ಹಿಂದಿನದು ಮತ್ತು ರಾಜಸ್ಥಾನದ ಕಾರ್ಯಕ್ರಮದ್ದಾಗಿದ್ದು ಇತ್ತೀಚಿನ ಹತ್ರಾಸ್ ಕಾಲ್ತುಳಿತಕ್ಕೆ ಸಂಬಂಧಿಸಿಲ್ಲ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಅಯೋಧ್ಯೆಯ ರಾಮಪಥ ರಸ್ತೆಯ ಗುಂಡಿಯೊಂದಕ್ಕೆ ಮಹಿಳೆ ಬಿದ್ದಿದ್ದಾರೆ ಎಂದು 2022ರ ಬ್ರೆಜಿಲ್‌ನ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ
ವೀಡಿಯೋ ನೋಡಿ: ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕು ತಪ್ಪಿಸುವಂತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.