Fact Check: ನರೇಶ್ ಅಗರ್ವಾಲ್ ಅವರು ಬಿಜೆಪಿ ಸಂಸದರಾಗಿದ್ದಾಗ ಹಿಂದೂ ದೇವರುಗಳನ್ನು ಮದ್ಯಕ್ಕೆ ಹೋಲಿಸಿದ್ದಾರೆ ಎಂಬುದು ಸುಳ್ಳು

ನರೇಶ್ ಅಗರ್ವಾಲ್

ಮಾಜಿ ಸಂಸದ ನರೇಶ್ ಅಗರ್ವಾಲ್ ಅವರು ಹಿಂದೂ ದೇವರು ಮತ್ತು ದೇವತೆಗಳನ್ನು ಮದ್ಯಕ್ಕೆ ಹೋಲಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಅಗರ್ವಾಲ್ ವಿಸ್ಕಿಯನ್ನು ವಿಷ್ಣುವಿಗೆ, ರಮ್ ಅನ್ನು ಭಗವಾನ್ ರಾಮನಿಗೆ, ಜಿನ್ ಅನ್ನು ಸೀತಾ ದೇವಿಗೆ ಮತ್ತು ಹನುಮಂತನನ್ನು ಭಾರತೀಯ ದೇಶೀಯ ಮದ್ಯಕ್ಕೆ ಹೋಲಿಸುವುದನ್ನು ಕೇಳಬಹುದು.

ಈ ವೀಡಿಯೊವನ್ನು ಹಂಚಿಕೊಳ್ಳುವವರು ಅಗರ್ವಾಲ್ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾಗಿದ್ದಾಗ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾರೆ.

2017ರಲ್ಲಿ ನರೇಶ್ ಅಗರ್ವಾಲ್ ಸಮಾಜವಾದಿ ಪಕ್ಷದಲ್ಲಿದ್ದಾಗ ಈ ವಿಡಿಯೋ ವೈರಲ್ ಆಗಿತ್ತು.

ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಇದೇ ರೀತಿಯ ಪೋಸ್ಟ್ ಗಳನ್ನು ಹಂಚಿಕೊಂಡಿರುವ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್: ಆರು ವರ್ಷಗಳಷ್ಟು ಹಳೆಯದಾದ ಈ ವಿಡಿಯೋದಲ್ಲಿ ಅಗರ್ವಾಲ್ ಅವರು ಸಮಾಜವಾದಿ ಪಕ್ಷದ ಸಂಸದರಾಗಿದ್ದಾಗ ಈ ಹೇಳಿಕೆಗಳನ್ನು ನೀಡಿದ್ದಾರೆ. ‘ನರೇಶ್ ಅಗರ್ವಾಲ್ ಹಿಂದೂ ಗಾಡ್ಸ್ ಆಲ್ಕೋಹಾಲ್’ ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು, ವೈರಲ್ ವೀಡಿಯೊಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನಾವು ಹುಡುಕಿದಾಗ, 2017ರ ಜುಲೈ 19ರಂದು ಪ್ರಕಟವಾದ ಹಿಂದೂಸ್ತಾನ್ ಟೈಮ್ಸ್ ನ ವರದಿ ಲಭ್ಯವಾಗಿದೆ.

ಅದರ ಶೀರ್ಷಿಕೆಯು ಅಗರ್ವಾಲ್ ಅವರನ್ನು ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಎಂದು ಗುರುತಿಸಿದೆ ಮತ್ತು “ವಿವಾದಾತ್ಮಕ ಹೇಳಿಕೆಗಳನ್ನು” ನಂತರ ತೆಗೆದುಹಾಕಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯನ್ನು 2017 ರಲ್ಲಿ ಪ್ರಕಟಿಸಲಾಗಿದೆ.

2017ರಲ್ಲಿ ನರೇಶ್ ಅಗರ್ವಾಲ್ ಸಮಾಜವಾದಿ ಪಕ್ಷದಲ್ಲಿದ್ದಾಗ ಈ ವಿಡಿಯೋ ವೈರಲ್ ಆಗಿತ್ತು.

ಎನ್ಡಿಟಿವಿ,ದಿ ಹಿಂದೂಮತ್ತುಇಂಡಿಯಾ ಟುಡೇಯಂತಹ ಇತರ ಸುದ್ದಿ ವರದಿಗಳು ಜುಲೈ 2017 ರಲ್ಲಿ ಇದೇ ರೀತಿಯ ವರದಿಗಳನ್ನು ಪ್ರಕಟಿಸಿದ್ದವು, ಅವರನ್ನು ಎಸ್ಪಿ ನಾಯಕ ಎಂದು ಗುರುತಿಸಲಾಗಿದೆ, ಅಗರ್ವಾಲ್ ಕ್ಷಮೆಯಾಚಿಸಿದ ನಂತರ ಸದನವು ತನ್ನ ಚರ್ಚೆಯನ್ನು ಮುಂದುವರಿಸಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಂಸದ್ ಟಿವಿಯ ವೆರಿಫೈಡ್ ಚಾನೆಲ್‌ನಲ್ಲಿ ನಾವು ವೀಡಿಯೊವನ್ನು ನೋಡಿದ್ದೇವೆ, ಅಲ್ಲಿ ಇತರ ಸಂಸದರು ಅಗರ್ವಾಲ್ ಅವರ ಹೇಳಿಕೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಅವರ ಹೇಳಿಕೆಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದರು.

ನರೇಶ್ ಅಗರ್ವಾಲ್ ಕುರಿತು ಇನ್ನಷ್ಟು ಮಾಹಿತಿ:

ಜಯಾ ಬಚ್ಚನ್ ಅವರಿಗೆ ರಾಜ್ಯಸಭಾ ಟಿಕೆಟ್ ನಿರಾಕರಿಸಿದ ನಂತರ 2018 ರ ಮಾರ್ಚ್‌ನಲ್ಲಿ ಸಮಾಜವಾದಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ್ದರು ಎಂದು ದಿ ಕ್ವಿಂಟ್ ವರದಿ ಮಾಡಿದೆ.

2017ರಲ್ಲಿ ನರೇಶ್ ಅಗರ್ವಾಲ್ ಸಮಾಜವಾದಿ ಪಕ್ಷದಲ್ಲಿದ್ದಾಗ ಈ ವಿಡಿಯೋ ವೈರಲ್ ಆಗಿತ್ತು.

                                     ಅಗರ್ವಾಲ್ ಮಾರ್ಚ್ 2018 ರಲ್ಲಿ ಬಿಜೆಪಿ ಸೇರಿದ ಸಂದರ್ಭದ ಚಿತ್ರ.

ಪಕ್ಷಕ್ಕೆ ಸೇರಿದ ಸ್ವಲ್ಪ ಸಮಯದ ನಂತರ, ಅವರು ಜಯಾ ಬಚ್ಚನ್ ಅವರನ್ನು “ಚಲನಚಿತ್ರ ನಟಿ ಮತ್ತು ನೃತ್ಯಗಾರ್ತಿ” ಎಂದು ಕರೆಯುವ ಮೂಲಕ ಅವರ ಕುರಿತು ಸಹ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳ ಕೋಲಾಹಲದ ನಂತರ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದರು.

ಆದ್ದರಿಂದ ನರೇಶ್ ಅಗರ್ವಾಲ್ ಅವರು ಬಿಜೆಪಿ ಸಂಸದರಾಗಿದ್ದಾಗ ಹಿಂದೂ ದೇವರುಗಳನ್ನು ಮದ್ಯಕ್ಕೆ ಹೋಲಿಸಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಅವರ ಹಳೆಯ ವೀಡಿಯೊ ವೈರಲ್ ಆಗಿದೆ.

ಇದನ್ನು ಓದಿ: T20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಬಾಂಗ್ಲಾದೇಶದ ಅಭಿಮಾನಿಗಳು ಬೇಸರಗೊಂಡರು ಎಂಬುದು ಹಳೆಯ ವಿಡಿಯೋ


ವೀಡಿಯೋ ನೋಡಿ: ಬೆಂಗಳೂರಿನಲ್ಲಿ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಸ್ಥಾಪಿಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *