ಮುಂಗೈಗೆ ರಕ್ಷಾಸೂತ್ರದಂತಹ ದಾರ ಮತ್ತು ಲೋಹದ ಬ್ರಾಸೈಟ್ ಧರಿಸುವುದರಿಂದ ಪಾರ್ಶ್ವವಾಯುವನ್ನು ತಡೆಯಬಹುದು ಎಂದು ಯುಕೆ ಅಧ್ಯಯನವು ಕಂಡುಹಿಡಿದಿದೆ ಎಂದು ವ್ಯಕ್ತಿಯೊಬ್ಬರು ಹೇಳಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ಯುನೈಟೆಡ್ ಕಿಂಗ್‌ಡಮ್ ನಡೆಸಿದ ಅಧ್ಯಯನದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳಲಾಗಿದೆ ಮತ್ತು ಈ ಸಂಶೋಧನೆಯನ್ನು ಹಿಂದೂ ಪುರಾಣಗಳಲ್ಲಿ ಮತ್ತು ನೂರಾರು ವರ್ಷಗಳ ಹಿಂದೆಯೇ ನಮ್ಮ ಋಷಿ ಮುನಿಗಳು, ಸಾಧು ಸಂತರು ಕಂಡುಕೊಂಡಿದ್ದರು, ಎಂದು ಅಂಗೈನ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಧರಿಸಲು ಶಿಫಾರಸು ಮಾಡಲಾಗುತ್ತಿದೆ. ಯುಕೆ ಅಧ್ಯಯನವು ಈಗ (ಇಲ್ಲಿ) ಪ್ರತಿಪಾದಿಸುತ್ತಿರುವುದನ್ನು ಹಿಂದೂ ಪುರಾಣಗಳು ಬಹಳ ಹಿಂದೆಯೇ ಪ್ರತಿಪಾದಿಸುತ್ತವೆ ಎಂದು ಹೇಳಲಾಗಿದೆ.
ಫ್ಯಾಕ್ಟ್‌ಚೆಕ್: ವೈರಲ್ ವೀಡಿಯೊದಲ್ಲಿ ತೋರಿಸಲಾದ ಮೂಲ ದಾಖಲೆಯನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಅದು ವಾಸ್ತವವಾಗಿ ತಾಮ್ರದ ಕಡಗಗಳು ಮತ್ತು ಸಂಧಿವಾತವನ್ನು ಚರ್ಚಿಸುತ್ತದೆ. ವೀಡಿಯೊದಿಂದ ಶೀರ್ಷಿಕೆ(ಬೈಲೈನ್) ಮತ್ತು ದಿನಾಂಕವನ್ನು ಸುಳಿವುಗಳಾಗಿ ಬಳಸಿಕೊಂಡು, ನಾವು ಸಂಬಂಧಿತ ಕೀವರ್ಡ್‌ಗಳೊಂದಿಗೆ ಅಂತರ್ಜಾಲದಲ್ಲಿ ಹುಡುಕಿದಾಗ. ಇದು ಏಪ್ರಿಲ್ 16, 2024 ರಂದು ‘ಮೆಡಿಕಲ್ ನ್ಯೂಸ್ ಟುಡೇ’ ನಲ್ಲಿ ಪ್ರಕಟವಾದ ಮೂಲ ವರದಿಗೆ ನಮ್ಮನ್ನು ಕರೆದೊಯ್ಯಿತು, ಅದು ದಿನಾಂಕ ಮತ್ತು ಶೀರ್ಷಿಕೆಗೆ ಹೊಂದಿಕೆಯಾಗುತ್ತದೆ.
ಆದಾಗ್ಯೂ, ಮೂಲ ವರದಿಯು ಪಾರ್ಶ್ವವಾಯುವನ್ನು ತಡೆಗಟ್ಟಲು ಕೈಗೆ ಕಡಗಗಳು ಧರಿಸಬೇಕು ಎಂದು ಸಾಭೀತು ಪಡಿಸಲು ಈ ಬಗ್ಗೆ ಯಾವುದೇ ಆವಿಷ್ಕಾರವನ್ನು ಉಲ್ಲೇಖಿಸಿಲ್ಲ. ಬದಲಾಗಿ, ಇದು ತಾಮ್ರದ ಕಡಗಗಳು ಮತ್ತು ಸಂಧಿವಾತದ ಮೇಲೆ ಕೇಂದ್ರೀಕರಿಸುತ್ತದೆ, ತಾಮ್ರದ ಕಡಗಗಳನ್ನು ಧರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳುತ್ತದೆ. “ಆಹಾರದಲ್ಲಿನ ತಾಮ್ರವು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮೂಳೆಯ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ ಎಂಬುದಕ್ಕೆ ಪುರಾವೆಗಳಿವೆ. ಆದಾಗ್ಯೂ, ಬ್ರೇಸ್ಲೆಟ್‌ಗಳಿಂದ ತಾಮ್ರದ ಅಂಶ ದೇಹ ಸೇರುತ್ತದೆ ಎಂದು ಬೆಂಬಲಿಸುವ ಪುರಾವೆಗಳ ಕೊರತೆಯಿದೆ.”
ವರದಿಯ ಶೀರ್ಷಿಕೆ ಹೀಗಿದೆ, “ತಾಮ್ರದ ಕಡಗಗಳು ಸಂಧಿವಾತಕ್ಕೆ ಸಹಾಯ ಮಾಡುತ್ತವೆಯೇ?” ಕೈಗೆ ಧಾರ್ಮಿಕ ದಾರವನ್ನು ಧರಿಸಬೇಕು ಎಂದು ಪ್ರಚಾರ ಮಾಡಲು ಪಾರ್ಶ್ವವಾಯು ತಡೆಗಟ್ಟುತ್ತದೆ ಎಂದು ಈ ವರದಿಯ ಶೀರ್ಷಿಕೆಯನ್ನು ಡಿಜಿಟಲ್ ಆಗಿ ಸಂಪಾದಿಸಲಾಗಿದೆ ಎಂದು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಇದಲ್ಲದೆ, ತಾಮ್ರದ ಪರಿಕರಗಳು ಪಾರ್ಶ್ವವಾಯು ಗುಣಪಡಿಸುತ್ತವೆ ಎಂದು ಹೇಳುವ ಯಾವುದೇ ಪ್ರತಿಷ್ಠಿತ ಸಂಸ್ಥೆ ಅಥವಾ ವಿಜ್ಞಾನಿಯ ಅಧ್ಯಯನವನ್ನು ನಾವು ಕಂಡುಕೊಂಡಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಮಣಿಕಟ್ಟಿನ ಪರಿಕರಗಳು(ಕಡಗ ಅಥವಾ ಬ್ರೇಸ್ಲೆಟ್) ಧರಿಸುವುದರಿಂದ ಪಾರ್ಶ್ವವಾಯು ಪರಿಸ್ಥಿತಿಗಳನ್ನು ಗುಣಪಡಿಸುತ್ತವೆ ಎಂದು ಯಾವುದೇ ವರದಿಗಳು ಸೂಚಿಸುವುದಿಲ್ಲ.
ಇದನ್ನು ಓದಿ: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರ ಉದ್ಘಾಟನೆ ಚಿತ್ರವನ್ನು ಎಡಿಟ್ ಮಾಡಿ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ
ವೀಡಿಯೋ ನೋಡಿ: ಯುಟ್ಯೂಬರ್ ಧ್ರುವ್ ರಾಠೀ ಪಾಕಿಸ್ತಾನ ಮೂಲದವರೆಂದು ಸುಳ್ಳು ಹರಡಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ