ಎಲೋನ್ ಮಸ್ಕ್ ಪೋಸ್ಟ್ ಮಾಡಿದ್ದಾರೆನ್ನಲಾದ ಟ್ವೀಟ್ನ ಸ್ಕ್ರೀನ್ಶಾಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದರಲ್ಲಿ ಎಲೋನ್ ಮಸ್ಕ್ ಅವರು ಸ್ನ್ಯಾಪ್ ಚಾಟ್ ಅನ್ನು ಖರೀದಿಸುತ್ತಿದ್ದಾರೆ ಮತ್ತು ಎಲ್ಲಾ ಫಿಲ್ಟರ್ಗಳನ್ನು ಅಳಿಸುತ್ತಿದ್ದಾರೆ ಎಂದು ಪ್ರತಿಪಾಧಿಸಲಾಗುತ್ತಿದೆ.
“ಮುಂದೆ ನಾನು ಸ್ನ್ಯಾಪ್ ಚಾಟ್ ಖರೀದಿಸುತ್ತಿದ್ದೇನೆ ಮತ್ತು ಎಲ್ಲಾ ಫಿಲ್ಟರ್ಗಳನ್ನು ಅಳಿಸುತ್ತಿದ್ದೇನೆ. ಮಹಿಳೆಯರೇ, ವಾಸ್ತವಕ್ಕೆ ಬನ್ನಿ.” ಎಂಬ ಶೀರ್ಷಿಕೆಯೊಂದಿಗೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮೇಲಿನ ಪೋಸ್ಟ್ ಅನ್ನು ಇಲ್ಲಿ ನೋಡಬಹುದು (ಆರ್ಕೈವ್)
ಫ್ಯಾಕ್ಟ್ ಚೆಕ್: ಮೇಲಿನ ಹೇಳಿಕೆಯನ್ನು ಫ್ಯಾಕ್ಟ್ ಚೆಕ್ ನಡೆಸಿದಾಗ ಈ ಪೋಸ್ಟ್ ಸುಳ್ಳು ಎಂದು ತಿಳಿದು ಬಂದಿದೆ. ನಾವು ಈ ಪೋಸ್ಟ್ನಲ್ಲಿರುವ ಮಾಹಿತಿ ಕುರಿತು ಹೆಚ್ಚಿನ ಹುಡುಕಾಟ ನಡೆಸಿದಾಗ, ವೈರಲ್ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಯನ್ನು ನಾವು ಕಂಡುಹಿಡಿಯಲು ಸಾಧ್ಯವಾಗಲಿಲ್ಲ . ಎಲೋನ್ ಮಸ್ಕ್ ಅಂತಹ ಯಾವುದೇ ಹೇಳಿಕೆ ನೀಡಿದ್ದರೆ, ಮುಖ್ಯವಾಹಿನಿಯ ಮಾಧ್ಯಮಗಳು ಅದನ್ನು ವರದಿ ಮಾಡುತ್ತಿದ್ದವು.
ಎಲೋನ್ ಮಸ್ಕ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ಅಂತಹ ಯಾವುದೇ ಟ್ವೀಟ್ ಅನ್ನು ಹೊಂದಿಲ್ಲ. ನಾವು “ಸ್ನ್ಯಾಪ್ಚಾಟ್” ಕೀವರ್ಡ್ಗಳೊಂದಿಗೆ ಟ್ವಿಟರ್ನಲ್ಲಿ ಹುಡುಕಾಟ ನಡೆಸಿದ್ದೇವೆ, ಆದರೆ ಎಲಾನ್ ಅವರು ಸ್ನಾಪ್ಚಾಟ್ ಕುರಿತು ಮಾತನಾಡಿರುವ ಕೊನೆಯ ಟ್ವೀಟ್ ಮೇ 27, 2022 ರ ದಿನಾಂಕವಾಗಿದೆ, ವೈರಲ್ ಸ್ಕ್ರೀನ್ಶಾಟ್ನಲ್ಲಿ ಉಲ್ಲೇಖಿಸಿದಂತೆ ಜುಲೈ 02, 2024ರಲ್ಲಿ ಅಲ್ಲ.
ಪೊಲಿಟಿಟ್ವಿಟ್ ನಲ್ಲಿ ಸಂಗ್ರಹಿಸಿದ ಎಲೋನ್ ಮಸ್ಕ್ ಅವರ ಅಳಿಸಿದ ಪೋಸ್ಟ್ಗಳ ಆರ್ಕೈವ್ ಮಾಡಿದ ಆವೃತ್ತಿಯು ವೈರಲ್ ಹೇಳಿಕೆಯನ್ನು ಬಹಿರಂಗಪಡಿಸಲಿಲ್ಲ.
ಹೀಗಾಗಿ, ಎಲೋನ್ ಮಸ್ ಸ್ನ್ಯಾಪ್ ಚಾಟ್ ಖರಿದಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ನಕಲಿ ಮತ್ತು ಈ ಮಾಹಿತಿ ಸುಳ್ಳು.
ಇದನ್ನು ಓದಿ: ಹೈದರಾಬಾದ್ನ ಸಮಾಧಿಯ ಚಿತ್ರವನ್ನು ಪಾಕಿಸ್ತಾನದಲ್ಲಿ ನೆಕ್ರೋಫಿಲಿಯಾ ಭಯದಲ್ಲಿ ಸಮಾಧಿಗೆ ಬೀಗ ಹಾಕಲಾಗುತ್ತಿದೆ ಎಂದು ಹಂಚಿಕೆ
ವೀಡಿಯೋ ನೋಡಿ: ಜೂನ್ 14, 2024ರ ಒಳಗೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೇ ಹೋದರೆ ಅಮಾನ್ಯವಾಗುತ್ತದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ