“ಈ ವಿಡಿಯೋ ನೋಡಿ ನೀಲಿ ಬಣ್ಣದ ಕುರ್ತಾ, ಪೈಜಾಮ ತೊಟ್ಟಿದ್ದ ಮಗುವಿನ ಕಾಲುಗಳನ್ನು ಹಗ್ಗದಿಂದ ಕಟ್ಟಿ, ತಲೆಕೆಳಗಾಗಿ ನೇತು ಹಾಕಲಾಗಿದೆ. ಮುಸ್ಲಿಂ ಪ್ರಾರ್ಥನೆಯ ಟೋಪಿಯನ್ನು ಧರಿಸಿರುವ ಹಲವಾರು ಹುಡುಗರು ಕುರಾನ್ ಓದುವುದನ್ನು ಕೂಡ ಈ ವಿಡಿಯೋದಲ್ಲಿ ನೀವು ಕಾಣಬಹುದಾಗಿದೆ. ಭಾರತೀಯ ಮದ್ರಾಸದಲ್ಲಿ ಬಾಲಕಿಯನ್ನು ಶಿಕ್ಷಿಸುತ್ತಿರುವ ರೀತಿಯನ್ನು ನೋಡಿದರೆ, ಅಲ್ಲಿನ ಕ್ರೂರತೆ ಏನು ಎಂಬುದು ಅರ್ಥವಾಗುತ್ತದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇದೇ ವಿಡಿಯೋವನ್ನು ಬಳಸಿಕೊಂಡು ಎಕ್ಸ್ ಖಾತೆಯ ಬಳಕೆದಾರರೊಬ್ಬರು, “ಇದು ಯಾವ ಶಾಲೆ ಎಂದು ನಾನು ನಿಮಗೆ ಹೇಳಬೇಕಾಗಿಲ್ಲ. ಆದರೆ ಚಿಕ್ಕ ಹುಡುಗಿಯನ್ನು ಹೀಗೆ ತಲೆಕೆಳಗಾಗಿ ಕಟ್ಟಿ ಹಾಕಿ ಹೊಡೆದಾಗ, ನಮ್ಮ ದೇಶದಲ್ಲಿ ಕಾನೂನಿನ ಭಯವಿದೆಯೇ? ಈ ತಾಲಿಬಾನಿ ಶಿಕ್ಷೆಗೆ ಕಾರಣವೆಂದರೆ, ಅವಳು ಸ್ವರ್ಗೀಯ ಪುಸ್ತಕವನ್ನು ಅರ್ಥಮಾಡಿಕೊಳ್ಳಲಿಲ್ಲ. ಅಂತಹ ಶಾಲೆಗಳನ್ನು ಭಾರತದಾತ್ಯಂತ ಸಂಪೂರ್ಣವಾಗಿ ನಿಷೇಧಿಸಬೇಕು. ಮತ್ತು ಚಿಕ್ಕ ಹುಡುಗಿಯನ್ನು ಈ ರೀತಿ ಹೊಡೆಯಲು ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ಆಗ್ರಹಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಹೀಗೆ ವ್ಯಾಪಕವಾಗ ಹಲವಾರು ಮಂದಿ ವಿವಿಧ ಬರಹಗಳೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್ ಆಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
यह कौन सा स्कूल है मुझे बताने की जरूरत नहीं है
लेकिन एक छोटी बच्ची को इस तरह से पैर बांधकर उल्टा लटकाया जाना क्या हमारे देश में कानून का डर है या नहीं है ?
और इस बच्ची को यह तालिबानी सजा क्यों दी जा रही है इसका कारण है आसमानी किताब जो इसे समझ नहीं आई ।
मुझे लगता है कि ऐसे… pic.twitter.com/IO1UytKbEl— KK NEHRA (@Krishan88701400) July 16, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡಕಲಾಯಿತು. ಈ ವೇಳೆ ನಮಗೆ ಪಾಕಿಸ್ತಾನದ ಸುದ್ದಿ ವಾಹಿನಿಯಾದ ಜಿಯೋ ನ್ಯೂಸ್ ಸುದ್ದಿ 30 ಜೂನ್ 2019ರಂದು “Rawalpindi ‘qari’ who assaulted student sent on 14-day judicial remand” ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ.
ಈ ವರದಿಯ ಪ್ರಕಾರ ಈ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದ್ದು, ಬಾಲಕಿಯನ್ನು ತಲೆಕೆಳಗಾಗಿ ನೇತು ಹಾಕಲಾಗಿದೆ ಎಂಬುದು ಸುಳ್ಳು. ಇಲ್ಲಿ ಸಂತ್ರಸ್ಥರಾಗಿರುವುದು ಬಾಲಕ.. ಮದರಾಸದ ವಿದ್ಯಾರ್ಥಿಯನ್ನು ತಲೆಕೆಳಗಾಗಿ ಕಟ್ಟಿಹಾಕಿ ಹಲ್ಲೆ ನಡೆಸಿದ ಖಾರಿ ನೂರ್ ಮುಹಮ್ಮದ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ ವರದಿಯಲ್ಲಿನ ಆಘಾತಕಾರಿ ಅಂಶ ಎಂದರೆ ಸಂತ್ರಸ್ಥ ಬಾಲಕ ಮತ್ತು ಆತನ ತಂದೆ ಪೊಲೀಸ್ ಠಾಣೆಯಲ್ಲಿ ಖಾರಿ ನಿರಾಪರಾಧಿ, ಇದು ತರಗತಿ ಮುಗಿದ ನಂತರ ತಮಾಷೆಗಾಗಿ ಮಾಡಿದ ವಿಡಿಯೋ ಎಂದು ಹೇಳಿಕೆಯನ್ನು ನೀಡಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಇನ್ನು ಇದೇ ಘಟನೆಗೆ ಸಂಬಂಧ ಪಟ್ಟಂತೆ ಗಲ್ಫ್ ಟುಡೆ ಮತ್ತು ಆರಿ ನ್ಯೂಸ್ ಕೂಡ ಈ ಬಗ್ಗೆ ವರದಿಯನ್ನು ಮಾಡಿವೆ.
ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ವೈಲರ್ ವಿಡಿಯೋದಲ್ಲಿರುವುದು ವಿದ್ಯಾರ್ಥಿನಿ ಅಲ್ಲ ಆತ ಬಾಲಕ ಮತ್ತು ಆತನನ್ನು ಭಾರತದ ಮದರಾಸದಲ್ಲಿ ತಲೆಕೆಳಗಾಗಿ ನೇತಹಾಕಲಾಗಿದೆ ಎಂಬುದು ಕೂಡ ಸುಳ್ಳು, ಈ ವೈರಲ್ ವಿಡಿಯೋದಲ್ಲಿನ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಈ ವಿಡಿಯೋಗೂ ಭಾರತಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಹಾಗಾಗಿ ವೈರಲ್ ವಿಡಿಯೋವನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check: ಭಾರತದ ಪೌರತ್ವದ ಕುರಿತು ಸುಳ್ಳು ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.