ಬುರ್ಖಾ ಧರಿಸಿದ ಮಹಿಳೆಯ ಚಿತ್ರದ ಮುಂದೆ ಇಬ್ಬರು ಮಹಿಳೆಯರು ನಿಂತಿರುವ ಪೋಟೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. “ಸ್ವಿಜೆರ್ಲೆಂಡ್ನಲ್ಲಿ ಜನಾಭಿಪ್ರಾಯ ಸಂಗ್ರಹದ ಮೂಲಕ, ದೇಶದಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಮತ್ತು ಈ ದೇಶದಲ್ಲಿ ಇಸ್ಲಾಂ ಧರ್ಮವನ್ನು ಇನ್ನು ಮುಂದೆ ಅಧಿಕೃತ ಧರ್ಮವೆಂದು ಗುರುತಿಸಲಾಗುವುದಿಲ್ಲ” ಎಂದು ಹೇಳಲಾಗುತ್ತಿದೆ.
ಇದೇ ರೀತಿಯ ಪ್ರತಿಪಾಧನೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಫ್ಯಾಕ್ಟ್ಚೆಕ್: ಈ ಹೇಳಿಕೆಯು ತಪ್ಪು ಮಾಹಿತಿಯಾಗಿದೆ. ಕಲೆಕ್ಟಿಫ್ ನೆಮೆಸಿಸ್ ಎಂಬ ಫ್ರೆಂಚ್ ಗುಂಪು ಜನವರಿಯಲ್ಲಿ “ಪರದೆಯ ಪಿತೃಪ್ರಭುತ್ವದ ಚಿಹ್ನೆಯ” ವಿರುದ್ಧ “ಕೊಲಾಜ್ ಕ್ರಿಯೆ” ಕೈಗೊಂಡದ್ದು ಇದು. ಸ್ವಿಟ್ಜರ್ಲೆಂಡ್ 2021 ರಲ್ಲಿ ಜನಾಭಿಪ್ರಾಯ ಸಂಗ್ರಹದ ಮೂಲಕ ಸಾರ್ವಜನಿಕವಾಗಿ ಮುಖವನ್ನು ಮುಚ್ಚುವ ಬುರ್ಖಾ ಮತ್ತು ನಿಖಾಬ್ ಧರಿಸುವುದನ್ನು ನಿಷೇಧಿಸಿದ್ದರೂ, ಅದು ಹಿಜಾಬ್ಗಳನ್ನು ಉಲ್ಲೇಖಿಸಿಲ್ಲ. ಎರಡನೆಯದಾಗಿ, ಸ್ವಿಜೆರ್ಲೆಂಡ್ನಲ್ಲಿ ಇಸ್ಲಾಂ ಧರ್ಮವನ್ನು ಒಂದು ಧರ್ಮವಾಗಿ ಗುರುತಿಸಲಾಗಿಲ್ಲ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ.
ಮೊದಲಿಗೆ, ನಾವು ಫ್ರೆಂಚ್ ಭಾಷೆಯಲ್ಲಿ ಬರೆದ ಪೋಸ್ಟರ್ನ ವಿಷಯಗಳನ್ನು ಗೂಗಲ್ ಅನುವಾದದ ಮೂಲಕ ಇಂಗ್ಲಿಷ್ಗೆ ಅನುವಾದಿಸಿದ್ದೇವೆ. ಅದರಲ್ಲಿ “ಪರದೆ ಬೇಡ ಮತ್ತು ಕಲೆಕ್ಟಿಫ್ ನೆಮೆಸಿಸ್” ಎಂದು ಬರೆಯಲಾಗಿತ್ತು. ನಂತರ, ನಾವು ಕಲೆಕ್ಟಿಫ್ ನೆಮೆಸಿಸ್ ಎಂದು ಹುಡುಕಿದೆವು ಮತ್ತು ಅವರ ಇನ್ಸ್ಟಾಗ್ರಾಮ್ ಪುಟವನ್ನು ನೋಡಿದೆವು. ಇದು ಫ್ರಾನ್ಸ್ ಮೂಲದ ಸ್ತ್ರೀವಾದಿ ಗುಂಪು ಮತ್ತು ಸ್ವಿಜೆರ್ಲೆಂಡ್ನಲ್ಲಿಯೂ ನೆಲೆಯನ್ನು ಹೊಂದಿದೆ.
ವೈರಲ್ ಪೋಸ್ಟರ್ ಅನ್ನು ಹೊಂದಿರುವ ಮತ್ತು ಅದೇ ಇಬ್ಬರು ಮಹಿಳೆಯರನ್ನು ಒಳಗೊಂಡಿರುವ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಇದನ್ನು ಜನವರಿ 10 ರಂದು ಅಪ್ಲೋಡ್ ಮಾಡಲಾಗಿದೆ.
ಇವೆರಡರ ನಡುವಿನ ಹೋಲಿಕೆ ಇಲ್ಲಿದೆ.
ಸ್ವಿಟ್ಜರ್ಲೆಂಡ್ನಲ್ಲಿ ಹಿಜಾಬ್ ನಿಷೇಧಿಸಲಾಗಿದೆಯೇ?:
ಈ ಹೇಳಿಕೆಯು ತಪ್ಪುದಾರಿಗೆಳೆಯುತ್ತದೆ. 2021 ರಲ್ಲಿ, ಸ್ವಿಸ್ ಜನರು, ಜನಾಭಿಪ್ರಾಯ ಸಂಗ್ರಹದ ಮೂಲಕ, ಸಾರ್ವಜನಿಕವಾಗಿ ಮುಖ ಮುಚ್ಚುವುದನ್ನು ನಿಷೇಧಿಸಲು ಮತ ಚಲಾಯಿಸಿದರು, ಅಂದರೆ ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾ ಅಥವಾ ನಿಖಾಬ್.
ಈ ಜನಾಭಿಪ್ರಾಯ ಸಂಗ್ರಹವು ಹಿಂಸಾತ್ಮಕ ಬೀದಿ ಪ್ರತಿಭಟನಾಕಾರರನ್ನು ಮುಖವಾಡಗಳು ಧರಿಸದಂತೆ ತಡೆಯಿತು. 2023 ರಲ್ಲಿ ಸ್ವಿಜೆರ್ಲೆಂಡ್ನ ಸಂಸತ್ತಿನ ಕೆಳಮನೆ ಸಾರ್ವಜನಿಕವಾಗಿ ಜನರ ಮುಖವನ್ನು ಸಂಪೂರ್ಣವಾಗಿ ಮುಚ್ಚುವ ವಸ್ತುಗಳನ್ನು ನಿಷೇಧಿಸುವ ಪರವಾಗಿ ಮತ ಚಲಾಯಿಸಿದಾಗ ಇದು ಶಾಸನವಾಯಿತು.
ಸ್ವಿಜೆರ್ಲೆಂಡ್ನಲ್ಲಿ ಇಸ್ಲಾಂ: ಸ್ವಿಜೆರ್ಲೆಂಡ್ನ ಇಸ್ಲಾಂ ಧರ್ಮವನ್ನು ಒಂದು ಧರ್ಮವಾಗಿ ಗುರುತಿಸುವುದಿಲ್ಲ ಎಂದು ವೈರಲ್ ಪೋಸ್ಟ್ ಹೇಳಿಕೊಂಡಿದೆ. ಆದಾಗ್ಯೂ, ಅವರ ಸರ್ಕಾರಿ ವೆಬ್ಸೈಟ್ ಬೇರೆ ರೀತಿಯಲ್ಲಿ ಸೂಚಿಸುತ್ತದೆ, ಇದು ಹೇಳಿಕೆಯನ್ನು ಸುಳ್ಳು ಮಾಡುತ್ತದೆ.
ಸ್ವಿಜೆರ್ಲೆಂಡ್ನಲ್ಲಿ, ಧಾರ್ಮಿಕ ಸ್ವಾತಂತ್ರ್ಯವು ಫೆಡರಲ್ ಸಂವಿಧಾನದಿಂದ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕು. ಕ್ರಿಶ್ಚಿಯನ್ ಧರ್ಮವು ದೇಶದಲ್ಲಿ ಬಹುಸಂಖ್ಯಾತ ಧರ್ಮವಾಗಿದ್ದರೂ, ಮುಸ್ಲಿಮರು ಜನಸಂಖ್ಯೆಯ 6% ರಷ್ಟಿದ್ದಾರೆ, ಅವರು ಮುಖ್ಯವಾಗಿ ಬಾಲ್ಕನ್ ಮತ್ತು ಟರ್ಕಿಯಿಂದ ಬಂದವರು, ದೊಡ್ಡ ನಗರಗಳಲ್ಲಿ ವಾಸಿಸುತ್ತಿದ್ದಾರೆ.
ಇಸ್ಲಾಂ ಈ ದೇಶದಲ್ಲಿ ಮಾನ್ಯತೆ ಪಡೆದ ಧರ್ಮವಲ್ಲ ಎಂದು ಸಾಬೀತುಪಡಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಸರ್ಕಾರದ ಸೂಚನೆಗಳಿಲ್ಲ. ವೈರಲ್ ಆಗಿರುವ ಸಾಮಾಜಿಕ ಮಾಧ್ಯಮ ಪೋಸ್ಟ್ ಸ್ವಿಜೆರ್ಲೆಂಡ್ನಲ್ಲಿ ಇಸ್ಲಾಂ ಬಗ್ಗೆ ತಪ್ಪುದಾರಿಗೆಳೆಯುವ ಕೋಮುವಾದಿ ಹೇಳಿಕೆಯನ್ನು ನೀಡಿದೆ.
ಇದನ್ನು ಓದಿ: ಚೀನಾ ಅಧ್ಯಕ್ಷ ಪಾರ್ಶ್ವವಾಯುವಿನಿಂದ ಬಳಲಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೆ
ವೀಡಿಯೋ ನೋಡಿ: ಉತ್ತರ ಪ್ರದೇಶದಲ್ಲಿ LLB ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದೆಯೇ ಹೊರತು UPSC ಪರೀಕ್ಷೆಯಲ್ಲಿ ಅಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.