” ಈ ವಿಡಿಯೋ ನೋಡಿ ಇದು ತೆಲಂಗಾಣದ ವಾರಂಗಲ್ನಲ್ಲಿ ನಡೆದ ಘಟನೆ. ಈ ಮುಸ್ಲಿಂ ಯುವಕ ಸಾವಿರಾರು ಜನ ಊಟ ಮಾಡಲು ತಯಾರಿಸಲಾಗುತ್ತಿರುವ ಆಹಾರದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ನೆನಪಿರಲಿ ಈ ಆಹಾರವನ್ನು ಹಿಂದೂಗಳು ಕೂಡ ಸೇವನೆ ಮಾಡುತ್ತಾರೆ. ಮುಸಲ್ಮಾನರು ನಡೆಸುವ ಹೋಟೆಲ್ಗೆ ಹೋಗುವ ಮುನ್ನ ಎಚ್ಚರ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
🧵
NO CONFUSION🚨 Ok, let's assume that "HALAL" isn't "spitting" on food but actually means "permissible" and food prepared as per Islamic law.
Warangal, Telangana: Peeing on food in a hotel run by muslims.https://t.co/MfhOIWFqGg https://t.co/zw1mUOJzMb
— 🆒βÏ🅰§𝔥ᵉᵈ 🅱ᵃⁿᵗⁱ❗️ (@biasedbanti) July 19, 2024
ಈ ವಿಡಿಯೋ ನೋಡಿದ ಹಲವರು ಇದು ನಿಜವಾದ ವಿಡಿಯೋ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಮಂದಿ ಮುಸ್ಲಿಂ ಸಮುದಾಯದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇನ್ನೂ ಕೆಲವರು ಈ ವಿಡಿಯೋವನ್ನು ನೋಡಿ, ಇದು ಆಹಾರ ಜಿಹಾದ್ ಎಂದು ಹೇಳುತ್ತಿದ್ದಾರೆ. ಇನ್ನು ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಇದು ಹಲಾಲ್ ಪ್ರಭಾವ ಎಂದು ಬರೆದುಕೊಳ್ಳಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಅಸಲಿ ಕತೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ.
Warangal, Telangana: Peeing on food in a hotel run by muslims. https://t.co/Rob1kNAWbE
— YODHA (@BabuRao12999) July 19, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದಲ್ಲಿನ ಕೆಲವೊಂದು ಕೀ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆಯನ್ನು ನಡೆಸಲಾಯಿತು. ಈ ವೇಳೆ ನಮಗೆ 2 ಡಿಸೆಂಬರ್ 2022ರಿಂದಲೂ ಈ ವಿಡಿಯೋ ವೈರಲ್ ಆಗುತ್ತಿರುವುದು ಕಂಡು ಬಂದಿದೆ. ಅದರಲ್ಲೂ @doctorrichabjp ಎಂಬ ಎಕ್ಸ್ ಖಾತೆಯ ಬಳಕೆದಾರರು ಈ ವೈರಲ್ ವಿಡಿಯೋವನ್ನು ಹಂಚಿಕೊಂಡು ” ಆಹಾರ ಜಿಹಾದ್ನ ನಂತರ ಇದಕ್ಕೆ ಯಾವ ಜಿಹಾದ್ ಎಂದು ಕರೆಯಬೇಕು?” ಎಂಬ ಶೀರ್ಷಿಕೆಯನ್ನು ನೀಡಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
फ़ूड जिहाद के बाद इस #जिहाद का क्या नाम? pic.twitter.com/BCkzY0ovO6
— Dr. Richa Rajpoot (Lodhi) (@doctorrichabjp) December 2, 2022
ಇವರ ಈ ಪೋಸ್ಟ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ, ಇವರ ಪೋಸ್ಟ್ಗೆ @AijazAwalqi ಎಂಬ ಎಕ್ಸ್ ಖಾತೆ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದು, “@doctorrichabjp ಅವರೇ ನಿಮ್ಮ ವಿಡಿಯೋವಿನ ಸಂಪೂರ್ಣ ಪೋಸ್ಟ್ಮಾರ್ಟಂ ಅನ್ನು ಇಲ್ಲಿ ಮಾಡಿದ್ದೇವೆ” ಎಂದು ಬರೆದು, ವಿಡಿಯೋವಿನ ದೀರ್ಘ ಆವೃತ್ತಿಯನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವಿನ ಕೊನೆಯಲ್ಲಿ, ಯುವಕ ಬಾಟಲಿಯಿಂದ ದ್ರವವನ್ನು ಹಾಕುತ್ತಿರುವುದು ಕಂಡು ಬಂದಿದೆ. ಇನ್ನು ಈ ವಿಡಿಯೋ ashik.billota ಎಂಬ ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಸೇರಿದ್ದಾಗಿದ್ದು, ಪ್ರಸುತ ಆ ಇನ್ಸ್ಟಾಗ್ರಾಮ್ ಖಾತೆ ಈಗ ಕಂಡು ಬಂದಿಲ್ಲ.
Miss @doctorrichabjp mam yeh lo ji apki Post ka Post-mortem karne wala full video👇
Aur yeh uski instagram ki link bhi sath mein👇https://t.co/CSBDyJtMcO pic.twitter.com/BFOUuSuavo— Aijaz Bin ishaq (@AijazAwalqi) December 2, 2022
ಇನ್ನು ಘಟನೆಗೆ ಸಂಬಂಧ ಪಟ್ಟಂತೆ ಎಐಎಂಐಎಂ ಶಾಸಕ ಮಾಜಿದ್ ಹುಸೆನ್ ಅವರು 19 ಜುಲೈ 2024ರಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು “ಎಐಎಂಐಎಂ ಅಧ್ಯಕ್ಷರು ಅಸಾದುದ್ದಿನ್ ಓವೈಸಿ ಅವರ ಮಾರ್ಗದರ್ಶನದಂತೆ ಮುಸಲ್ಮಾನರನ್ನು ಗುರಿಯಾಗಿಸಿಕೊಂಡು ಎಕ್ಸ್ ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು, ಇಂದು 19-07-2024 ರಂದು ಮಾಜಿದ್ ಹುಸೆನ್ರಿಂದ ದೂರು ದಾಖಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ” ಎಂದು ಬರೆದುಕೊಂಡಿದ್ದಾರೆ. ಇನ್ನು ಈ ರೀತಿಯ ಯಾವುದಾದರು ಘಟನೆ ಕುರಿತು ತೆಲಂಗಾಣದಲ್ಲಿ ವರದಿಗಳು ಆಗಿವೆಯಾ ಎಂದು ಪರಿಶೀಲನೆ ನಡೆಸಿದಾಗ, ಆ ರೀತಿಯ ಯಾವುದೇ ವರದಿಗಳು ಕೂಡ ಪತ್ತೆಯಾಗಿಲ್ಲ.
On the Instructions of AIMIM President @asadowaisi
Sahab
In Connection with the Viral Video being falsely shared on X with a communal spin targeting Muslims Community in Telangana. Today 19.07.2024 Complaint is lodged by Majid Hussain at 21:00 Hrs and FIR is being registered 1/2 pic.twitter.com/FrUovzxgUx— Majid Hussain (@Md_MajidHussain) July 19, 2024
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ತೆಲಂಗಾಣದ ವಾರಂಗಲ್ನಲ್ಲಿ ಮುಸಲ್ಮಾನ ಯುವಕನೊಬ್ಬ ಆಹಾರಕ್ಕೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬುದು ಸುಳ್ಳಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ. ರೀಲ್ಸ್ ಒಂದಕ್ಕೆ ಸಂಬಂಧ ಪಟ್ಟಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.