Fact Check: ನರೇಂದ್ರ ಮೋದಿ ಅಮೆರಿಕ ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯ ಮೊದಲನೇ ಸ್ಥಾನ ಪಡೆದಿದ್ದಾರೆ ಎಂಬುದು ಸುಳ್ಳು
ನರೇಂದ್ರ ಮೋದಿಯವರ ಸಾಧನೆಗಳ ಕುರಿತು ಪ್ರತೀ ದಿನವೂ ಒಂದಿಲ್ಲೊಂದು ಸುಳ್ಳುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುತ್ತವೆ. ಬಿಜೆಪಿ ಐಟಿ ಸೆಲ್ ಕೂಡ ಇಂತಹ ಅನೇಕ ಉತ್ಪ್ರೇಕ್ಷೆಯ ಸುಳ್ಳು ಪೋಸ್ಟರ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ಅದನ್ನು ನರೇಂದ್ರ ಮೋದಿಯವರ ಅಭಿಮಾನಿಗಳ ನಡುವೆ ಹಂಚಿಕೊಳ್ಳಲಾಗುತ್ತದೆ. ಅದೇ ರೀತಿ ಈಗ “ಅಮೆರಿಕ” ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯ ಮೊದಲನೇ ಸ್ಥಾನ ಪಡೆದ “ಭಾರತದ ಏಕೈಕ ವ್ಯಕ್ತಿ” “ಅಪ್ಪಟ ದೇಶಪ್ರೇಮಿ” ಶ್ರೀ ನರೇಂದ್ರ ಮೋದಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್ ಒಂದು ಸಾಮಾಜಿಕ…