ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ( ಟ್ರಾಯ್ ) ಜನರಿಗೆ ಉಚಿತ ಮೊಬೈಲ್ ರೀಚಾರ್ಜ್ ಅನ್ನು ನೀಡುತ್ತಿದೆ ಎಂದು ಹೇಳಲು ಟೀಎ ಲಿಂಕ್ ಮತ್ತು ಸ್ಕ್ರೀನ್ಶಾಟ್ಗಳನ್ನು ಹೊಂದಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಅದರಲ್ಲೂ ಪ್ರಮುಖವಾಗಿ ಜಿಯೋ ಏರ್ಟೆಲ್ ಸೇರಿದಂತೆ ವಿವಿಧ ಸಿಮ್ ಕಂಪನಿಗಳು ತಮ್ಮ ರಿಚಾರ್ಜ್ ದರವನ್ನು ಹೆಚ್ಚು ಮಾಡಿದ ನಂತರದಲ್ಲಿ ಈ ರೀತಿಯಾದಂತಹ ಸುದ್ದಿಯೊಂದು ವ್ಯಾಪಕವಾಗಿ ಹರಿದಾಡುತ್ತಿದೆ
ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದು, ಹಲವು ಮಂದಿ ತಮ್ಮದೇ ಬರಹಗಳಲ್ಲಿ “ನೀವು ಕೂಡ ರಿಚಾರ್ಜ್ ಮಾಡಿಸಿಕೊಳ್ಳಬಹುದು ನಮಗೂ ರಿಚಾರ್ಜ್ ಆಗಿದೆ” ಎಂಬ ರೀತಿಯಲ್ಲಿ ಸುದ್ದಿಗಳನ್ನು ಮತ್ತು ಕೆಲವೊಂದು ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಸುದ್ದಿಯ ಸತ್ಯ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಟ್ ಚೆಕ್
ವ್ಯಾಪಕವಾದ ಬರಹಗಳೊಂದಿಗೆ ಟ್ರಾಯ್ ಉಚಿತವಾಗಿ ರಿಚಾರ್ಜ್ ಮಾಡಿ ಕೊಡಲಿದೆ ಎಂದು ಲಿಂಕ್ ಜೊತೆಗೆ ಹಂಚಿಕೊಳ್ಳಲಾಗುತ್ತಿರುವ ಸುದ್ದಿಯನ್ನು ಪರಿಶೀಲನೆ ನಡೆಸಲು, ಕನ್ನಡ ಸಾಹಿತ್ಯ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್ನೊಂದಿಗೆ ಟ್ರಾಯ್ನದ್ದು ಎಂದು ನೀಡಲಾದ ಲಿಂಕನ್ನು ಕ್ಲಿಕ್ ಮಾಡಲಾಯಿತು. ಆದರೆ ಆ ಲಿಂಕ್ ಟ್ರಾಯ್ನ ಅಧಿಕೃತ ವೆಬ್ಸೈಟ್ ಅಲ್ಲ ಎಂಬುದು ಖಚಿತವಾಯಿತು. ಇಲ್ಲಿಗೆ ಇದೊಂದು ವಂಚನೆಯ ಜಾಲ ಎಂಬುದು ಪ್ರಾರಂಭದಲ್ಲೇ ತಿಳಿದು ಬಂದಿದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಹಾಗೂ ಈ ರೀತಿಯಾದಂತಹ ರಿಚಾರ್ಜ್ ಆಫರ್ ಗಳನ್ನು ನೀಡಿದೆಯೇ? ಎಂದು ಪರಿಶೀಲನೆ ನಡೆಸಲು ಟ್ರಾಯ್ನ ಅಧಿಕೃತ ವೆಬ್ಸೈಟ್ ಅನ್ನು ನಾವು ಪರಿಶೀಲನೆ ನಡೆಸಿದೆವು. ಆದರೆ ಆ ರೀತಿಯಾದಂತಹ ಯಾವುದೇ ಉಚಿತ ರಿಚಾರ್ಜ್ನ ಆಫರ್ಗಳನ್ನು ಟ್ರಾಯ್ ನೀಡಿಲ್ಲ ಎಂಬುದು ತಿಳಿದು ಬಂದಿದೆ. ಕೇವಲ ಇಷ್ಟು ಮಾತ್ರವಲ್ಲದೆ ಟ್ರಾಯ್ ಯಾವುದೇ ರೀತಿಯ ಪ್ರಿಪೇಡ್ ಯೋಜನೆಗೆ ಉಚಿತ ರಿಚಾರ್ಜ್ ಗಳನ್ನು ಕೂಡ ಒದಗಿಸಲು ಸಾಧ್ಯವಿಲ್ಲ ಎಂಬುದು ಖಚಿತವಾಗಿದೆ. ಏಕೆಂದರೆ ಟ್ರಾಯ್ ಎಂಬುದು ಟೆಲಿಕಾಂ ಕಂಪನಿ ಅಲ್ಲ, ಬದಲಾಗಿ ಸುಂಕಗಳನ್ನು ನಿಗದಿಪಡಿಸುವುದು, ದರ ಪರಿಷ್ಕರಣೆ ಹಾಗೂ ಟೆಲಿಕಾಂ ಸೇವೆಗಳನ್ನು ನಿಯಂತ್ರಿಸುವುದು ಟ್ರಾಯ್ನ ಕೆಲಸವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಟ್ರಾಯ್ ಉಚಿತ ರಿಚಾರ್ಜ್ ಅನ್ನು ಮಾಡಲಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್ ಪೋಸ್ಟ್ನೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಲಿಂಕ್ ವಂಚನೆಯ ಜಾಲವಾಗಿದ್ದು, ಈ ಲಿಂಕ್ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್ ಫೋನ್ ಹ್ಯಾಕ್ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಇಂತಹ ಲಿಂಕ್ಗಳನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check | ಅಂಗಡಿ ಮಾಲೀಕರು ಹೆಸರು ಪ್ರದರ್ಶಿಸಬೇಕು ಎಂಬ ಆದೇಶದ ವಿರುದ್ಧ ‘ದ ಗ್ರೇಟ್ ಖಲಿ’ ಪ್ರತಿಭಟಿಸಿದ್ದಾರೆ ಎಂಬುದು ಸುಳ್ಳು
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ