ಜೋ ಬೈಡನ್ ಅವರು ಮುಂಬರುವ ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಹಿಂದಕ್ಕೆ ಸರಿದು ತಮ್ಮ ಸ್ಥಾನಕ್ಕೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಆಯ್ಕೆ ಮಾಡುತ್ತಿದ್ದಂತೆ, ಡೆಮಕ್ರಟಿಕ್ ಪಕ್ಷದ ವಿರೋಧಿಗಳು ಮತ್ತು ಡೊನಾಲ್ಡ್ ಟ್ರಂಪ್ ಬೆಂಬಲಿಗರು ಹಾಗೂ ರಿಪಬ್ಲಿಕನ್ ಪಕ್ಷದ ಬೆಂಬಲಿಗರು ಕಮಲಾ ಹ್ಯಾರಿಸ್ ಅವರ ಮೇ AI ರಚಿತ ಜೆಫ್ರಿ ಎಪ್ಸ್ಸ್ಟೈನ್ ಜೊತೆ ಕಮಲಾ ಹ್ಯಾರಿಸ್ ಇರುವ ಚಿತ್ರವನ್ನು ಹಂಚಿಕೊಳ್ಳುತ್ತಿರುವ ಟ್ರಂಪ್ ಬೆಂಬಲಿಗರು
ಈಗ, ಕೆರಿಬಿಯನ್ ದ್ವೀಪದಲ್ಲಿ ಶಿಕ್ಷೆಗೊಳಗಾದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೈನ್ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಲೈಂಗಿಕ ಕಳ್ಳಸಾಗಣೆ ಆರೋಪದ ವಿಚಾರಣೆಗಾಗಿ ನಡೆಸುತ್ತಿರುವಾಗ ಎಪ್ಸ್ಟೈನ್ 2019 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿಂದೆ ಕಮಲಾ ಅವರು ಎಪ್ಸ್ಟೈನ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗುತ್ತಿದೆ.
ಟ್ವೀಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ಫ್ಯಾಕ್ಟ್ ಚೆಕ್: ಹ್ಯಾರಿಸ್ ಮತ್ತು ಎಪ್ಸ್ಟೈನ್ ಅವರ ಅಸ್ವಾಭಾವಿಕ ಮೈಕಟ್ಟನ್ನು, ಅವರ ಕೂದಲು ಸ್ವಲ್ಪ ಮಸುಕಾದ ಹಿನ್ನೆಲೆಯಲ್ಲಿ ಗಮನಿಸಿದಾಗ, ಇವೆಲ್ಲವೂ ಎಐ-ತಯಾರಿಸಿದ ಚಿತ್ರಗಳ ಲಕ್ಷಣಗಳು ಎಂದು ಅನುಮಾನಗಳನ್ನು ಹುಟ್ಟುಹಾಕಿದೆ.
ನಂತರ ನಾವು ಚಿತ್ರವನ್ನು ಎಐ-ವಿಷಯ ಪತ್ತೆ ಸಾಧನವಾದ ಟ್ರೂಮೀಡಿಯಾ ಮೂಲಕ ಈ ಚಿತ್ರವನ್ನು ನೋಡಿದಾಗ, ಅದು “ಕೃತಕ ಬುದ್ಧಿಮತ್ತೆ ಚಿತ್ರವೆಂದು ಸಾಕಷ್ಟು ಪುರಾವೆಗಳಿವೆ” ಎಂದು ಹೇಳಿದೆ.
ಆದ್ದರಿಂದ ಈ ಚಿತ್ರವು ಎಐ ರಚಿತವಾಗಿದ್ದು ಕಮಲಾ ಹ್ಯಾರಿಸ್ ಹಾಗೂ ಡೆಮಕ್ರಟಿಕ್ ಪಕ್ಷದ ವಿರೋಧಿಗಳು ಈ ಚಿತ್ರವನ್ನು ಹರಿಬಿಟ್ಟಿದ್ದಾರೆ.
ಇದನ್ನು ಓದಿ: ಶಾಹಿದ್ ಮಲಿಕ್ ಇಂಗ್ಲೆಂಡ್ನ ಹೊಸ ನ್ಯಾಯ ಮಂತ್ರಿ ಎಂಬುದು ಸುಳ್ಳು!
ವೀಡಿಯೋ ನೋಡಿ: ಮಾಜಿ ರಾಜ್ಯಸಭಾ ಸಂಸದ ಮಜೀದ್ ಮೆಮನ್ ಅವರು ಉಗ್ರ ಕಸಬ್ ಪರ ವಕೀಲರಾಗಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ