ಸಾಮಾಜಿಕ ಜಾಲತಾಣದಲ್ಲಿ ಎಲಿವೇಟರ್‌ನೊಳಗೆ EV ಬ್ಯಾಟರಿ ಸಿಡಿದು ಬೆಂಕಿ ಹೊತ್ತಿಕೊಂಡ ವಿಡಿಯೋವೊಂದು ವೈರಲ್ ಆಗಿದೆ. ಇವಿ ಬ್ಯಾಟರಿ ಹಿಡಿದಿರುವ ವ್ಯಕ್ತಿಗೆ ತೀವ್ರವಾಗಿ ಗಾಯವಾಗಿರುವುದನ್ನು ವಿಡಿಯೋ ಒಳಗೊಂಡಿದೆ. ಈ ವಿಡಿಯೋ ಹಂಚಿಕೊಳ್ಳುತ್ತಿರುವವರು “ಬ್ಯಾಟರಿಯನ್ನು ಲಿಫ್ಟ್‌ನ ಒಳಗೆ ಕೊಂಡೊಯ್ಯುತ್ತಿದ್ದರೆಆಯಸ್ಕಾಂತೀಯ ಕ್ಷೇತ್ರವಾಗಿ ಪರಿವರ್ತಿನೆಗೊಂಡಿದೆ. ಇದು ಬ್ಯಾಟರಿ ಸ್ಫೋಟಕ್ಕೆ ಕಾರಣವಾಗಿದೆ” ಎಂದು ಟಿಪ್ಪಣಿಯನ್ನು ಬರೆದು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
https://twitter.com/GanKanchi/status/1816335571247120647
ಈ ವಿಡಿಯೋವನ್ನು ಹಂಚಿಕೊಂಡ ಕೆಲವರು ಈ ಘಟನೆ ಸಿಂಗಾಪುರದಲ್ಲಿ ನಡೆದಿದೆ ಎಂದು ಹಂಚಿಕೊಂಡರೆ ಇನ್ನೂ ಕೆಲವರು ಈ ಘಟನೆ ಬೇರೆ ಬೇರೆ ದೇಶಗಳಲ್ಲಿ ನಡೆದಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿನ ಸತ್ಯಾಸತ್ಯತೆಯನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
https://twitter.com/vipul2777/status/1816329982870008253
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ಈ ಘಟನೆ 2021ರಲ್ಲಿ ಚೀನಾದಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಘಟನೆ ಕುರಿತು ಹಲವು ಚೀನಿ ಸುದ್ದಿ ಮಾಧ್ಯಮಗಳ ವರದಿಗಳು ಕೂಡ ಪತ್ತೆಯಾಗಿದೆ. ಈ ಸ್ಪೋಟಕ್ಕೆ ನಿಗದಿತವಾದ ಕಾರಣ ಏನು ಎಂಬುದನ್ನು ಉಲ್ಲೇಖಿಸಲಾಗಿಲ್ಲ.
ಹೀಗಾಗಿ ವೈರಲ್ ವಿಡಿಯೋ ಕುರಿತ ಇನ್ನಷ್ಟು ಮಾಹಿತಿಗಾಗಿ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ಈ ಘಟನೆ 2021 ರಲ್ಲಿ ಚೀನಾದ ಗುವಾಂಗ್‌ಝೌ ಜಿಲ್ಲೆಯ ಹೈಝು ಜಿಲ್ಲೆಯಲ್ಲಿ ಸಂಭವಿಸಿದೆ ಎಂದು ಇನ್ನೂ ಕೆಲವು ವರದಿಗಳಿಂದ ಪತ್ತೆಯಾಗಿದೆ. ಆದರೆ ಈ ವರದಿಯಲ್ಲಿ ವೈರಲ್ ವಿಡಿಯೋದಲ್ಲಿನ ಘಟನೆಗೆ ಕಾಂತಿಯ ಕ್ಷೇತ್ರವೇ ಕಾರಣವೆಂದು ಉಲ್ಲೇಖಿಸಲಾಗಿಲ್ಲ. ಒಂದು ವೇಳೆ ಕಾಂತೀಯಕ್ಷೇತ್ರದಿಂದ ಈ ಘಟನೆ ಸಂಭವಿಸಿದ್ದು ನಿಜವೇ ಆಗಿದ್ದರೆ ಈ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು. ಆದರೆ ಅಂತಹ ಮಾಹಿತಿ ಈ ಯಾವ ವರದಿಗಳಲ್ಲೂ ಕಂಡು ಬಂದಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ ಇವಿ ಬ್ಯಾಟರಿಯನ್ನು ಲಿಫ್ಟ್‌ನೊಳಗೆ ತೆಗೆದುಕೊಂಡು ಹೋದ ನಂತರ ಕಾಂತೀಯಕ್ಷೇತ್ರ ಸೃಷ್ಟಿಯಾಗಿ ಬ್ಯಾಟರಿ ಸಿಡಿದಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ. ಒಂದು ವೇಳೆ ಕಾಂತೀಯಕ್ಷೇತ್ರದಿಂದಲೇ ಇವಿ ಬ್ಯಾಟರಿ ಲಿಫ್ಟ್‌ನೊಳಗೆ ಸ್ಪೋಟಗೊಂಡಿದ್ದರೆ ಆ ಕುರಿತು ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು ಆದರೆ ಆ ರೀತಿಯ ಯಾವುದೇ ವರದಿಗಳು ಕೂಡ ಕಂಡು ಬಂದಿಲ್ಲ. ಹಾಗಾಗಿ ಇಂತಹ ಸುದ್ದಿಗಳನ್ನು ಶೇರ್ ಮಾಡುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check: ಜೆಫ್ರಿ ಎಪ್ಸ್‌ಸ್ಟೈನ್ ಜೊತೆ ಕಮಲಾ ಹ್ಯಾರಿಸ್ ಇರುವ AI ಫೋಟೋ ಹಂಚಿಕೊಳ್ಳುತ್ತಿರುವ ಟ್ರಂಪ್ ಬೆಂಬಲಿಗರು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ