“ಲಾಸ್ ವೇಗಾಸ್ ನ್ಯಾಯಾಧೀಶರು ನ್ಯಾಯಾಲಯದಲ್ಲಿ ಶಿಕ್ಷೆಯನ್ನು ಓದುತ್ತಿದ್ದಾಗ ಮುಸ್ಲಿಂ ವಲಸಿಗರೊಬ್ಬರು ನ್ಯಾಯಾಧೀಶರ ಮೇಲೆ ದಾಳಿ ಮಾಡಿದ್ದಾರೆ. ಮುಸಲ್ಮಾನರ ಈ ಆಕ್ರಮಣಕಾರಿ ನೀತಿಯನ್ನು ಏನೆಂದು ಹೇಳಬೇಕು. ಹೀಗಾಗಿ ಮುಸಲ್ಮಾನರು ಯಾವುದೇ ಕಾರಣಕ್ಕೂ ನಂಬಲು ಸಾಧ್ಯವಿಲ್ಲ. ಯಾವ ಸಂದರ್ಭದಲ್ಲಿ ಯಾರ ಮೇಲೆ ಬೇಕಾದರೂ ಅವರು ಆಕ್ರಮಣ ಮಾಡುತ್ತಾರೆ ಎಚ್ಚರಿಕೆಯಿಂದಿರಿ” ಎಂದು ಟಿಪ್ಪಣಿಯೊಂದಿಗೆ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
An accused Muslim attacks a judge in WWE style during sentence in US Las Vegas courtroom.
Now European Union is also realizing ignorance of these peacekeepers. Will European Union regret for its soft stance towards the refugees??? 🤔 pic.twitter.com/5RX4jTariD
— Mr. Nationalist (@MrNationalistJJ) July 22, 2024
ಈ ವಿಡಿಯೋದಲ್ಲಿ ಕೂಡ ವ್ಯಕ್ತಿಯೊಬ್ಬ ನ್ಯಾಯಾಧೀಶರ ಮೇಲೆ ದಾಳಿ ಮಾಡುವುದನ್ನು ನೋಡಬಹುದಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಸಾಕಷ್ಟು ಜನ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಎಷ್ಟು ಸತ್ಯವಿದೆ? ಎಷ್ಟು ಸುಳ್ಳುಗಳನ್ನು ಸೇರಿಸಲಾಗಿದೆ ಎಂಬುವುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವೈರಲ್ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ರಾಯಿಟರ್ಸ್ ಸುದ್ದಿ ಸಂಸ್ಥೆ ತನ್ನ ಅಧಿಕೃತ ಯುಟ್ಯುಬ್ ಚಾನಲ್‌ನಲ್ಲಿ GRAPHIC WARNING: Las Vegas judge attacked by felon during sentencing | REUTERS ಎಂಬ ಶೀರ್ಷಕೆಯಡಿ ಹಂಚಿಕೊಂಡಿದ್ದ ವಿಡಿಯೋವೊಂದು ಕಂಡು ಬಂದಿದೆ.
ಈ ವಿಡಿಯೋದ ಪ್ರಕಾರ ಆರೋಪಿ ಡಯೋಬ್ರಾ ರೆಡಾನ್‌ನ ಅಪರಾಧ ಪ್ರಕರಣಗಳ ಕುರಿತು ನ್ಯಾಯಲಯದಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಆರೋಪಿಗೆ ಕಠೀಣ ಶಿಕ್ಷೆಯನ್ನು ವಿಧಿಸದಂತೆ ಮನವಿಯನ್ನು ಮಾಡಲಾಗಿತ್ತು. ಆದರೆ ನ್ಯಾಯಾಧೀಶರು ಆರೋಪಿಯ ಅಪರಾಧಕ್ಕೆ ಸಂಬಂಧ ಪಟ್ಟಂತೆ ಶಿಕ್ಷೆಯನ್ನು ಪ್ರಕಟಿಸಲು ಮುಂದಾದರು. ಈ ವೇಳೆ ಕುಪಿತಗೊಂಡ ಆರೋಪಿ ನ್ಯಾಯಾಧೀಶರ ಮೇಲೆ ದಾಳಿ ನಡೆಸಲು ಮುಂದಾಗಿದ್ದಾನೆ. ಇದೇ ವಿಡಿಯೋವನ್ನು ಬಳಸಿಕೊಂಡು ಸುಳ್ಳು ಸುದ್ದಿಯನ್ನು ಹರಡಲಾಗಿದೆ.
ಇನ್ನು ಈತ ಮುಸಲ್ಮಾನ ಎಂಬುದಕ್ಕೆ ಕೂಡ ಯಾವುದೇ ಸಾಕ್ಷಿಗಳು ಇಲ್ಲ. ವರದಿಗಳಲ್ಲಿ ಈತ ಯಾವ ಸಮುದಾಯಕ್ಕೆ ಸೇರಿದ್ದಾನೆ ಎಂಬ ಕುರಿತು ಉಲ್ಲೇಖವಾಗಿಲ್ಲ. ಆದರೆ ಈತನ ಸಹೋದರಿಯ ಹೆಸರು ಲಾ ಡೊನಾ ಡ್ಯಾನಿಯಲ್ ಎಂದಿದೆ. ಸಾಧಾರಣವಾಗಿ ಈ ರೀತಿಯ ಹೆಸರುಗಳು ಮುಸ್ಲಿಂ ಸಮುದಾಯದಲ್ಲಿ ಕಂಡು ಬರುವುದಿಲ್ಲ. ಒಂದು ವೇಳೆ ಈತ ಅಕ್ರಮ ವಲಸಿಗ ಮುಸಲ್ಮಾನನೇ ಆಗಿದ್ದರೆ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು. ಆದರೆ ಅಂತಹ ಯಾವುದೇ ವರದಿಗಳು ಪತ್ತೆಯಾಗಿಲ್ಲ ..
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಲಾಸ್ ವೇಗಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮೇಲೆ ಮುಸ್ಲಿಂ ವಲಸಿಗನೊಬ್ಬ ದಾಳಿ ನಡೆಸಿದ್ದಾನೆ ಎಂಬುದು ಸುಳ್ಳು. ದಾಳಿ ನಡೆಸಿದಾತ ಕ್ರೈಸ್ತ ಸಮುದಾಯಕ್ಕೆ ಸೇರಿದ್ದಾನೆ ಎಂಬುದು ಹಲವು ಸುದ್ದಿಗಳಿಂದ ಸಾಬೀತಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸುವುದು ಉತ್ತಮ
ಇದನ್ನೂ ಓದಿ : Fact Check: ಹತ್ರಾಸ್ ಕಾಲ್ತುಳಿತಕ್ಕೆ ಕಾರಣವಾದ ಭೋಲೆ ಬಾಬಾ ಎಂದು ಗುಜರಾತ್‌ನ ನಕಲಿ ಬಾಬಾನ ಪೋಟೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ