ಮುಸ್ಲಿಂ ಗೆಳೆಯನಿಂದ ಹತ್ಯೆಗೀಡಾದ ಹಿಂದೂ ಮಹಿಳೆ ಎಂಬ ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ಮಹಿಳೆಯ ಶವವನ್ನು ಸೂಟ್ಕೇಸ್ನಲ್ಲಿ ತುಂಬಿದ ವಿಡಿಯೋವೊಂದು ವೈರಲ್ ಆಗಿದೆ.
ಈ ಘಟನೆಯನ್ನು ‘ಲವ್ ಜಿಹಾದ್’ ಪ್ರಕರಣ ಎಂದು ನಿರೂಪಿಸುವ ವೀಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಳ್ಳಲಾಗುತ್ತಿದೆ, “ಎಲ್ಲಾ ಅಬ್ದುಲ್ಗಳು ಒಂದೇ…. ಮತ್ತೊಂದು ಸೂಟ್ ಕೇಸ್… ಇನ್ನೊಂದು ಕಥೆ.” ಮದುವೆಯ ನೆಪದಲ್ಲಿ ಮುಸ್ಲಿಮರು ಹಿಂದೂ ಮಹಿಳೆಯರನ್ನು ಬಲವಂತವಾಗಿ ಅಥವಾ ಮೋಸದಿಂದ ಮತಾಂತರಿಸುತ್ತಿದ್ದಾರೆ ಎಂಬ ಪಿತೂರಿ ಸಿದ್ಧಾಂತವನ್ನು ಪ್ರಚಾರ ಮಾಡಲು ಹಿಂದೂ ಬಲಪಂಥೀಯ ಗುಂಪುಗಳು ‘ಲವ್ ಜಿಹಾದ್’ ಪ್ರಕರಣ ಇದು ಎಂದು ಹಂಚಿಕೊಳ್ಳುತ್ತಿದ್ದಾರೆ.
ನೋಡಲು ಇಲ್ಲಿ ಕ್ಲಿಕ್ ಮಾಡಿ, ಆರ್ಕೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಫ್ಯಾಕ್ಟ್ ಚೆಕ್:
ನಾವು ಈ ಕುರಿತು ಹುಡುಕಿದಾಗ ಈ ವೀಡಿಯೋ 2022 ರಲ್ಲಿ ಸಹ ಇದೇ ರೀತಿಯ ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ವೈರಲ್ ಆಗಿತ್ತು ಮತ್ತು ಈ ಪ್ರಕರಣ ಉತ್ತರಾಖಂಡದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ನಂತರ ನಾವು ಉತ್ತರಾಖಂಡದ ಕಲಿಯಾರ್ ಪೊಲೀಸ್ ಠಾಣೆಯ ಸ್ಟೇಷನ್ ಆಫೀಸರ್ ಧರ್ಮೇಂದ್ರ ರಾಠಿ ಅವರನ್ನು ಸಂಪರ್ಕಿಸಿದ್ದೇವೆ, ಅವರು ಈ ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ ಎಂದು ದೃಢಪಡಿಸಿದ್ದಾರೆ, ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಒಂದೇ ಸಮುದಾಯಕ್ಕೆ(ಮುಸ್ಲಿಂ) ಸೇರಿದವರು.
ಗೂಗಲ್ನಲ್ಲಿ ಕೀವರ್ಡ್ ಹುಡುಕಾಟ ನಡೆಸಿದಾಗ ಮಾರ್ಚ್ 26, 2022 ರ ಟೈಮ್ಸ್ ಆಫ್ ಇಂಡಿಯಾದ ವರದಿ ನಮಗೆ ಲಭ್ಯವಾಗಿದ್ದು, ಅದು ಆರೋಪಿಯನ್ನು ಗುಲ್ಶೇರ್ ಅಲಿಯಾಸ್ ಗುಲ್ಜೆಬ್ ಎಂದು ಗುರುತಿಸಿದೆ.
ಈ ಘಟನೆಯನ್ನು ಜಾಗರಣ್ ಮತ್ತು ಈಟಿವಿ ಭಾರತ್ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಈಟಿವಿ ಭಾರತ್ ವರದಿಯ ಪ್ರಕಾರ, ಪುರುಷ ಮತ್ತು ಮಹಿಳೆ ಹಲವಾರು ವರ್ಷಗಳಿಂದ ಸಂಬಂಧದಲ್ಲಿದ್ದರು ಮತ್ತು ರೂರ್ಕಿಯ ಕಲಿಯಾರ್ನಲ್ಲಿರುವ ಹೋಟೆಲ್ಗೆ ಸುಳ್ಳು ಹೆಸರಿನಲ್ಲಿ ಚೆಕ್ ಮಾಡಿದ್ದರು.
ಸಂತ್ರಸ್ತೆ ಕರ್ನಾಟಕದ ಮಂಗಳೂರು ನಿವಾಸಿ ರಮ್ಷಾ ಎಂದು ವರದಿಯಲ್ಲಿ ಗುರುತಿಸಲಾಗಿದೆ. ಆರೋಪಿಗಳು ಮಹಿಳೆಯನ್ನು ಕೊಂದು ಶವವನ್ನು ವಿಲೇವಾರಿ ಮಾಡಲು ಸೂಟ್ಕೇಸ್ನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ಹರಿದ್ವಾರ ಎಸ್ಪಿ (ಗ್ರಾಮೀಣ) ಪ್ರಮೇಂದ್ರ ದೋವಲ್ ಹೇಳಿದ್ದಾರೆ. ತನ್ನನ್ನು ಮದುವೆಯಾಗಲು ನಿರಾಕರಿಸಿದ ನಂತರ ಕೋಪಗೊಂಡ ಆರೋಪಿ ಸಂತ್ರಸ್ತೆಯನ್ನು ಕೊಂದಿದ್ದಾನೆ ಎಂದು ಪೊಲೀಸ್ ಮೂಲಗಳು ವರದಿಯಲ್ಲಿ ಉಲ್ಲೇಖಿಸಿದೆ.
ನಂತರ ನಾವು ಕಲಿಯಾರ್ ಪೊಲೀಸ್ ಠಾಣೆ ಅಧಿಕಾರಿ ಧರ್ಮೇಂದ್ರ ರಾಠಿ ಅವರನ್ನು ಸಂಪರ್ಕಿಸಿದೆವು, ಅವರು ಘಟನೆಗೆ ಯಾವುದೇ ಕೋಮು ಆಯಾಮವನ್ನು ನಿರಾಕರಿಸಿದರು, ಇಬ್ಬರೂ ದೂರದ ಸಂಬಂಧಿಕರು ಮತ್ತು ಒಂದೇ ಧರ್ಮಕ್ಕೆ ಸೇರಿದವರು ಎಂದು ಹೇಳಿದರು.
ಇದನ್ನು ಓದಿ: ರಾಹುಲ್ ಗಾಂಧಿ ವಯನಾಡ್ ಭೇಟಿ ಮುಂದೂಡಿದ್ದು ಹವಾಮಾನ ಕಾರಣಗಳಿಂದ ಹೊರತು ಅನಿವಾರ್ಯ ಕಾರಣಗಳಿಂದಲ್ಲ
ವೀಡಿಯೋ ನೋಡಿ: ಪಾಕಿಸ್ತಾನದಲ್ಲಿ ಹಿಂದುಗಳ ಜನಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ