ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದ ವೀಡಿಯೊದಂತೆ ಮನೆಯೊಂದು ಪ್ರವಾಹದಲ್ಲಿ ಸಂಪೂರ್ಣವಾಗಿ ಮುಳುಗುತ್ತಿರುವುದನ್ನು ತೋರಿಸುವ ಭದ್ರತಾ ತುಣುಕಿನ ಟೈಮ್ಲಾಪ್ಸ್ ವೀಡಿಯೊ ಇದೀಗ ವೈರಲ್ ಆಗುತ್ತಿದೆ. ಈ ವೀಡಿಯೋ ವಯನಾಡಿಗೆ ಸಂಬಂಧಿಸಿದ್ದು ಎಂದು ಹಂಚಿಕೊಳ್ಳಲಾಗುತ್ತಿದೆ.
ವೈರಲ್ ವೀಡಿಯೊದ ಕೆಲವು ಕೀಫ್ರೇಮ್ ಗಳನ್ನು ಬಳಸಿಕೊಂಡು ನಾವು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಇದು ವಯನಾಡ್ ಭೂಕುಸಿತಕ್ಕೆ ಮುಂಚಿನ 26 ಜೂನ್ 2024 ರಿಂದ ಹಲವಾರು ಯೂಟ್ಯೂಬ್ ವೀಡಿಯೊಗಳಿಗೆ ನಮ್ಮನ್ನು ಕರೆದೊಯ್ಯಿತು. ಇವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ವೀಡಿಯೊಗಳ ಶೀರ್ಷಿಕೆಯು ಈ ವೀಡಿಯೊ 16 ಜೂನ್ 2024 ಕ್ಕೆ ಹಿಂದಿನದು ಮತ್ತು ಚೀನಾದ ಗುವಾಂಗ್ಡಾಂಗ್‌ನ ಮೀಝೌನಿಂದ ಬಂದಿದೆ ಎಂದು ಹೇಳಿದೆ. ಇದಲ್ಲದೆ, ವೈರಲ್ ಕ್ಲಿಪ್ ಸೇರಿದಂತೆ ಈ ಎಲ್ಲಾ ವೀಡಿಯೊಗಳ ಎಡ ಮೇಲ್ಭಾಗದ ಮೂಲೆಯಲ್ಲಿ ದಿನಾಂಕವನ್ನು 16 ಜೂನ್ 2024 ಎಂದು ನಾವು ಗಮನಿಸಿದ್ದೇವೆ.
ಸೂಚನೆಯನ್ನು ತೆಗೆದುಕೊಂಡು, ನಾವು ಕೆಲವು ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ಇದು ಚೀನಾದ ವೆಬ್ಸೈಟ್‌ಗಳ ವರದಿಗಳು ಲಭ್ಯವಾಗಿವೆ.
ವೈರಲ್ ವೀಡಿಯೊದ ಸ್ಕ್ರೀನ್ಶಾಟ್‌ನಳನ್ನು ಹೊಂದಿರುವ ಜಿನ್ರಿಝಿಯಿ ಮತ್ತು ಸೊಹ್ಕ್ರಾಡಿಯೋ ಹಂಚಿಕೊಂಡ ಈ ವರದಿಗಳು 2024 ರ ಜೂನ್ 16 ರಂದು ಚೀನಾದ ಮೀಝೌ ನಗರವನ್ನು ಪ್ರವಾಹ ಅಪ್ಪಳಿಸಿದೆ ಎಂದು ಹೇಳಿದೆ. ಈ ಪ್ರವಾಹವು 38 ಸಾವುಗಳಿಗೆ ಕಾರಣವಾಯಿತು ಎಂದು ಅದು ಹೇಳಿದೆ.
ಆದ್ದರಿಂದ, ವಯನಾಡ್ ಭೂಕುಸಿತದ ದೃಶ್ಯಗಳಂತೆ ಚೀನಾದ ಪ್ರವಾಹ ಪೀಡಿತ ಪ್ರದೇಶದ ಹಳೆಯ ವೀಡಿಯೊ ವೈರಲ್ ಆಗುತ್ತಿದೆ.
ಇದನ್ನು ಓದಿ: ಐಟಿ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂಬುದು ಸುಳ್ಳು
ವೀಡಿಯೋ ನೋಡಿ: ಹಿಂದೂಗಳ ವ್ಯಾಪಾರ ಬಹಿಷ್ಕರಿಸಿ ಎಂದು ಅಮೆರಿಕದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ