ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ನಾಯಿ ಮತ್ತು ಅದರ ನಾಯಿಮರಿಗಳನ್ನು ಮಣ್ಣಿನಡಿಯಿಂದ ರಕ್ಷಿಸುವ ಒಂದು ನಿಮಿಷ ಮೂವತ್ತು ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದು ಭೂಕುಸಿತ ಪೀಡಿತ ವಯನಾಡ್‌ನ ಇತ್ತೀಚಿನ ಘಟನೆ ಎಂದು ಹೇಳಲಾಗುತ್ತಿದೆ.
ಈ ವೀಡಿಯೊವನ್ನು ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಬಳಕೆದಾರರು ಇದು ವಯನಾಡ್‌ನ ಭೂಕುಸಿತಕ್ಕೆ ಸಂಬಂಧಿಸಿದ ಘಟನೆಯದು ಎಂದು ಹೇಳಿಕೊಂಡಿದ್ದಾರೆ.
ಅಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇದನ್ನೂ ಓದಿ: ವಯನಾಡಿನ ಸಂತ್ರಸ್ತರಿಗೆ RSS ಸಹಾಯ ಮಾಡುತ್ತಿದೆ ಎಂದು ಹಳೆಯ ಮತ್ತು ಸಂಬಂಧವಿರದ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ
ಫ್ಯಾಕ್ಟ್ ಚೆಕ್:
ವೈರಲ್ ತುಣುಕಿನ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ಲೆನ್ಸ್ ಹುಡುಕಾಟ ನಡೆಸಿದಾಗ ಅಕ್ಟೋಬರ್ 19, 2021 ರ ಮನೋರಮಾ ಆನ್ಲೈನ್‌ನ ವರದಿ ಲಭ್ಯವಾಗಿದೆ. ಪಾಲಕ್ಕಾಡ್‌ನಲ್ಲಿ ಭೂಕುಸಿತದ ಅಡಿಯಲ್ಲಿ ಸಿಲುಕಿದ್ದ ತಾಯಿ ನಾಯಿ ಮತ್ತು ಅದರ ನಾಯಿಮರಿಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ಅದೇ ವೀಡಿಯೊದ ಸ್ಕ್ರೀನ್ಗ್ರಾಫ್ ಅನ್ನು ವರದಿ ಮಾಡಾಗಿದೆ.
ನಂತರ ನಾವು ಗೂಗಲ್‌ನಲ್ಲಿ “ಪಾಲಕ್ಕಾಡ್”, “ಡಾಗ್ ರೆಸ್ಕ್ಯೂವ್ಡ್” ಮತ್ತು “ಭೂಕುಸಿತ” ಎಂಬ ಕೀವರ್ಡ್‌ಗಳನ್ನು ಹುಡುಕಿದೆವು, ಇದು ಅಕ್ಟೋಬರ್ 2021 ರ ದಿ ನ್ಯೂಸ್ ಮಿನಿಟ್‌ನ ವರದಿಗೆ ನಮ್ಮನ್ನು ಕರೆದೊಯ್ಯಿತು. ವೈರಲ್ ತುಣುಕಿನಲ್ಲಿ ಕಂಡುಬರುವ ದೃಶ್ಯಗಳನ್ನು ಹೋಲುವ ಚಿತ್ರವನ್ನು ಇದು ಒಳಗೊಂಡಿದೆ ಮತ್ತು “ಅಕ್ಟೋಬರ್ 10 ರಂದು, ಕೇರಳದ ಪಾಲಕ್ಕಾಡ್-ಮಲಪ್ಪುರಂ ಜಿಲ್ಲೆಗಳ ಗಡಿಯಲ್ಲಿರುವ ಹಳ್ಳಿಯಲ್ಲಿ ಅಂಗಡಿ ನಡೆಸುತ್ತಿರುವ ಸಬಿತಾ ಮತ್ತು ಅಶ್ರಫ್ ದಂಪತಿಗಳು ನಾಯಿ ಅಳುವುದನ್ನು ಕೇಳಿದರು” ಎಂದು ಹೇಳಲಾಗಿದೆ.
“ಅವರು ಹುಡುಕಿದರು ಆದರೆ ಗೋಳಾಟಗಳು ಮತ್ತು ಕಿರುಚಾಟಗಳು ಎಲ್ಲಿಂದ ಬಂದವು ಎಂದು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಅವರು ಇನ್ನೂ ಎರಡು ದಿನಗಳವರೆಗೆ ನಾಯಿಯ ಅದೇ ಕೂಗನ್ನು ಕೇಳಿದರು, ಅಕ್ಟೋಬರ್ 12 ರಂದು, ಕುಟುಂಬವು ನಿಕಟ ತಪಾಸಣೆ ನಡೆಸಲು ನಿರ್ಧರಿಸಿತು. ಅಂತಿಮವಾಗಿ, ಅವರು ಗೋಳಾಟ ಎಲ್ಲಿಂದ ಬಂತು ಎಂದು ಕಂಡುಕೊಂಡರು – ಮಣ್ಣಿನ ದಿಬ್ಬದ ಕೆಳಗೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಸಂಭವಿಸಿದ ಸಣ್ಣ ಭೂಕುಸಿತದಲ್ಲಿ ನಾಯಿ ಮತ್ತು ಅದರ ಎರಡು ನಾಯಿಮರಿಗಳು ಮಣ್ಣಿನ ಅಡಿಯಲ್ಲಿ ಹೂತುಹೋಗಿದ್ದವು.
ಅಶ್ರಫ್ ಹೇಳಿದ್ದಾಗಿ, “ಈ ಪ್ರದೇಶದಲ್ಲಿ ಮೂರು ದಿನಗಳಿಂದ ನಾಯಿಯ ಗೋಳಾಟದ ಶಬ್ದವನ್ನು ನಾವು ಕೇಳಿದ್ದೇವೆ. ಮಳೆಯಿಂದಾಗಿ ಸಣ್ಣ ಭೂಕುಸಿತ ಸಂಭವಿಸಿದೆ ಮತ್ತು ನಾಯಿಗಳು ಮಣ್ಣಿನ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾವೆ. ನಾವು ಮಸುಕಾದ ಶಬ್ದಗಳನ್ನು ಮಾತ್ರ ಕೇಳಬಹುದಾಗಿತ್ತು. ನಾವು ಮಣ್ಣನ್ನು ಸ್ವಲ್ಪ ಅಗೆದು ನಾಯಿಯ ತಲೆಯನ್ನು ನೋಡಿದೆವು. ನಾವು ಮತ್ತಷ್ಟು ಅಗೆದಾಗ, ನಾವು ಆರು ಮರಿಗಳನ್ನು ನೋಡಿದೆವು. ಆದಾಗ್ಯೂ, ಕೇವಲ ಎರಡು ಮರಿಗಳು ಮಾತ್ರ ಬದುಕುಳಿದವು. ಈಗ, ತಾಯಿ ನಾಯಿ ಮತ್ತು ಅದರ ಬದುಕುಳಿದ ಶಿಶುಗಳು ಆರೋಗ್ಯವನ್ನು ಮರಳಿ ಪಡೆದಿವೆ ಮತ್ತು ಸುರಕ್ಷಿತವಾಗಿದ್ದಾರೆ. ಎಂದು ಅವರು ಹೇಳಿದ್ದಾರೆ.
ತಾಯಿ ನಾಯಿ ಮತ್ತು ಅದರ ನಾಯಿಮರಿಗಳನ್ನು ರಕ್ಷಿಸುವ ವೈರಲ್ ತುಣುಕುಗಳೊಂದಿಗೆ ಮನೋರಮಾ ನ್ಯೂಸ್‌ನ ಯೂಟ್ಯೂಬ್ ವೀಡಿಯೊವನ್ನು ಸಹ ಇದು ಒಳಗೊಂಡಿದೆ.
ಪಾಲಕ್ಕಾಡ್-ಮಲಪ್ಪುರಂ ಗಡಿಯಲ್ಲಿ ಮೂರು ದಿನಗಳ ಕಾಲ ಅಂಗಡಿಯೊಂದರ ಹಿಂದೆ ಮಣ್ಣಿನಿಂದ ಮುಚ್ಚಲ್ಪಟ್ಟ ನಂತರ ನಾಯಿಗಳು ಮತ್ತು ಎರಡು ಮರಿಗಳು ಸಣ್ಣ ಭೂಕುಸಿತದಿಂದ ಬದುಕುಳಿದಿವೆ ಮತ್ತು ಸ್ಥಳೀಯರು ರಕ್ಷಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್‌ನ ಮತ್ತೊಂದು ವರದಿ ದೃಢಪಡಿಸಿದೆ.
ಆದ್ದರಿಂದ, ಪಾಲಕ್ಕಾಡ್‌ನ ಹಳೆಯ ವೀಡಿಯೊವನ್ನು ಭೂಕುಸಿತ ಪೀಡಿತ ವಯನಾಡ್‌ನಿಂದ ನಾಯಿ ಮತ್ತು ಅದರ ನಾಯಿಮರಿಗಳನ್ನು ರಕ್ಷಿಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿ: 2001ರಲ್ಲಿ ಎಲ್ ಸಾಲ್ವಡಾರ್ ಭೂಕಂಪದ ಚಿತ್ರವನ್ನು ವಯನಾಡ್ ಭೂಕುಸಿತದ ದೃಶ್ಯ ಎಂದು ಹಂಚಿಕೊಳ್ಳಲಾಗುತ್ತಿದೆ
ವೀಡಿಯೋ ನೋಡಿ: ಕೇರಳದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಎಂದಿರುವ ಆಜ್‌ತಕ್ ವರದಿ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ