ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ನಲ್ಲಿ ರಜತ ಪದಕ ಪಡೆದ ಟರ್ಕಿಯ ಯೂಸುಫ್ ಡಿಕೆಕ್ ಅವರಿಗೆ ಸಂಬಂಧಿಸಿದಂತೆ ಹಲವು ಕತೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲೂ ಪ್ರಮುಖವಾಗಿ “ಯೂಸುಫ್ ಅವರು ಒಂದು ಸಣ್ಣ ಗ್ಯಾರೆಜ್ ಒಂದರಲ್ಲಿ ಮ್ಯಾಕನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಇತ್ತೀಚೆಗ ತಮ್ಮ ವಿಚ್ಛೇದಿತ ಪತ್ನಿಯೊಂದಿಗಿನ ಗಲಾಟೆಯ ನಂತರ ನೇರವಾಗಿ ಒಲಂಪಿಕ್ ಶೂಟಿಂಗ್‌ಗೆ ಭಾಗಿಯಾಗಿ ಪದಕ ಗೆದ್ದಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
Dikec Yusuf, who only recently took up shooting after a particularly heated argument with his ex-wife, credits his success to his newfound passion for seeing his kids and a relentless drive to prove his ex wrong. "I never thought I'd be here," Yusuf said, shrugging nonchalantly.… pic.twitter.com/ka4c8PAraM
— 滷味 (@JaydenMaisie) August 2, 2024
ಇನ್ನೂ ಕೆಲವರು ಯೂಸುಫ್ ಡಿಕೆಕ್ ಅವರ ಶೂಟಿಂಗ್ ಫೋಟೋವನ್ನು ಹಂಚಿಕೊಂಡು “ಇದೇ ಮೊದಲ ಬಾರಿಗೆ ಯೂಸುಫ್ ಡಿಕೆಕ್ ಅವರು ಒಲಂಪಿಕ್ ಶೂಟಿಂಗ್‌ಗೆ ಭಾಗಿಯಾಗಿದ್ದಾರೆ. ಹೀಗಾಗಿ ಅವರು ಯಾವುದೇ ಸಲಕರಣೆಗಳನ್ನು ಬಳಸದೆ, ಅವಶ್ಯಕ ಪರಿಕರಗಳನ್ನು ಉಪಯೋಗಿಸದೇ ಪದವನ್ನು ಗೆದ್ದಿದ್ದಾರೆ” ಎಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಹೀಗೆ ಡಿಕೆಕ್ ಅವರ ಹಿನ್ನೆಲೆಯ ಕುರಿತು ಹಲವಾರು ಕತೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು. ಇದರಲ್ಲಿ ಸತ್ಯ ಯಾವದು? ಸುಳ್ಳು ಯಾವುದು? ಎಂಬ ಗೊಂದಲ ಸಾರ್ವಜನಿಕರಲ್ಲಿ ಮೂಡಿದೆ. ಹೀಗಾಗಿ ಈ ಫ್ಯಾಕ್ಟ್‌ಚೆಕ್‌ನಲ್ಲಿ ವೈರಲ್ ಪೋಸ್ಟ್‌ನಲ್ಲಿ ಅಂಶಗಳ ಕುರಿತು ಪರಿಶೀಲನೆ ನಡೆಸೋಣ
https://twitter.com/sheela2010/status/1819253073174581266
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಗಳ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್‌ಗೆ ಸಂಬಂಧ ಪಟ್ಟಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಬರಹಗಳಿಗೆ ಭಿನ್ನವಾದ ಮಾಹಿತಿಗಳು ಲಭ್ಯವಾಗಿದ್ದು. ವೈರಲ್ ಪೋಸ್ಟ್ ಸುಳ್ಳು ಎಂದು ಸಾಬೀತು ಪಡಿಸುವ ಹಲವು ಅಂಶಗಳು ಪತ್ತೆಯಾಗಿದೆ.
ಇದರಲ್ಲಿ ಪ್ರಮುಖವಾಗಿ ಯೂರೋ ನ್ಯೂಸ್‌ನ ವರದಿಯ ಪ್ರಕಾರ ಯೂಸುಫ್ ಡಿಕೆಕ್ ಅವರಿಗೆ ಪ್ಯಾರಿಸ್ 2024ರ ಒಲಿಂಪಿಕ್ಸ್ ಹೊಸದೇನು ಅಲ್ಲ ಈ ಒಲಿಂಪಿಕ್ಸ್ ಅವರ 5ನೇ ಒಲಿಂಪಿಕ್ಸ್ ಆಗಿದೆ. 2008, 2012, 2016 ಮತ್ತು 2020 ರಲ್ಲಿ ಟರ್ಕಿಯನ್ನು ಪ್ರತಿನಿಧಿಸಿದ್ದಾರೆ. ಅವರು ವಿವಿಧ ಪಿಸ್ತೂಲ್ ಈವೆಂಟ್‌ಗಳಿಗಾಗಿ ವಿಶ್ವ ಮತ್ತು ಯುರೋಪಿಯನ್ ಚಾಂಪಿಯನ್‌ಶಿಪ್‌ಗಳಿಂದ ಹಲವಾರು ಪ್ರಶಸ್ತಿಗಳನ್ನು ಹೊಂದಿದ್ದಾರೆ. ಅವರು ಟರ್ಕಿಶ್ ಜೆಂಡರ್ಮೆರಿಯ ನಿವೃತ್ತ ನಾನ್-ಕಮಿಷನ್ಡ್ ಅಧಿಕಾರಿಯೂ ಆಗಿದ್ದಾರೆ ಎಂದು ಉಲ್ಲೇಖಿಸಿದೆ. ಈ ವರದಿಯ ಮೂಲಕವೆ ಯೂಸುಫ್ ಅವರು ಮ್ಯಾಕೆನಿಕ್ ಅಲ್ಲ ಎಂಬುದು ಕೂಡ ಸಾಬೀತಾಗಿದೆ.
ಇನ್ನು ಒಲಿಂಪಿಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಯೂಸುಫ್ ಡಿಕೆಕ್ ಅವರು ಗಾಜಿ ಯೂನಿವರ್ಸಿಟಿ ಸ್ಕೂಲ್ ಆಫ್ ಫಿಸಿಕಲ್ ಟ್ರೇನಿಂಗ್‌ನಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದರ ಜೊತೆಗೆ ಡಿಕೆಕ್ ಅವರು 2001ರಿಂದ ವಿವಿಧ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ವೈರಲ್ ಪೋಸ್ಟ್‌ನಲ್ಲಿನ ಯಾವುದೇ ಅಂಶಗಳು ಕೂಡ ಸತ್ಯದಿಂದ ಕೂಡಿಲ್ಲ ಎಂಬುದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ಯೂಸುಫ್ ಡಿಕೆಕ್ ಅವರು ಗ್ಯಾರೆಜ್ ಮ್ಯಾಕೆನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಸುಳ್ಳು. ಇದರ ಜೊತೆಗೆ ಹಂಚಿಕೊಳ್ಳಲಾಗುತ್ತಿರುವ ಇನ್ನಿತರ ಅಂಶಗಳಿಗೆ ಯಾವುದೇ ಪುರಾವೆಗಳು ಕೂಡ ಇಲ್ಲ. ಹಾಗಾಗಿ ಇಂತಹ ವೈರಲ್ ಸುದ್ದಿಗಳನ್ನು ನಂಬುವ ಅಥವಾ ಶೇರ್ ಮಾಡುವ ಮುನ್ನ ಒಮ್ಮೆ ಎಚ್ಚರ ವಹಿಸಿ. ಯಾವುದೇ ಸುದ್ದಿಗಳನ್ನಾದರು ಪರಿಶೀಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ
ಇದನ್ನೂ ಓದಿ : Fact Check: ವಿಶ್ವದ ಅತಿ ಎತ್ತರದ ರೈಲು ಸೇತುವೆಯನ್ನು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ಎಂದು AI ಪೋಟೋ ವೈರಲ್
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ