ಹಮಾಸ್ ನಾಯಕ ಇಸ್ಮೈಲ್ ಹನಿಯಾನನ್ನು ಇಸ್ರೇಲ್‌ನ ಮೊಸಾದ್ ತನ್ನ ರಹಸ್ಯ ಕಾರ್ಯಾಚರಣೆಯ ಮೂಲಕ ಆತನನ್ನು ಹತ್ಯೆ ಮಾಡಿದೆ. ಈ ಹತ್ಯೆ ಜಗತ್ತಿನಲ್ಲಿ ಬಹಳ ದೊಡ್ಡ ಸಂಚಲನವನ್ನು ಉಂಟು ಮಾಡಿದ್ದು, ಇಸ್ರೇಲ್‌ಮ ಮೊಸಾದ್‌ನ ಈ ಕಾರ್ಯಕ್ಕೆ ಜಗತ್ತಿನಾದ್ಯಂತ ಮಿಶ್ರ ಪ್ರತಿಕ್ರಿಯೆಗಳು ಬರತೊಡಗಿವೆ. ಇದರ ನಡುವೆ ಇದೀಗ ಇಸ್ರೇಲ್‌ನ ಗುಪ್ತಚರ ಇಲಾಖೆಯ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶದಿಂದ ವಿಡಿಯೋವೊಂದು ವೈರಲ್ ಆಗುತ್ತದೆ
ಈ ವಿಡಿಯೋದಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯಾನನ್ನು ಹತ್ಯೆ ಮಾಡಿದ ನಂತರ ಮೊಸಾದ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಂಭ್ರಮಿಸಿದ್ದಾರೆ ಮತ್ತು ಸಂಭ್ರಮದ ವೇಳೆ ನೃತ್ಯವನ್ನು ಮಾಡಿ ವಿಡಿಯೋ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ರಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 6 ಮಾರ್ಚ್ 2016ರಂದು ಗೋಹಿಲ್ ಹೆಸರಿನ ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋವೊಂದು ಪತ್ತೆಯಾಗಿದೆ.
ಈ ವಿಡಿಯೋದಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ಇದೊಂದು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ವಿಡಿಯೋ ಆಗಿದ್ದು, ಬಾಸ್ಕೆಟ್ ಬಾಲ್ ತಂಡವಾದ ಸ್ಟಾರ್ ಹೀಲ್ಸ್‌ನ ಅಧಿಕೃತ YouTube ಚಾನೆಲ್ ಇದಾಗಿದೆ. ಉತ್ತರ ಕೆರೋಲಿನಾದ ತಂಡವು ಡ್ಯೂಕ್ ನಲ್ಲಿ ತನ್ನ ಮೊದಲ ಜಯವನ್ನು ಪಡೆದಿರುವುದರಿಂದ ಟಾರ್ ಹೀಲ್ಸ್ ನ ಲಾಕರ್ ರೂಮ್ ನಲ್ಲಿ ವಿಜಯದ ಸಂಭ್ರಮಾಚರಣೆ ಮಾಡಲಾಗಿದೆ ಎಂದು ಈ ವಿಡಿಯೋದ ಡಿಸ್‌ಕ್ರಿಪ್ಷನ್‌ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು 5 ಮಾರ್ಚ್ 2017 ರಂದು ಕೆರೋಲಿನಾದ ಬಾಸ್ಕೆಟ್ ಬಾಲ್ ನ ಅಧಿಕೃತ ಎಕ್ಸ್ (ಅಂದರೆ ಈ ಹಿಂದಿನ ಟ್ವಿಟರ್) ಹ್ಯಾಂಡಲ್ ನಲ್ಲಿ ಇದೇ ರೀತಿಯ ಫೋಟೋಗಳನ್ನು ಪೋಸ್ಟ್ ಮಾಡಲಾಗಿರುವುದು ಕಂಡುಬಂದಿದೆ. ವಿಡಿಯೋ ಮತ್ತು ಫೋಟೋ ಎರಡೂ ಕೂಡ 2016 ರಿಂದ ಸಾಮಾಜಿಕ ಜಾಲತಾಣದಲ್ಲಿದೆ. ಅವುಗಳನ್ನು ಇತ್ತೀಚಿನ ಹಮಾಸ್ ನಾಯಕನ ಹತ್ಯೆಗೆ ಅಥವಾ ಮುಖ್ಯಸ್ಥರಿಗೆ ಲಿಂಕ್ ಮಾಡಲು ಯಾವುದೇ ರೀತಿಯ ಪುರಾವೆಗಳು ಇಲ್ಲಿ ಇಲ್ಲ ಎಂಬುದು ಸಾಬೀತಾಗಿದೆ.
Locker room celebration. #UNCBBall https://t.co/FzqVhXI9lH pic.twitter.com/57mS4vS9MH
— Carolina Basketball (@UNC_Basketball) March 6, 2016
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ರೀತಿಯಲ್ಲಿ ಹಮಾಸ ನಾಯಕ ಇಸ್ಮಾಯಿಲ್ ಹನಿಯಾನಾ ಹತ್ಯೆಗೆ ಇಸ್ರೇಲ್‌ನ ಗುಪ್ತಚರ ಇಲಾಖೆಯಾದ ಮೊಸಾದ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನೃತ್ಯ ಮಾಡಿ ಸಂಭ್ರಮಿಸಿದ್ದಾರೆ ಎಂಬುದು ಸುಳ್ಳಾಗಿದೆ. ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸುವುದು ಉತ್ತಮ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ