Fact Check | ಬಾಕ್ಸರ್ ಇಮಾನೆ ಖಲೀಫ್ ಲೈಂಗಿಕ ಅಲ್ಪಸಂಖ್ಯಾತರು ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ!

“XY ಕ್ರೋಮೋಸೋಮ್‌ಗಳನ್ನು ಹೊಂದಿರುವ ಅವರು ಜೈವಿಕ ಪುರುಷ ಲಕ್ಷಣಗಳನ್ನು ಹೊಂದಿರುವ, ಪುರುಷ ದೈಹಿಕ ಸಾಮರ್ಥ್ಯವಿರುವ ಬಾಕ್ಸರ್ ಇಮಾನೆ ಖಲೀಫ್ ಅವರನ್ನು ಮಹಿಳೆಯರ ಬಾಕ್ಸಿಂಗ್‌ಗೆ ಅನುಮತಿ ನೀಡಲಾಗಿದೆ. ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಅತಿದೊಡ್ಡ ರಾಜಕೀಯ ನಡೆದಿದೆ. ಆದರೆ ಈ ಬಗ್ಗೆ ಯಾರು ಕೂಡ ಧೈರ್ಯವಾಗಿ ಪ್ರಶ್ನೆ ಮಾಡುತ್ತಿಲ್ಲ ಇದರಿಂದ ಇಟಲಿಯ 25 ವರ್ಷದ ಬಾಕ್ಸರ್ ಏಂಜೆಲಾ ಕ್ಯಾರಿನಿ ಅವರಿಗೆ ಬಹುದೊಡ್ಡ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಸಿಗಬೇಕು” ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಬಾಕ್ಸರ್ ಇಮಾನೆ ಖಲೀಫ್ ಲೈಂಗಿಕ ಅಲ್ಪಸಂಖ್ಯಾತೆ ಎಂದು ಬರೆದು ಪೋಸ್ಟ್‌ ಮಾಡುತ್ತಿದ್ದಾರೆ.

ಈ ರೀತಿಯ ಪೋಸ್ಟ್‌ಗಳನ್ನು ಜನ ಸಾಮಾನ್ಯರು ಮಾಡಿದ್ದರೆ ಇಷ್ಟು ದೊಡ್ಡ ಮಟ್ಟದ ವಿವಾದವಾಗುತ್ತಿರಲಿಲ್ಲ. ಆದರೆ ಜಗತ್ತಿನಾದ್ಯಂತ ಪ್ರಭಾವಿಗಳು ಎಂದು ಗುರುತಿಸಿಕೊಂಡಿರುವ ಹಲವರು ಬಾಕ್ಸರ್ ಇಮಾನೆ ಖಲೀಫ್ ಲೈಂಗಿಕ ಅಲ್ಪ ಸಂಖ್ಯಾತರು ಎಂದು ಪೋಸ್ಟ್‌ ಮಾಡುತ್ತಿದ್ದು, ಇದು ಹಲವು ರೀತಿಯಾದ ಸಳ್ಳು ಸುದ್ದಿ ಹಬ್ಬಲು ಕಾರಣವಾಗಿದೆ. ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಷಯದ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಇಮಾನೆ ಖಲೀಫ್  ಅವರಿಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮ ವರದಿಗಳು ಮತ್ತು ಅಂಕಣಗಳು ಪತ್ತೆಯಾದವು. ಈ ಬಹುತೇಕ ವರದಿಗಳಲ್ಲಿ ಇಮಾನೆ ಖಲೀಫ್ ಲೈಂಗಿಕ ಅಲ್ಪಸಂಖ್ಯಾತರು ಎಂಬುದಕ್ಕೆ ಯಾವುದೇ ಪುರವೆಗಳು ಇಲ್ಲ ಎಂಬುದನ್ನು ಉಲ್ಲೇಖಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 2 ಮೇ 1999 ರಂದು ಅಲ್ಜೀರಿಯಾದಲ್ಲಿ ಜನಿಸಿದರು ಮತ್ತು ವಿಶ್ವಾದ್ಯಂತ ಹಲವಾರು ಪಂದ್ಯಾವಳಿಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ. ಈ ಹಿಂದೆ 2019 ರ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದರು ಆ ವೇಳೆ ಯಾರೂ ಕೂಡ ಈಕೆಯ ವಿರುದ್ಧ ಚಕಾರವನ್ನು ಎತ್ತಲಿಲ್ಲ. ಮತ್ತು ಈಕೆ ಲೈಂಗಿಕ ಅಲ್ಪಸಂಖ್ಯಾತ ಎಂಬುದನ್ನು ಉಲ್ಲೇಖಿಸಿರಲಿಲ್ಲ. ಒಂದು ವೇಳೆ ಇಮೆನ್‌ ಅವರಲ್ಲಿ ಪುರುಷ ಗುಣಲಕ್ಷಣಗಳು ಹೊಂದಿದ್ದರೆ, ಅದು ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬಹಿರಂಗವಾಗಬೇಕಿತ್ತು.

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ 2022 ರ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಖೇಲಿಫ್ ಬೆಳ್ಳಿ ಪದಕವನ್ನು ಪಡೆದಿದ್ದರು . ಈ ಗೆಲುವಿನ ಬಳಿಕ ಅವರು ವಿಶ್ವ ಚಾಂಪಿಯನ್‌ಶಿಪ್ ಪದಕವನ್ನು ಗೆದ್ದ ಮೊದಲ ಮಹಿಳಾ ಅಲ್ಜೀರಿಯನ್ ಬಾಕ್ಸರ್ ಇಮಾನೆ ಖಲೀಫ್ ಎಂದು ಅವರನ್ನು ಗುರುತಿಸಲಾಯಿತು. ಅಲ್ಜೀರಿಯಾದ ಓರಾನ್‌ನಲ್ಲಿ ನಡೆದ 2022 ರ ಮೆಡಿಟರೇನಿಯನ್ ಕ್ರೀಡಾಕೂಟದಲ್ಲಿ ಅವರು ಮಹಿಳೆಯರ 63 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.

ಇನ್ನು ಈ ಕುರಿತು IOC ( International Olympic Committee) ಕೂಡ ಸ್ಪಷ್ಟನೆಯನ್ನು ನೀಡಿದ್ದು, ವಿವಾದಕ್ಕೆ ಗುರಿಯಾಗಿರುವ ಅಥ್ಲೆಟ್‌ಗಳಿಗೆ ವೈಜ್ಙಾನಿಕವಾಗಿ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಹಿಂದೆ ಇದಕ್ಕೆ ಬೇಕಾದ ವೈದ್ಯಕೀಯ ಪರೀಕ್ಷೆಗಳು ಸೇರಿದಂತೆ ಎಲ್ಲಾ ರೀತಿಯ ಮಾನದಂಡಗಳನ್ನು ಮತ್ತು ಅರ್ಜತೆಗಳನ್ನು ಪರಿಶೀಲಿಸಿಯೇ ಅಥ್ಲೇಟ್‌ಗಳಿಗೆ ಸ್ಪರ್ಧಿಸಲು ಅವಕಾಶವನ್ನು ಮಾಡಿಕೊಡಲಾಗಿದೆ ಎಂದು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿಯನ್ನು ನೀಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಬಾಕ್ಸರ್ ಇಮಾನೆ ಖಲೀಫ್ ಲೈಂಗಿಕ ಅಲ್ಪಸಂಖ್ಯಾತರು ಎಂಬುದುಕ್ಕೆ ಯಾವುದೇ ರೀತಿಯಾದ ಪುರಾವೆಗಳು ಇಲ್ಲ. ಇನ್ನು ಕ್ರೋಮೋಜೋನ್‌ ವಿಚಾರದಲ್ಲಿ ಕೂಡ ವೈದ್ಯಕೀಯ ಪರೀಕ್ಷೆಯ ನಂತರವೇ ಇಮಾನೆ ಖಲೀಫ್ ಒಲಿಂಪಿಕ್‌ ಸ್ಪರ್ಧೆಗೆ ಅರ್ಹರಾಗಿದ್ದಾರೆ. ಈ ಹಿಂದೆಯೂ ಕೂಡ ಹಲವು ಮಹಿಳಾ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಕೂಡ ವಿಜೇತರಾಗಿದ್ದು, ಅಲ್ಲಿಯೂ ಅವರಿಗೆ ಹಲವು ಪರೀಕ್ಷೆಗಳನ್ನು ನಡೆಸಿದ ನಂತರ ಅವರು ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಸುದ್ದಿ ಸುಳ್ಳಿನಿಂದ ಕೂಡಿದೆ. ಇಂತಹ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಿರುವುದು ಉತ್ತಮ..


ಇದನ್ನೂ ಓದಿ : Fact Check: ಇತ್ತೀಚಿನ ರೈಲು ಅಪಘಾತಗಳು ತಾಂತ್ರಿಕ ದೋಷದಿಂದ ಸಂಭವಿಸಿವೆಯೇ ಹೊರತು ಗುಲ್ಜಾರ್ ಶೇಖ್ ಎಂಬ ಯೂಟೂಬರ್ ಕಾರಣನಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *