Fact Check | ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಸೇನೆಯನ್ನು ನಿಯೋಜಿಸಲಾಗಿದೆ ಎಂಬುದು ಸುಳ್ಳು

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದದ್ದಾರೆ, ಈ ವೇಳೆ ಬಾಂಗ್ಲಾದ ಗಲಭೆಯನ್ನು ನಿಯಂತ್ರಿಸುವಾಗ ಸೇನಾ ಸಿಬ್ಬಂದಿ ಬೆಂಗಾಳಿಯಲ್ಲಿ ಮಾತನಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಹಲವು ತಪ್ಪು ಸಂದೇಶಗಳಿಂದ ಕೂಡ ಹಂಚಿಕೊಳ್ಳಲಾಗುತ್ತಿದ್ದು, ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ವಿಡಿಯೋ ಬಂದರೂ ಅದು ನಿಜವೆಂದು ನಂಬಿಕೊಳ್ಳುವ ವರ್ಗಗಳು ಉತ್ಪತಿಯಾಗಿವೆ. ಹೀಗಾಗಿ ಜನ ಸಾಮಾನ್ಯರಲ್ಲಿ ಗೊಂದಲ ಕೂಡ ಮೂಡುತ್ತಿವೆ.

ಇದರ ಜೊತೆಗೆ ಸಾಕಷ್ಟು ಮಂದಿ ಬಾಂಗ್ಲಾದೇಶದ ಸೇನೆ ಕೇವಲ ಹಿಂದೂಗಳಿಗೆ ಮಾತ್ರ ಏಕೆ ರಕ್ಷಣೆಯನ್ನು ನೀಡುತ್ತಿದೆ ಎಂದು ಹಲವರು ಪ್ರಶ್ನಿಸಿದ್ದು, ಇದು ಮೋದಿ ಸರ್ಕಾರದ ಒಳ ಒಪ್ಪಂದ ಎಂದು ಕೆಲ ಅಂತರಾಷ್ಟ್ರೀಯ  ಮಾಧ್ಯಮ ಸಂಸ್ಥೆಗಳು ವರದಿಯನ್ನು ಮಾಡಿವೆ. ಹೀಗಾಗಿ ಈ ಸುದ್ದಿಯನ್ನು ನಿಜವೆಂದು ನಂಬಿ ಸಾಕಷ್ಟು ಜನ ಇದೇ ವಿಡಿಯೋವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಕೂಡ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವನ್ನು ಇಂಗ್ಲೀಷ್‌ಗೆ ಅನುವಾದಿಸಲಾಯಿತು. ಈ ವೇಳೆ ವಿಡಿಯೋದಲ್ಲಿ ಹಿಂದೂ ಅಲ್ಪಸಂಖ್ಯಾತರನ್ನು ರಕ್ಷಿಸಲು ಸೇನೆಯ ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ ಎಲ್ಲಿಯೂ ಮಾತನಾಡದಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇನ್ನು ಇದೇ ವಿಡಿಯೋವನ್ನು ಬಳಸಿಕೊಂಡು ಕೆಲವರು ಬಾಂಗ್ಲಾದೇಶದ ಆರ್ಮಿಯಲ್ಲಿ ಭಾರತ ಸೇನೆಯ ರಾ ಇರಬಹುದು ಎಂದು ಸುಳ್ಳು ಮಾಹಿತಿಯನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ.

ಇನ್ನು ಈ ವಿಡಿಯೋದಲ್ಲಿ ಸೇನಾ ಸಿಬ್ಬಂದಿಯು ಗನ್ ಮಿಸ್ ಫೈರ್ ಬಗ್ಗೆ ಮಾತನಾಡಿದ್ದಾರೆ ಮತ್ತು ಅದನ್ನು ಚಿತ್ರೀಕರಿಸಿದ ವ್ಯಕ್ತಿ ಒಳಗೆ ಎಷ್ಟು ಭಾರತೀಯ ಸೇನೆ/ಪೊಲೀಸ್ ಸಿಬ್ಬಂದಿ ಇದ್ದಾರೆ ಎಂದು ಕೇಳಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮುದಾಯಕ್ಕಾಗಿ ಸೇನೆಯನ್ನು ಎಲ್ಲಿಯೂ ನಿಯೋಜಿಸಿಲ್ಲ ಎಂದು ಬಾಂಗ್ಲಾದೇಶದ ಪತ್ರಕರ್ತರೊಬ್ಬರು ದಿ ಕ್ವಿಂಟ್‌ ವೆಬ್‌ತಾಣಕ್ಕೆ ಮಾಹಿತಿಯನ್ನು ನೀಡಿರುವುದು ಕೂಡ ಕಂಡು ಬಂದಿದೆ. ಹೀಗಾಗಿ ಹಿಂದೂ ಸಮುದಾಯದವರ ರಕ್ಷಣೆಗೆ ಸೇನೆ ನಿಯೋಜಿಸಿರುವ ಕುರಿತು ಅಧಿಕೃತ ವರದಿ ಬಂದಿಲ್ಲ. 

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಸೇನೆಯನ್ನು ನಿಯೋಜಿಸಲಾಗಿದೆ ಎಂಬುದು ಸುಳ್ಳು. ಈ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಮತ್ತು ವರದಿಗಳು ಕಂಡು ಬಂದಿಲ್ಲ. ಇನ್ನು ವಿಡಿಯೋದಲ್ಲಿನ ಸೈನಿಕರು ಕೂಡ ಒಂದು ಸಮುದಾಯದ ರಕ್ಷಣೆಗೆ ನಿಂತಿರುವ ಕುರಿತು ಮಾತನಾಡಿರುವುದು ಕಂಡು ಬಂದಿಲ್ಲ. ಹಾಗಾಗಿ ಇದೊಂದು ದಾರಿ ತಪ್ಪಿಸುವ ವಿಡಿಯೋವಾಗಿದ್ದು, ಇದನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check: ಬಾಂಗ್ಲಾದೇಶದಲ್ಲಿ ಹಿಂದು ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಯನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *