Fact Check | ಶೇಖ್ ಹಸೀನಾ ಅಳುತ್ತಿರುವ ಹಳೆಯ ಫೋಟೋವನ್ನು ಇತ್ತೀಚಿನದು ಎಂದು ತಪ್ಪಾಗಿ ಹಂಚಿಕೆ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಅವರು ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತಕ್ಕೆ ಬಂದ ನಂತರದಲ್ಲಿ ಈ ಫೋಟೋವನ್ನು ಸೆರೆ ಹಿಡಿಯಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹಲವರು “ಭಾರತದಿಂದ ಯುನೈಟೆಡ್ ಕಿಂಗ್‌ಡಮ್‌ಗೆ ಹೋಗಲು ಸಾಧ್ಯವಾಗದೆ ಭಾರತದಲ್ಲೇ ಉಳಿಯುತ್ತಿರುವುದಕ್ಕೆ ಅವರು ಬೇಸರ ವ್ಯಕ್ತ ಪಡಿಸಿ ಅಳುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಹೀಗೆ ವಿವಿಧ ಬರಹಗಳೊಂದಿಗೆ ಈ ಫೋಟೋ ಹರಿದಾಡುತ್ತಿದೆ.

ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ  ಫೋಟೋ ಹಾಗೂ ಅದರ ಮೇಲಿನ ಬರಹದ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ ವೈರಲ್‌ ಪೋಸ್ಟ್‌ ಅನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್‌ ಆಗುತ್ತಿರುವ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ ಬಾಂಗ್ಲಾದಿಂದ ಶೇಖ್‌ ಹಸೀನಾ ಪಲಾಯನ ಮಾಡುವಾಗು ಅಳುತ್ತಾ ದೇಶ ಬಿಟ್ಟು ಹೋದರೆ? ಎಂಬುದನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ  ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಫೋಟೋವನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ 26 ಜುಲೈ 2024 ರಂದು ಬಿಬಿಸಿ ಸುದ್ದಿ ಸಂಸ್ಥೆ ಹಂಚಿಕೊಂಡ ವರದಿಯೊಂದು ಕಂಡು ಬಂದಿದೆ. ಈ ವರದಿಯನ್ನು ಗಮನಿಸಿದಾಗ ಅದರಲ್ಲಿ ವೈರಲ್‌ ಫೋಟೋ ನಮಗೆ ಕಂಡು ಬಂದಿದೆ.

ವರದಿಯ ಪ್ರಕಾರ ಈ ಛಾಯಾಚಿತ್ರವನ್ನು 25 ಜುಲೈ 2024 ರಂದು ಬಾಂಗ್ಲಾದೇಶದ ಪ್ರಧಾನ ಮಂತ್ರಿ ಕಚೇರಿಯಿಂದ ತೆಗೆಯಲಾಗಿದೆ ಹಾಗೂ ಪ್ರಧಾನಿ ಕಚೇರಿಯೇ ಈ ಫೋಟೋವನ್ನು ಬಿಡುಗಡೆ ಮಾಡಿದೆ. ಹಸೀನಾ ಅವರು ತಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಹೋರಾಟಗಾರರು ದ್ವಂಸ ಮಾಡಿದ ಮೇಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಫೋಟೋವನ್ನು ತೆಗೆಯಲಾಗಿದೆ ಎಂಬ ಮಾಹಿತಿ ಅಧಿಕೃತವಾಗಿ ಅಲ್ಲಿನ ಪ್ರಧಾನಿ ಕಚೇರಿಯೇ ಬಿಡುಗಡೆ ಮಾಡಿತ್ತು. ಇಲ್ಲಿ ಇಷ್ಟೊಂದು ಗೊಂದಲ ಉಂಟಾಗಲು ಪ್ರಮುಖವಾಗಿ ಕಾರಣವಾದದ್ದು ಕೆಲ ಮಾಧ್ಯಮಗಳು.. ಹಲವು ಮಾಧ್ಯಮಗಳು ಹಸೀನ ಅವರು ದೇಶ ಬಿಟ್ಟು ಹೋದಾಗ ಈ ಫೋಟೋವನ್ನು ಹಂಚಿಕೊಂಡಿದ್ದರು. ಹಾಗಾಗಿ ಇದು ನಿಜವಾದ ಫೋಟೋ  ಎಂದು ಹಲವರು ಭಾವಿಸಿದ್ದಾರೆ. 

ಒಟ್ಟಾರೆಯಾಗಿ ಹೇಳುವುದಾದರೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾದೇಶ ಬಿಟ್ಟು ಪಲಾಯನ ಮಾಡುವಾಗ ಅಳುತ್ತಿದ್ದರು ಎಂದು ಹಂಚಿಕೊಳ್ಳಲಾಗುತ್ತಿರುವ ಫೋಟೋ ಇತ್ತೀಚಿನದಲ್ಲ ಎಂಬುದು ಈ ಎಲ್ಲಾ ಅಂಶಗಳಿಂದ ಸಾಬೀತಾಗಿದೆ. ಹಾಗಾಗಿ ವೈರಲ್‌ ಫೋಟೋವನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ವೈರಲ್‌ ವಿಡಿಯೋವನ್ನು ಪರಿಶೀಲಿಸಿ.


ಇದನ್ನೂ ಓದಿ : Fact Check: ಕರೀನಾ ಕಪೂರ್ ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎಂದು ಅವರ ಹಳೆಯ ಫೋಟೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *