Fact Check | ಭೂಕುಸಿತ ಮತ್ತು ಗರ್ಭಿಣಿ ಆನೆಯ ಸಾವಿಗೆ ಸಂಬಂಧ ಕಲ್ಪಸಿ ಸುಳ್ಳು ಪೋಸ್ಟ್‌ಗಳು ವೈರಲ್‌

“ಮಲಪ್ಪುರಂ ಎಂಬ ಹಳ್ಳಿಯಲ್ಲಿ ಬಾಂಬ್ ತುಂಬಿದ ಅನಾನಸ್ ಅನ್ನು ಗರ್ಭಿಣಿ ಆನೆಗೆ ನೀಡಲಾಗಿತ್ತು, ಅಂದು ಆ ಅನಾನಸ್‌ ಸೇವಿಸಿದ್ದ ಆನೆ ದಾರುಣವಾಗಿ ಸಾವನ್ನಪ್ಪಿತ್ತು. ಇದೀಗ ಕೇರಳದಲ್ಲಿನ ಭೀಕರ ಭೂಕುಸಿತದ ಪರಿಣಾಮವಾಗಿ ಮಲಪ್ಪುರಂ ಗ್ರಾಮವು  ಸಂಪೂರ್ಣವಾಗಿ ನಾಶವಾಗಿದೆ. ಮೂಕ ಜೀವಿಯ ಶಾಪ ಇದೀಗ ಕೇರಳದ ಆ ಗ್ರಾಮಕ್ಕೆ ತಟ್ಟಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್‌ಗಳು ವೈರಲ್‌ ಆಗುತ್ತಿದೆ.

ಹೀಗೆ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸದೆ ಹಲವಾರು ಮಂದಿ ಇದೇ ಪೋಸ್ಟ್‌ ಅನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಲವರು ಈ ಪೋಸ್ಟ್‌ ಮೂಲಕ ಕೇರಳದ ವಿರುದ್ಧ ಜನರಲ್ಲಿ ದ್ವೇಷ ಭಾವನೆಯನ್ನು ಮೂಡಿಸಲು ಯತ್ನಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಈಗ ಈ ಪೋಸ್ಟ್‌ ಜನ ಸಾಮಾನ್ಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಹಲವಾರು ಮಂದಿ ಇದು ನಿಜವೆಂದು ಭಾವಿಸಿದ್ದಾರೆ. ಹೀಗೆ ವೈರಲ್‌ ಆಗುತ್ತಿರುವ ಈ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

 

Post by @gourangaroy
View on Threads

 

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿದ ಕೆಲವೊಂದು ಅಂಶಗಳನ್ನು ಬಳಸಿ ವಿವಿಧ ಕೀ ವರ್ಡ್‌ಗಳ ಮೂಲಕ ಅಂತರ್ಜಾದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 4 ಜೂನ್‌ 2020 ರಂದು ದ ಪ್ರಿಂಟ್‌ ಸುದ್ದಿ ಮಾಧ್ಯಮ “Pregnant elephant in Kerala dies after cracker filled pineapple bursts in her mout0h” ಎಂಬ ಶೀರ್ಷಿಕೆಯ ಅಡಿಯಲ್ಲಿ ಯುಟ್ಯುಬ್‌ ನಲ್ಲಿ ಅಪ್‌ಲೋಡ್‌ ಮಾಡಿದ ವರದಿಯೊಂದು ಕಂಡು ಬಂದಿದೆ. ಹಾಗಾಗಿ ಈ ವೈರಲ್‌ ವಿಡಿಯೋದಲ್ಲಿ ಹಂಚಿಕೊಂಡ ಘಟನೆ 4 ವರ್ಷದ ಹಿಂದಿನದ್ದಾಗಿದೆ.

ಈ ಘಟನೆಗೆ ಸಂಬಂಧ ಪಟ್ಟಂತೆ ಇನ್ನೂ ಹಲವು ವರದಿಗಳು ಕಂಡು ಬಂದಿದ್ದು, ಜೂನ್ 4, 2020 ರಂದು, ಕೇರಳ ಅರಣ್ಯ ಇಲಾಖೆಯು “ಮಲಪ್ಪುರಂನಲ್ಲಿ ಗರ್ಭಿಣಿ ಆನೆ ಸಾವನ್ನಪ್ಪಿದೆ ಎಂದು ಮಾಧ್ಯಮ ವರದಿಗಳು ತಪ್ಪಾಗಿದೆ ಮತ್ತು ಘಟನೆಯು ನಿಜವಾಗಿ ಪಾಲಕ್ಕಾಡ್‌ನಲ್ಲಿ ನಡೆದಿದೆ” ಎಂದು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಸ್ಪಷ್ಟ ಪಡಿಸಿದೆ. ಹಾಗಾಗಿ ವೈರಲ್‌ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ ಈ ಘಟನೆ ಮಲಪ್ಪುರಂನಲ್ಲಿ ನಡೆದಿಲ್ಲ

ಇನ್ನು ಆನೆಗೆ ಉದ್ದೇಶಪೂರ್ವಕವಾಗಿ ಪಟಾಕಿ ತುಂಬಿದ ಅನಾನಸ್‌ ಅನ್ನು ನೀಡಲಾಗಿದೆಯೇ ಎಂದು ಪರಿಶೀಲನೆ ನಡೆಸಿದಾಗ, ಈ ಕುರಿತು ಹಲವು ವರದಿಗಳು ವಿವಿಧ ರೀತಿಯಾದ ಮಾಹಿತಿಯನ್ನು ನೀಡಿವೆ. ಅದರಲ್ಲಿ ಪ್ರಮುಖವಾಗಿ ಕೇರಳದ ಏಷ್ಯಾನೆಟ್‌ ನ್ಯೂಸ್‌ ರೈತರು ಕಾಡು ಹಂದಿಗಳನ್ನು ಹಿಮ್ಮೆಟ್ಟಿಸಲು ಅನಾನಸ್‌ಗೆ ಪಟಾಕಿ ತುಂಬಿಟ್ಟಿದ್ದರು, ಇದನ್ನು ಕಾಡನೆ ಸೇವಿಸಿ ಸಾವನ್ನಪ್ಪಿದೆ. ಆದರೆ ಯಾರೂ ಉದ್ದೇಶಪೂರ್ವಕವಾಗಿ ಆನೆಗೆ ಪಟಾಕಿ ತುಂಬಿದ ಅನಾನಸ್‌ ನೀಡಿರುವುದಕ್ಕೆ ಸಾಕ್ಷಿಗಳು ಲಭ್ಯವಾಗಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಒಟ್ಟಾರೆಯಾಗಿ  ಹೇಳುವುದಾದರೆ ಭೂಕುಸಿತ ಸಂಭವಿಸಿರುವುದು ಮಲಪ್ಪುರಂ ಅಲ್ಲ ವಯನಾಡಿನಲ್ಲಿ.  ಗರ್ಭಿಣಿ ಆನೆ ಪಟಾಕಿ ತುಂಬಿದ ಅನಾನಸ್‌ ತಿಂದು ಸಾವನ್ನಪ್ಪಿರುವುದು ಮಲಪ್ಪುರಂನಲ್ಲಿ ಅಲ್ಲ, ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಕ್ಕಾಡ್ ಅರಣ್ಯದಲ್ಲಿ. ಆದರೆ ಈ ಘಟನೆಗಳು ಮತ್ತು ಸ್ಥಳಗಳನ್ನು ಸಂಪೂರ್ಣವಾಗಿ ತಿರುಚಿ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಶೇರ್‌ ಮಾಡುವುದು ಅಪರಾಧವಾಗಿದೆ.


ಇದನ್ನೂ ಓದಿ : Fact Check: ಬಾಂಗ್ಲಾದೇಶದಲ್ಲಿ ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಿದ ವಿಡಿಯೋವನ್ನು ದೇವಾಲಯ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *