Fact Check: ಬಾಂಗ್ಲಾದೇಶದ ಜಿಹಾದಿಗಳು ಹಿಂದೂ ಕುಟುಂಬವನ್ನು ಸಂಪೂರ್ಣವಾಗಿ ನಾಶಪಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದೂ ಕುಟುಂಬ

ಬಾಂಗ್ಲಾದೇಶದಲ್ಲಿ ಹಿಂಸಾಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,  ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ(ಹಿಂದು, ಕ್ರಿಶ್ಚಿಯನ್, ಬೌದ್ಧ) ಹಿಂದುಗಳ ಮೇಲೆ ಮತ್ತು ಹಿಂದು ದೇವಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದರ ಬೆನ್ನಲ್ಲೇ ಹೀಗಾಗಲೇ ಮುಸ್ಲಿಂ ವಿರೋಧಿ ನಿಲುವು ತಾಳಿರುವ ಬಲಪಂಥೀಯ ಸಂಘಟನೆಗಳ ಬೆಂಬಲಿಗರು ಬಾಂಗ್ಲಾದೇಶದ ಮುಸ್ಲಿಮರು ಹಿಂದುಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಹಳೆಯ ಮತ್ತು ಸಂಬಂಧವಿರದ ಘಟನೆಯ ವೀಡಿಯೋಗಳನ್ನು ಬಳಸಿಕೊಂಡು ಬಾಂಗ್ಲಾದೇಶದ ಮುಸ್ಲಿಮರು ಸೇರಿದಂತೆ ಭಾರತೀಯ ಮುಸ್ಲಿಮರಿಗೂ ಅವಮಾನಿಸುವ ರೀತಿಯಲ್ಲಿ ಟೀಕೆಗಳನ್ನು ಮಾಡುತ್ತಿದ್ದಾರೆ. ಮೊದಲಿಗೆ ಬಾಂಗ್ಲಾದೇಶದಲ್ಲಿ ಹಿಂದು ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಯನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ ಎಂದು ಹವಾಮಿ ಪಕ್ಷದ ಮುಖಂಡನ ಮನೆಗೆ ಬೆಂಕಿಹಚ್ಚಿದ್ದನ್ನು ಹಂಚಿಕೊಳ್ಳಲಾಗುತ್ತಿತ್ತು.

ಈಗ, ” ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಜಿಹಾದಿಗಳು ಹಿಂದೂಗಳು ಎಂಬ ಕಾರಣಕ್ಕೆ ಇಡೀ ಹಿಂದೂ ಕುಟುಂಬವನ್ನು ನಾಶಪಡಿಸಲಾಯಿತು. ಪ್ರಪಂಚದ ಕಣ್ಣುಗಳು ಎಲ್ಲಿವೆ?” ಎಂಬ ಶೀರ್ಷಿಕೆಯೊಂದಿಗೆ ತಾಯಿ ಮತ್ತು ಇಬ್ಬರು ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದ ವೀಡಿಯೋ ಒಂದನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. 

ಫ್ಯಾಕ್ಟ್‌ ಚೆಕ್:

ಈ ಕುರಿತು ನಾವು ಹುಡುಕಿದಾಗ ಹಂಚಿಕೊಳ್ಳಲಾಗಿರುವ ಮಾಹಿತಿ ಸುಳ್ಳಾಗಿದ್ದು, ಇದು ಹಿಂದೂ ಕುಟುಂಬವಲ್ಲ ಎಂದು ತಿಳಿದು ಬಂದಿದೆ. ಆದರೆ ಇದು ಮುಸ್ಲಿಂ ಕುಟುಂಬವಾಗಿದೆ. ಘಟನೆ ಕಳೆದ ತಿಂಗಳು ನಡೆದಿದ್ದು. ಈ ಕುಟುಂಬದ ನಾಲ್ವರು (ಸೊಹಾಗ್ ಮಿಯಾನ್, ಜನತುಲ್ ಬೇಗಂ, ಫರಿಯಾ ಮತ್ತು ಫಾಹಿಮಾ) ಜುಲೈ 28 ರಂದು ನಬಿಂಗಾರ್‌ನಲ್ಲಿ ಬಾಗಿಲಿಗೆ ಬೀಗ ಹಾಕಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ವೀಡಿಯೋವಿಗೂ ಬಾಂಗ್ಲಾದೇಶದ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲ.

ನಾವು ಈ ವೀಡಿಯೋದ ಕೆಲವು ಕ್ಲಿಪ್‌ಗಳನ್ನು ಬಳಸಿ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ, ಇಟ್ಟೆಫಾಕ್ ಎಂಬ ಸುದ್ದಿ ಮಾಧ್ಯಮದ ವರದಿಯೊಂದು ಪತ್ತೆಯಾಗಿದ್ದು. “ಬ್ರಹ್ಮನ್ಬಾರಿಯಾದಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ” ಎಂಬ ಶೀರ್ಷಿಕೆಯನ್ನು ಈ ವರದಿಗೆ ನೀಡಲಾಗಿದೆ.

“ಬ್ರಹ್ಮನ್ಬಾರಿಯಾದ ನಬಿನಗರ ಉಪಜಿಲಾದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರ ನೇಣು ಬಿಗಿದ ಶವಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಪಜಿಲಾದ ಪುರಸಭೆಯ ಬಿಜೋಯ್ಪಾರಾ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

ಮೃತರನ್ನು ಸೊಹಾಗ್ ಮಿಯಾ (33), ಜನ್ನತುಲ್ ಬೇಗಂ (25), ಫರಿಯಾ (4) ಮತ್ತು ಫಾಹಿಮಾ (2) ಎಂದು ಗುರುತಿಸಲಾಗಿದೆ. ಸೊಹಾಗ್ ಮಿಯಾ ಮತ್ತು ಜನ್ನತುಲ್ ಗಂಡ ಮತ್ತು ಹೆಂಡತಿ ಮತ್ತು ಅವರ ಇಬ್ಬರು ಮಕ್ಕಳಾದ ಫರಿಯಾ ಮತ್ತು ಫಾಹಿಮಾ.

ನಬಿನಗರ ಪೊಲೀಸ್ ಠಾಣೆ ಒ.ಸಿ. ಮೆಹಬೂಬ್ ಆಲಂ ಈ ವಿಷಯವನ್ನು ಇಟ್ಟೆಫಾಕ್‌ಗೆ ದೃಢಪಡಿಸಿದರು ಮತ್ತು ಬೆಳಿಗ್ಗೆ, ಮೃತರ ಸಂಬಂಧಿಕರು ಮತ್ತು ನೆರೆಹೊರೆಯವರು ಸೊಹಾಗ್ ಮಿಯಾ ಅವರ ಮನೆಗೆ ಹೋಗಿ ಕರೆ ಮಾಡಿದರು ಎಂದು ಹೇಳಿದರು. ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, ಅವರು ಬಾಗಿಲು ಒಡೆದು ಎಲ್ಲರ ಶವಗಳನ್ನು ನೋಡಿದರು. ನಂತರ ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ವಶಪಡಿಸಿಕೊಂಡಿದ್ದಾರೆ.

ಆದಾಗ್ಯೂ, ಒಸಿ ಮೆಹಬೂಬ್ ಸಾವಿಗೆ ಕಾರಣವನ್ನು ಬಹಿರಂಗಪಡಿಸಲು ಸಾಧ್ಯವಾಗಲಿಲ್ಲ. ಶವಗಳನ್ನು ಶವಪರೀಕ್ಷೆಗಾಗಿ ಬ್ರಹ್ಮನ್ಬಾರಿಯಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ತನಿಖೆಯ ನಂತರ ಘಟನೆಗೆ ನಿಖರ ಕಾರಣ ತಿಳಿಯಲಿದೆ.” ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆಲ್ಟ್‌ ನ್ಯೂಸ್‌ ವರದಿಗಾರ ಮಹಮ್ಮದ್ ಜುಬೈರ್ ಸಹ ವೈರಲ್ ಆಗುತ್ತಿರುವ ಈ ವೀಡಿಯೋ ಹಿಂದು ಕುಟುಂಬಕ್ಕೆ ಅಥವಾ ಬಾಂಗ್ಲಾದೇಶದ ಹಿಂಸಾಚಾರಕ್ಕೆ ಸಂಬಂಧಿಸಿದ ವೀಡಿಯೋ ಅಲ್ಲ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಇದನ್ನು ಓದಿ: ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಟ್ಯಾಗೋರ್ ಪ್ರತಿಮೆ ದ್ವಂಸ ಎಂದು ಹಳೆಯ ವಿಡಿಯೋ ಹಂಚಿಕೆ


ವೀಡಿಯೋ ನೋಡಿ: ಯುಟ್ಯೂಬರ್ ಧ್ರುವ್ ರಾಠೀ ಪಾಕಿಸ್ತಾನ ಮೂಲದವರೆಂದು ಸುಳ್ಳು ಹರಡಲಾಗುತ್ತಿದೆ | Dhruv Rathee


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *