Fact Check: ಬಾಂಗ್ಲಾದೇಶದಲ್ಲಿ ಹಿಂದೂ ಮಾಲಿಕತ್ವದ ಅಂಗಡಿಯಿಂದ ಸಿಲಿಂಡರ್‌ ಲೂಟಿ ಮಾಡಲಾಗಿದೆ ಎಂದು ಹಳೆಯ ವೀಡಿಯೋ ಹಂಚಿಕೆ

ಹಿಂದೂ

ಕಳೆದ ಮೂರ್ನಾಲ್ಕು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಬಹುತೇಕ ಸುಳ್ಳು ಆಪಾದನೆಗಳನ್ನು ಮತ್ತು ಹಳೆಯ ವೀಡಿಯೋಗಳನ್ನು ಹಂಚಿಕೊಂಡು ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. 

ಈಗ ಒಂದಷ್ಟು ಜನರು ಸಿಲಿಂಡರ್‌ಗಳನ್ನು ಹೊತ್ತೊಯ್ಯುವ ವೀಡಿಯೋ ಹಂಚಿಕೊಂಡು “ದರೋಡೆಕೋರ ಭಿಕ್ಷುಕ ಜಿಹಾದಿ ಸಮುದಾಯ ಬಾಂಗ್ಲಾದೇಶದಲ್ಲಿ ಹಿಂದೂ ಸಿಲಿಂಡರ್ ಮಾಲೀಕರು ಅಂಗಡಿಯನ್ನು ಲೂಟಿ ಮಾಡಿ ಓಡಿಹೋಗುತ್ತಿದ್ದರೆ… ರೊಟ್ಟಿಯನ್ನು ಕದ್ದು ಓಡಿಹೋಗುವ ನಾಯಿಯನ್ನು ನೋಡಿದ್ದೀರಾ, ಇಲ್ಲವಾದರೆ ಅರಬ್ ದರೋಡೆಕೋರರ ಸರಗಳ್ಳತನದಿಂದ ಹುಟ್ಟಿದ ಜಿಹಾದಿಗಳು ಸರಕುಗಳನ್ನು ಲೂಟಿ ಮಾಡಿ ಓಡಿಹೋಗುತ್ತಿದ್ದಾರೆ. ಬುಡಕಟ್ಟು ದರೋಡೆಕೋರರು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. 

ಫ್ಯಾಕ್ಟ್‌ ಚೆಕ್:

ಈ ಆರೋಪ ಸುಳ್ಳಾಗಿದ್ದು, ದುಷ್ಕರ್ಮಿಗಳು ಬಾಂಗ್ಲಾದೇಶದ ಹಿಂದೂ ವ್ಯಕ್ತಿಯೊಬ್ಬರ ಮಾಲೀಕತ್ವದ ಅಂಗಡಿಯಿಂದ ಗ್ಯಾಸ್ ಸಿಲಿಂಡರ್‌ಗಳನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿಕೊಂಡು ಜನರ ಗುಂಪು ಲೂಟಿ ಮಾಡಿದ ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತುಕೊಂಡು ಬೀದಿಗಳಲ್ಲಿ ಗಲಾಟೆ ಮಾಡುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

“ಹಿಲಿ ಮಾರ್ಕೆಟ್‌ನಲ್ಲಿ ಸಾವಿರಾರು ಗ್ಯಾಸ್ ಸಿಲಿಂಡರ್‌ಗಳನ್ನು ಲೂಟಿ ಮಾಡಲಾಗಿದೆ” ಎಂದು ಹೇಳುವ ವೀಡಿಯೊಗೆ ಸಂಬಂಧಿಸಿದಂತೆ ಆರಂಭಿಕ ಪೋಸ್ಟ್‌ಗಳನ್ನು ನಾವು ಕಂಡುಕೊಂಡಿದ್ದೇವೆ. ಸೂಕ್ಷ್ಮವಾಗಿ ಗಮನಿಸಿದರೆ, ಜನಸಂದಣಿಯು ಬಿಎಂ ಕಂಪನಿಯ ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿರುವುದು ಕಂಡುಬರುತ್ತದೆ. ಬಾಂಗ್ಲಾದೇಶದ ದೀನಜ್‌ಪುರ ಜಿಲ್ಲೆಯ ಹಿಲಿ ಮಾರುಕಟ್ಟೆಯಲ್ಲಿ ಬಿಎಂ ಕಂಪನಿಯ ಡೀಲರ್‌ನ ವಿವರಗಳನ್ನು ನಾವು ಕಂಡುಕೊಂಡಿದ್ದೇವೆ.

ನಮ್ಮ ಹುಡುಕಾಟದಿಂದ ಸುದ್ದಿ ಲೇಖನವೊಂದು ಲಭ್ಯವಾಗಿದ್ದು, ಅದರಲ್ಲಿ ಬಿಎಂ ಕಂಪನಿಯ ಡೀಲರ್ ಹೆಸರನ್ನು ಮೊಶಿಯುರ್ ರೆಹಮಾನ್ ಎಂದು ನಮೂದಿಸಲಾಗಿದೆ. ಇದಲ್ಲದೆ, ಮೋಶಿಯುರ್ ರೆಹಮಾನ್ ಅವರ ಅಳಿಯ ಹರುನ್ ಉರ್ ರೋಷಿದ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಅಲ್ಲಿ ಅವರು ತಮ್ಮ ಮಾವನ ಮಾಲಿಕತ್ವದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಲೂಟಿ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಮತ್ತು ಹಿರಾಮತಿ ಚಿತ್ರಮಂದಿರದ ಮುಂಭಾಗದ ಹೆಲಿ ಮಾರುಕಟ್ಟೆಯಲ್ಲಿ ಅಂಗಡಿಯನ್ನು ಧ್ವಂಸಗೊಳಿಸಲಾಗಿದೆ. ಹಿಂದೂ ಗ್ಯಾಸ್ ಸಿಲಿಂಡರ್ ಡೀಲರ್ ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ಆದ್ದರಿಂದ ಕೆಲವು ಹಿಂದೂಪರ ಸಂಘಟನೆಗಳ ಪ್ರಭಾವಿಗಳು ತಮ್ಮ ನಿರೂಪಣೆಯನ್ನು ಹೊಂದಿಸಲು ತಪ್ಪುದಾರಿಗೆಳೆಯುವ ಸುಳ್ಳು ಫೋಟೋ ಮತ್ತು ವೀಡಿಯೋಗಳ ಮೂಲಕ ಬಾಂಗ್ಲಾದೇಶ ಹಿಂಸಾಚಾರದ ವೀಡಿಯೊಗಳು ಎಂದು ಸುಳ್ಳು ಪ್ರಸಾರ ಮಾಡುತ್ತಿದ್ದಾರೆ.


ಇದನ್ನು ಓದಿ: ಬಾಂಗ್ಲಾದೇಶದ ಜಿಹಾದಿಗಳು ಹಿಂದೂ ಕುಟುಂಬವನ್ನು ಸಂಪೂರ್ಣವಾಗಿ ನಾಶಪಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ


ವೀಡಿಯೋ ನೋಡಿ: ಕಾಂಗ್ರೆಸ್ ಅಭ್ಯರ್ಥಿ ಗೀತಾ ಮತ್ತು ಶಿವರಾಜ್‌ಕುಮಾರ್ ಕುಂಕುಮ ಅಳಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *