“ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಈ ಹಿಂದಿನಿಂದಲೂ ರಕ್ಷಣೆ ಇರಲಿಲ್ಲ. ಈಗ ಬಾಂಗ್ಲಾದಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದಂತೆ ಹಿಂದೂ ಮಹಿಳೆಯರನ್ನು ಮನೆಯಿಂದ ಅಪಹರಿಸಿ ಅತ್ಯಾಚಾರ ಮಾಡಿ ಕೊಂದು ಹಾಕಲಾಗುತ್ತಿದೆ. ಬಾಂಗ್ಲಾದಾದ್ಯಂತ ಮುಸಲ್ಮಾನರು ಈ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿನ ಹೆಣ್ಣು ಮಕ್ಕಳ ಪರಿಸ್ಥಿತಿ ಹೀಗಿದ್ದರು, ಭಾರತದಲ್ಲಿ ಕೆಲ ದೇಶದ್ರೋಹಿಗಳು ಬಾಂಗ್ಲಾದ ಕೋಮುವಾದಿಗಳಿಗೆ ಬೆಂಬಲಕೊಡುತ್ತಿದ್ದಾರೆ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
A Hindu woman being kidnapped in broad daylight by the Islamists in Bangladesh. Where else have we have seen similar scenes? In Iran. When IRGC terrorists attack brave Iranian women. Also in Israel when Hamas terrorists attacked on October 7th. Any movement that includes the rape… pic.twitter.com/z4gYqdJtna
— Salman Sima (@SalmanSima) August 8, 2024
ಈ ವಿಡಿಯೋದಲ್ಲಿ ಕೂಡ ಹೆಂಗಸೊಬ್ಬಳನ್ನು ಗಂಡಸರ ಗುಂಪು ಅಪಹರಿಸಿ ವಾಹನದೊಳಗೆ ಎಳೆದೊಯ್ಯುವುದನ್ನು ಕೂಡ ನೋಡಬಹುದಾಗಿದೆ. ಈ ವಿಡಿಯೋ ನೋಡಿದ ಎಲ್ಲರು ಇದು ಬಾಂಗ್ಲಾದೇಶದಲ್ಲಿಯೇ ನಡೆದಿದೆ ಎಂದು ನಂಬಿಕೊಂಡಿದ್ದಾರೆ. ಈ ವಿಡಿಯೋದೊಟ್ಟಿಗಿನ ಟಿಪ್ಪಣಿಯನ್ನು ಕೂಡ ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಂಡು, ಬಾಂಗ್ಲಾದೇಶದ ಮುಸಲ್ಮಾನರ ವಿರುದ್ಧ ವ್ಯಾಪಕವಾದ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ಮತ್ತು ಅದರ ಜೊತೆಗೆ ಹಂಚಿಕೊಳ್ಳಲಾಗುತ್ತಿರುವ ಟಿಪ್ಪಣಿಗೆ ಸಂಬಂಧ ಪಟ್ಟಂತೆ ಯಾವುದಾದರೂ ವರದಿಗಳು ಪ್ರಕಟವಾಗಿವೆಯೇ ಎಂದು ಹುಡುಕಲಾಯಿತು. ಆದರೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಯಾವುದೇ ರೀತಿಯಾದ ನಿಖರ ವರದಿಗಳು ಕಂಡು ಬಂದಿಲ್ಲ.
ಹೀಗಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಇನ್ನಷ್ಟು ಹುಡುಕಲು ಪ್ರಾರಂಭಿಸಲಾಯಿತು. ಇದಕ್ಕಾಗಿ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು.. ಈ ವೇಳೆ 9 ಆಗಸ್ಟ್ 2024ರಂದು ಅಲ್ಟ್ ನ್ಯೂಸ್ ಸಂಪಾದಕ ಮೊಹಮ್ಮದ್ ಜುಬೈರ್ ಅವರ ಮಾಡಿದ ಪೋಸ್ಟ್‌ವೊಂದು ಕಂಡು ಬಂದಿದೆ. ಈ ಪೋಸ್ಟ್‌ನಲ್ಲಿ ವೈರಲ್ ವಿಡಿಯೋಗೆ ಸಂಬಂಧ ಪಟ್ಟಂತೆ ಹಲವು ಮಾಹಿತಿಗಳನ್ನು ನೀಡಲಾಯಿತು.
ಜುಬೈರ್ ಅವರ ಪೋಸ್ಟ್‌ನಲ್ಲಿ ಹೌದು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ಮಾಡಿದ ಹಲವಾರು ಘಟನೆಗಳಿವೆ ಆದರೆ ಈ ನಿರ್ದಿಷ್ಟ ವಿಡಿಯೋವನ್ನು “ಹೌದು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ಮಾಡಿದ ಹಲವಾರು ಘಟನೆಗಳಿವೆ ಆದರೆ ಈ ನಿರ್ದಿಷ್ಟ ವಿಡಿಯೋವನ್ನು @ಸಾಲ್ವಾನ್_ಮೋಮಿಕಾ1 ಮತ್ತು ಒಪಿಂಡಿಯಾ ಸಂಪಾದಕ @UnSubtleDesi ಅವರು ಶೇರ್ ಮಾಡಿದ್ದಾರೆ. ಈ ಘಟನೆ ಹಿಂದೂ-ಮುಸ್ಲಿಂ ಸಮುದಾಯಕ್ಕೆ ಯಾವುದೇ ರೀತಿಯಾದ ಸಂಬಂಧವಿಲ್ಲ. ಹಿಂದೂ ಮಹಿಳೆಯನ್ನು ಅಪಹರಿಸಿದ ವ್ಯಕ್ತಿ ಆಕೆಯ ಮಾದಕ ವ್ಯಸನಿ ಹಿಂದೂ ಪತಿಯಾಗಿದ್ದು, 6 ತಿಂಗಳ ಹಿಂದೆ ಆಕೆಯಿಂದ ಬೇರ್ಪಟ್ಟಿದ್ದಾನೆ.” ಎಂದು ಬರೆದುಕೊಂಡಿದ್ದಾರೆ.
Yes there are several incidents where Minority Hindus were attacked in Bangladesh But this particular video shared by @Salwan_Momika1 and Opindia Editor @UnSubtleDesi
has nothing to do with Hindu-Muslim. The person abducting the Hindu woman is her drug addict Hindu husband who… pic.twitter.com/yJNyNCYhSI— Mohammed Zubair (@zoo_bear) August 8, 2024
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮಿಸಿದಾಗ ಹಿಂದೂ ಮಹಿಳೆಯನ್ನು ಮುಸ್ಲಿಂ ಯುವಕರು ಅಪಹರಿಸಿ ಅತ್ಯಾಚಾರ ಮಾಡಿ ಕೊಂದಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಈ ಕುರಿತು ಯಾವುದೇ ವರದಿಗಳು ಕಂಡು ಬಂದಿಲ್ಲ. ಬಾಂಗ್ಲಾದೇಶದಲ್ಲಿ ಈ ರೀತಿಯ ಪ್ರಕರಣ ನಡೆದಿರುವುದಕ್ಕೆ ಯಾವುದೇ ರೀತಿಯಾದ ಪುರಾವೆಗಳು ಸಿಕ್ಕಿಲ್ಲ. ಹಾಗಾಗಿ ವೈರಲ್ ವಿಡಿಯೋವು ಸುಳ್ಳು ಮಾಹಿತಿಯಿಂದ ಕೂಡಿದ್ದು, ಇದನ್ನು ಶೇರ್ ಮಾಡುವುದು ಅಪರಾಧವಾಗಿದೆ.
Fact check: ಭಾರತೀಯ ಪೊಲೀಸರು ಬಾಂಗ್ಲಾದೇಶ ತೊರೆಯುತ್ತಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.