“ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ. ಎಲ್ಲಾ ಮುಸ್ಲಿಂ ಮಹಿಳೆಯರು ಸೇರಿ ಹಿಂದೂ ಹೆಣ್ಣು ಮಗಳನ್ನು ಕಂಬಕ್ಕೆ ಕಟ್ಟಿಹಾಕಿ ಥಳಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಯಾಕೆ ಯಾವ ಹಿಂದೂಗಳು ಖಂಡಿಸುತ್ತಿಲ್ಲ?, ಸರ್ಕಾರ ಈ ಬಗ್ಗೆ ಏನಾದ್ರು ಕ್ರಮ ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳು ಇದ್ದರು ಎಂದು ನಮ್ಮ ಮುಂದಿನ ಪೀಳಿಗೆ ಕೇಳಬೇಕಾಗುತ್ತದೆ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
Meu Deus!
😱💔 pic.twitter.com/ohgssqPFLA— Desiree Rugani (@desireerugani) August 7, 2024
ವಿಡಿಯೋ ನೋಡಿದ ಹಲವು ಮಂದಿ, ವಿಡಿಯೋದೊಂದಿಗೆ ವಿವಿಧ ಟಿಪ್ಫಣಿಗಳನ್ನು ಓದಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳುತ್ತಿರುವ ಹಲವರು ಮುಸಲ್ಮಾನ ಸಮುದಾಯದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ಹಲವರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
Que loucura o que está acontecendo em Bangladesh. pic.twitter.com/NIAfGvoBdJ
— Tumulto BR (@TumultoBR) August 8, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ 17 ಜುಲೈ 2024 ರಂದು ಢಾಕಾ ಏಜ್ ಎಂಬ ಯೂಟ್ಯೂಬ್ ಚಾನೆಲ್ “ಬದ್ರುನ್ನೇಸಾ ಕಾಲೇಜು ಛಾತ್ರ ಲೀಗ್ ನಾಯಕರನ್ನು ವಿದ್ಯಾರ್ಥಿಗಳು ಕಟ್ಟಿಹಾಕಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ” ( ಶೀರ್ಷಿಕೆಯನ್ನು ಬಂಗಾಳದಿಂದ ಕನ್ನಡಕ್ಕೆ ಭಾಷಾಂತರಿಸಲಾಗಿದೆ) ಎಂಬ ಶೀರ್ಷಿಕೆಯ ಅಡಿಯಲ್ಲಿ ವರದಿಯೊಂದನ್ನು ಪ್ರಕಟಿಸಿರುವುದು ಕಂಡು ಬಂದಿದೆ.
ಇದೇ ರೀತಿಯಾದ ಶೀರ್ಷಿಕೆಯನ್ನು ಹೋಲುವ ಹಲವು ವರದಿಗಳು ಕಂಡು ಬಂದಿದ್ದು, ಆ ವರದಿಗಳ ಪ್ರಕಾರ ಸಾಮಾನ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮತ್ತು ಕಿರುಕುಳದ ಹಲವಾರು ಆರೋಪಗಳನ್ನು ಹೊಂದಿದ್ದ ಕಾಲೇಜಿನ ಛತ್ರ ಲೀಗ್ ಕಾರ್ಯಕರ್ತರನ್ನು ಕೋಟಾ ಸುಧಾರಣಾ ಪ್ರತಿಭಟನಾಕಾರರನ್ನು ವಿದ್ಯಾರ್ಥಿಗಳು ಕಟ್ಟಿಹಾಕಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಘಟನೆಯು 17 ಜುಲೈ 2024 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ನಡೆದಿದೆ ಎಂದು ಢಾಕಾ ಪೋಸ್ಟ್ ಕೂಡ ವರದಿಯನ್ನು ಮಾಡಿದೆ.
ಒಟ್ಟಾರೆಯಾಗಿ ಈ ಅಂಶಗಳನ್ನು ಗಮನಿಸಿದಾಗ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ಮಹಿಳೆಯರು ಹಿಂದೂ ಮಹಿಳೆಯನ್ನು ಕಟ್ಟಿ ಹಾಕಿ ಥಳಿಸಿದ್ದಾರೆ ಎಂಬುದು ಸುಳ್ಳು. ಈ ರೀತಿಯ ಆರೋಪಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಇನ್ನು ಆ ಮಹಿಳೆನ್ನು ಕೊಲ್ಲಲಾಗಿದೆ ಎಂಬುದು ಕೂಡ ಸುಳ್ಳಾಗಿದ್ದು, ಆ ಕುರಿತು ಯಾವುದೇ ವರದಿಗಳಲ್ಲಿ ಕೂಡ ಉಲ್ಲೇಖವಿಲ್ಲ. ಹಾಗಾಗಿ ಇಂತಹ ಸುದ್ದಿಗಳನ್ನು ಶೇರ್ ಮಾಡುವುದು ಅಪರಾದವಾಗಿದ್ದು, ಇಂತಹ ಸುದ್ದಿಗಳನ್ನು ನಿರಾಕರಿಸುವುದು ಉತ್ತಮ
ಇದನ್ನೂ ಓದಿ : Fact Check | ಪತಿ ತನ್ನ ಪತ್ನಿಯನ್ನು ಅಪಹರಿಸಿರುವ ವಿಡಿಯೋವನ್ನು ಬಾಂಗ್ಲಾದೇಶದ್ದು ಎಂದು ತಪ್ಪಾಗಿ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.