Fact Check | ಬಾಂಗ್ಲಾದೇಶದ ಮೇಯರ್ ಈಜುತ್ತಿರುವ ವೀಡಿಯೊಗೆ ಸುಳ್ಳು ಕೋಮು ಆಯಾಮ ನೀಡಿ ಹಂಚಿಕೆ

“ಈ ವಿಡಿಯೋ ನೋಡಿ ಹೀಗೆ ಈಜೂತ್ತಿರುವವನು ಹಿಂದೂ ಸಮುದಾಯಕ್ಕೆ ಸೇರಿದ ವ್ಯಕ್ತಿ, ಆತನಿಗೆ ಕಲ್ಲು ಹೊಡೆಯುತ್ತಿರುವವರು ಮುಸ್ಲಿಂ ಸಮುದಾಯದವರು. ಈ ಘಟನೆ ಬೇರೆಲ್ಲೂ ನಡೆದಿಲ್ಲ. ಪಕ್ಕದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಈ ಘಟನೆ ನಡೆದಿದೆ. ಆ ಹಿಂದೂ ವ್ಯಕ್ತಿಯ ಮಗಳು ಮತ್ತು ಮಡದಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲ್ಲಲಾಗಿದೆ. ಬಳಿಕ ಆತನನ್ನು ಕೂಡ ಕಲ್ಲು ಹೊಡೆದು ಕೊಲ್ಲಲು ಯತ್ನಿಸುತ್ತಿದ್ದಾರೆ. ಇದು ಬಾಂಗ್ಲಾದೇಶದಲ್ಲಿ ಇಂದಿನ ಹಿಂದೂಗಳ ಪರಿಸ್ಥಿತಿ” ಎಂದು ಟಿಪ್ಪಣಿ ಬರೆದು ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದ  ಟಿಪ್ಪಣಿಯನ್ನು ನೋಡಿದ  ಹಲವರು ಆತ ನಿಜವಾಗಿಯೂ ಹಿಂದು ಹಾಗೂ ಮುಸಲ್ಮಾನರು ಆತನ ಹೆಂಡತಿ ಮತ್ತು ಮಗಳನ್ನು ಅತ್ಯಾಚಾರ ಮಾಡಿ ಕೊಂದಿದ್ದಾರೆ ಎಂದು ನಂಬಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹಲವರು ಮುಸಲ್ಮಾನ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿ ಪೋಸ್ಟ್‌ ಕೂಡ ಮಾಡುತ್ತಿದ್ದಾರೆ. ಹೀಗೆ ಪೋಸ್ಟ್‌ ಮಾಡಲಾಗುತ್ತಿರುವ ವಿಡಿಯೋ ಹಾಗೂ ಅದರಲ್ಲಿನ ಟಿಪ್ಪಣಿಯ  ರಹಸ್ಯ  ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌ 

ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ವಿಡಿಯೋ ಹಾಗೂ ಟಿಪ್ಪಣಿಯ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧ ಪಟ್ಟಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ಜಮುನಾ ಟಿವಿ , ಜುಕ್ತಾಧಾರ , ಮಝಮಿನ್ ಮತ್ತು ಢಾಕಾ ಪೋಸ್ಟ್ ಸೇರಿದಂತೆ ವಿವಿಧ ಸುದ್ದಿತಾಣಗಳ ವರದಿಗಳು ಕಂಡು ಬಂದಿವೆ. ಈ ವರದಿಗಳಲ್ಲಿ ಕಂಡು ಬಂದಂತೆ ಈಜುತ್ತಿರುವ ವ್ಯಕ್ತಿ ಮುಸಲ್ಮಾನನಲ್ಲ ಎಂಬುದು ತಿಳಿದು ಬಂದಿದೆ.

ವರದಿಗಳ ಪ್ರಕಾರ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಮತ್ತು ದೇಶದಿಂದ ಪಲಾಯನ ಮಾಡಿದ ನಂತರ, ಅವಾಮಿ ಲೀಗ್ ನಾಯಕರ ಮೇಲೆ ಹಲವಾರು ದಾಳಿಗಳು ರಾಷ್ಟ್ರವ್ಯಾಪಿ ನಡೆದಿವೆ. ಇದೇ ವೇಳೆ ಅಖೌರಾ ಪುರಸಭೆಯ ಮೇಯರ್ ತಕ್ಝಿಲ್ ಖಲೀಫಾ ಕಾಜೋಲ್ ಎಂಬಾತನ ಮೇಲೆ ಕೂಡ ದಾಳಿ ನಡೆದಿದೆ. ಈ ವೇಳೆ ಆತ ತನ್ನ ಮೇಲೆ ದಾಳಿ ಮಾಡುವ ಗುಂಪಿನಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರಿ ಈಜಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. ಈ ವೇಳೆ ಆತನ ಮೇಲೆ ಪ್ರತಿಭಟನಾಕಾರರು ಕಲ್ಲುಗಳನ್ನು ಎಸೆಯುತ್ತಾರೆ” ಎಂದು ಉಲ್ಲೇಖಿಸಲಾಗಿದೆ. 

ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲಾ ವರದಿಗಳನ್ನು ಗಮನಿಸಿದಾಗ‌ ಪ್ರತಿಭಟನಾಕಾರರಿಂದ ತಪ್ಪಿಸಿಕೊಂಡು ನೀರಿನಲ್ಲಿ ಈಜಿದ ವ್ಯಕ್ತಿ ಮುಸಲ್ಮಾನನಾಗಿದ್ದಾರೆ. ಆತ ಹಿಂದೂ ಎಂಬುದಕ್ಕೆ ಯಾವುದೇ ರೀತಿಯಾದ ಪುರಾವೆಗಳಿಲ್ಲ. ಹಾಗಾಗಿ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ಈ ಎಲ್ಲಾ ಅಂಶಗಳಿಂದ ಸಾಬೀತಾಗಿದೆ. 


ಇದನ್ನೂ ಓದಿ : ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿದ ಸುದರ್ಶನ್ ನ್ಯೂಸ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *