ಸಾಮಾಜಿಕ ಜಾಲತಾಣದಲ್ಲಿ “ವೇಲ್ಸ್ ರಾಜಕುಮಾರಿ ಹಿಜಾಬ್ ಧರಿಸಿ ಇಂಗ್ಲೇಡ್ ಪೂರ್ತಿ ತಿರುಗುತ್ತಿದ್ದಾರೆ. ಈ ಮೂಲಕ ಅವರು ಕೂಡ ಅಧಿಕೃತವಾಗಿ ಇಸ್ಲಾಂಗೆ ಮತಾಂತರಗೊಳ್ಳುವುದರಲ್ಲಿ ಅನುಮಾನವಿಲ್ಲ. ಈಗ ಯಾರನ್ನೇ ಭೇಟಿಯಾದರು ಅವರು ಹಿಜಾಬ್ ಧರಿಸುತ್ತಾರೆ. ಇಂಗ್ಲೆಂಡ್ ನಿಧಾನವಾಗಿ ಇಸ್ಲಾಂ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದೆ. ಈ ಬಗ್ಗೆ ಇನ್ನಾದರು ಎಚ್ಚೆತ್ತುಕೊಳ್ಳದಿದ್ದರೆ ಇಂಗ್ಲೆಂಡ್ ಅಪಾಯಕ್ಕೆ ಸಿಲುಕಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ವಿಡಿಯೊವೊಂದಿಗೆ ಟಿಪ್ಪಣಿಯೊಂದು ವೈರಲ್ ಆಗುತ್ತಿದೆ.
Kate Middleton wearing hijab 👇
Britain 🇬🇧 fell faster than anticipated.
— Dr. Eli David (@DrEliDavid) August 10, 2024
ಈ ವಿಡಿಯೋ ಹಾಗೂ ಬರಹವನ್ನು ನೋಡಿದ ಹಲವರು ಇದು ನಿಜವೆಂದು ಭಾವಿಸಿ ವೇಲ್ಸ್ ರಾಜಕುಮಾರಿ ಕೇಟ್ ಮಿಡಲ್ಟನ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಹಲವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ವಲಸಿಗ ಮುಸಲ್ಮಾನರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ ಪೋಸ್ಟ್ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಸ್ಟ್ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ.
This is England now. Princess Kate Middleton wore a hijab when visiting a Muslim-majority area in their own country but the Muslim man refused to shake her hand because she is a woman. England is no longer their country. The video on the right is what you can expect in the… pic.twitter.com/kN1JyBvSTd
— Funadian (@funadian) August 9, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಟಿಪ್ಪಣಿ ಹಾಗೂ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪಮುಂದಾಯಿತು. ಈ ವೇಳೆ ವೀಡಿಯೊದ ಮೇಲಿನ ಎಡ ಮೂಲೆಯಲ್ಲಿರುವ ಡೈಲಿ ಮೇಲ್ ಎಂಬ ವಾಟರ್‌ಮಾರ್ಕ್ ಕಂಡು ಬಂದಿದ್ದು, ನಂತರ ನಾವು “ಡೈಲಿ ಮೇಲ್ ಕೇಟ್ ಮಿಡಲ್‌ಟನ್, ಹಿಜಾಬ್” ಎಂಬ ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ 9 ಮಾರ್ಚ್ 2023ರಂದು ಡೈಲಿ ಮೇಲ್ ವರದಿ ಹಾಗೂ ಅದೇ ದಿನ ರಾಯಲ್ ಫ್ಯಾಮಿಲಿ ಚಾನೆಲ್ ಯುಟ್ಯೂಬ್‌ನಲ್ಲಿ ದೀರ್ಘ ಆವೃತ್ತಿಯ ವಿಡಿಯೋವನ್ನು ಕೂಡ ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ.
ಈ ವಿಡಿಯೋ ಹಾಗೂ ವರದಿಯಲ್ಲಿ ವೇಲ್ಸ್ ರಾಜಕುಮಾರ ಮತ್ತು ರಾಜಕುಮಾರಿ ಟರ್ಕಿ-ಸಿರಿಯಾದಲ್ಲಿ ಭೂಕಂಪದ ನೆರವಿನ ಪ್ರಯತ್ನದಲ್ಲಿ ಭಾಗಿಯಾಗಿರುವವರಿಗೆ ಧನ್ಯವಾದ ಹೇಳಲು ಹೇಯ್ಸ್ ಮುಸ್ಲಿಂ ಕೇಂದ್ರಕ್ಕೆ ಭೇಟಿ ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ. ಈ ಕುರಿತು ಇನ್ನೂ ಹಲವು ವರದಿಗಳು ಪ್ರಕಟಗೊಂಡಿದ್ದು, ಅವುಗಳ ಪ್ರಕಾರ ಗೌರವಾರ್ಥವಾಗಿ, ದಂಪತಿಗಳು ತಮ್ಮ ಬೂಟುಗಳನ್ನು ತೆಗೆದುಹಾಕಿದರು ಮತ್ತು ಕೇಟ್ ತನ್ನ ತಲೆಯನ್ನು ಸ್ಕಾರ್ಫ್‌ನಿಂದ ಮುಚ್ಚಿಕೊಂಡಿದ್ದರು ಎಂದು ಉಲ್ಲೇಖಿಸಿದ್ದಾರೆ.
ಇನ್ನು ಹಲವು ವರದಿಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಕೂಡ ಇದೇ ರೀತಿಯಾದ ಮಾಹಿತಿಗಳು ಲಭ್ಯವಾಗಿದೆ. ಇದರಲ್ಲಿ ಎಲ್ಲಿಯೂ ಕೂಡ ಕೇಟ್ ಮಿಡಲ್ಟನ್ ಇಸ್ಲಾಂಗೆ ಮತಾಂತರವಾಗಿದ್ದಾರೆ ಎಂದಾಗಲಿ ಅಥವಾ ಬ್ರಿಟನ್‌ನಲ್ಲಿ ತಿರುಗಾಟದ ವೇಳೆ ಹಿಜಾಬ್ ಧರಿಸಿಯೇ ತಿರುಗುತ್ತಿದ್ದಾರೆ ಎಂದಾಗಲಿ ಉಲ್ಲೇಖವಾಗಿಲ್ಲ. ಒಂದು ವೇಳೆ ಕೇಟ್ ಮಿಡಲ್ಟನ್ ಇಸ್ಲಾಂಗೆ ಮತಾಂತರವಾಗಿದ್ದರೆ ಈ ಕುರಿತು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸುದ್ದಿ ಸಂಸ್ಥೆಗಳು ವರದಿಯನ್ನು ಮಾಡಬೇಕಾಗಿತ್ತು. ಆದರೆ ಆ ರೀತಿಯ ಯಾವುದೇ ವರದಿಗಳು ಕೂಡ ಕಂಡು ಬಂದಿಲ್ಲ. ಹಾಗಾಗಿ ವೈರಲ್ ಟಿಪ್ಪಣಿ ನಂಬಲು ಅರ್ಹವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವಂತೆ ಕೇಟ್ ಮಿಡಲ್ಟನ್ ಅವರು ಇಸ್ಲಾಂಗೆ ಮತಾಂತಗೊಂಡಿದ್ದಾರೆ ಎಂಬುದು ಸುಳ್ಳು. ಅವರು ಟರ್ಕಿ ಹಾಗೂ ಸಿರಿಯಾದಲ್ಲಿನ ಭೂಕಂಪ ಪೀಡಿತ ಸಂತ್ರಸ್ತರ ನೆರವಿಗೆ ನಿಂತವರಿಗೆ ಧನ್ಯವಾದ ಸಲ್ಲಿಸಲು ಮುಸ್ಲಿಂ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಗೌರವಾರ್ಥವಾಗಿ, ದಂಪತಿಗಳು ತಮ್ಮ ಬೂಟುಗಳನ್ನು ತೆಗೆದು ಕೇಟ್ ತನ್ನ ತಲೆಯನ್ನು ಸ್ಕಾರ್ಫ್‌ನಿಂದ ಮುಚ್ಚಿಕೊಂಡಿದ್ದಾರೆ. ಇದನ್ನೇ ಬಳಸಿಕೊಂಡಿರುವ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಅಪರಾದವಾಗಿದೆ.
ಇದನ್ನೂ ಓದಿ : Fact Check: ಬಾಂಗ್ಲಾದೇಶದ ಬಿಕ್ಕಟ್ಟನ್ನು ತೋರಿಸಲು ಎಐ ಸೃಷ್ಟಿಸಿದ ಚಿತ್ರವನ್ನು ವೈರಲ್ ಮಾಡಲಾಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.