Fact Check | ಸನಾತನಿಗಳ ಮೇಲಿನ ದಾಳಿ ಕುರಿತು ಪ್ರಧಾನಿ ಮೋದಿ ಹೇಳಿಕೆ ಹಳೆಯದ್ದಾಗಿದೆ

“ಪ್ರಧಾನಿ ಮೋದಿ ಅವರು ತಮ್ಮ ಇತ್ತೀಚೆಗಿನ ಭಾಷಣದಲ್ಲಿ ಸನಾತನಿಗಳ ಮೇಲೆ ದಾಳಿ ಮಾಡುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಅದರಲ್ಲೂ ಬಾಂಗ್ಲಾದೇಶದಲ್ಲಿ ನಡೆದ ಸನಾತನಿಗಳ ಮೇಲಿನ ದೌರ್ಜನ್ಯದ ವಿರುದ್ಧ ಪ್ರಧಾನಿಗಳ ಧ್ವನಿ ಇತ್ತು. ಹೀಗಾಗಿ ಭಾರತದಲ್ಲಿ ಕೂಡ ಎಚ್ಚರಿಕೆಯಿಂದ ಇರುವಂತೆ ಪ್ರಧಾನಿ ಕರೆಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದೂಗಳು ಜಾಗೃತಿಯಿಂದ ಇರಬೇಕು ಎಂದು ಸ್ವತಃ ಪ್ರಧಾನಿಗಳೇ ಕರೆಕೊಟ್ಟಿರುವುದರಿಂದ ಎಲ್ಲರೂ ಸಿದ್ದರಾಗಿ” ಎಂಬ ಬರಹದೊಂದಿಗೆ ಟಿಪ್ಪಣಿಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಇದನ್ನು ಗಮನಿಸದಾಗ ಹಲವರು ಪ್ರಧಾನಿ ಮೋದಿ ಅವರೇ ಭಾರತದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಎಚ್ಚತ್ತುಕೊಳ್ಳಬೇಕು ಎಂದು ಹೇಳಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಇನ್ನೂ ಕೆಲವರು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹಲ್ಲೆ ಮತ್ತು ಕೊಲೆಗೆ ಸಂಬಂಧ ಪಟ್ಟಂತೆ ಪ್ರಧಾನಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧ ಪಟ್ಟಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಹಲವು ವರದಿಗಳು ಪತ್ತೆಯಾಗಿವೆ. ಈ ವರದಿಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಬ್ಲಾಕ್‌ ವಿರುದ್ಧ ಭಾಷಣ ಮಾಡಿರುವುದು ತಿಳಿದು ಬಂದಿದೆ.

ಹೀಗಾಗಿ ವೈರಲ್‌ ವಿಡಿಯೋದಲ್ಲಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 14 ಸೆಪ್ಟಂಬರ್‌ 2023ರಂದು ನರೇಂದ್ರ ಮೋದಿ ಯೂಟ್ಯುಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಪೂರ್ಣ ಆವೃತಿಯ ವಿಡಿಯೋವೊಂದು ಪತ್ತೆಯಾಗಿದ್ದು, ಇದರಲ್ಲಿ ಅವರು ಜಿ 20 ಶೃಂಗಸಭೆ ಮತ್ತು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾತನಾಡಿರುವುದು ಕಂಡು ಬಂದಿದೆ.

ತದ ನಂತರದಲ್ಲಿಇಂಡಿಯಾ ಒಕ್ಕೂಟದ ವಿರುದ್ಧ ಭಾಷಣವನ್ನು ಮಾಡಿದ ಅವರು  “ಸನಾತನದ ವಿರುದ್ಧ ಇಂಡಿಯಾ ಬಣ ಹೇಗೆ ಮಾತನಾಡುತ್ತಿದ್ದಾರೆ ನೋಡಿ ಮತ್ತು ಸನಾತನ ಧರ್ಮವನ್ನು ಅನುಸರಿಸುವವರ ವಿರುದ್ಧ ಅವರು ದಾಳಿಯನ್ನು ಹೆಚ್ಚಿಸುತ್ತಾರೆ” ಎಂದು ಹೇಳಿಕೆಯನ್ನು ನೀಡಿರುವುದು ಕಂಡು ಬಂದಿದೆ. ಈಗ ವಿಡಿಯೋದ ಇದೇ ತುಣುಕುಗಳನ್ನು ಬಳಸಿಕೊಂಡು ಹಲವರು ಇದು ಇತ್ತೀಚೆಗೆ ಪ್ರಧಾನಿ ಮೋದಿ ಅವರು ಮಾಡಿದ ಭಾಷಣ ಎಂದು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಿನ ತಮ್ಮ ಭಾಷಣದಲ್ಲಿ ಸನಾತನಿಗಳ ಪರವಾಗಿ ಮತ್ತು ಮುಸಲ್ಮಾನರ ವಿರುದ್ಧವಾಗಿ ಮಾತನಾಡಿದ್ದಾರೆ ಎಂಬುದು ಸುಳ್ಳು, ವೈರಲ್‌ ವಿಡಿಯೋ 2023ರದ್ದಾಗಿದ್ದು, ಆ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಇಂಡಿಯಾ ಬ್ಲಾಕ್‌ ವಿರುದ್ಧ ಮಾತನಾಡಿದ್ದಾರೆಯೇ ಹೊರತು, ಆ ಸಂದರ್ಭದಲ್ಲಿ ಕೋಮುದ್ವೇಷ ಹರಡುವಂತೆ ಮಾತನಾಡಿಲ್ಲ. ಹಾಗಾಗಿ ವೈರಲ್‌ ವಿಡಿಯೋವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ :Fact Check | ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಜಿಯಾ ಹಿಂದೂಗಳು ಮತಾಂತರಗೊಳ್ಳುವಂತೆ ಹೇಳಿದ್ದಾರೆ ಎಂಬುದು ಸುಳ್ಳು


ಈ ವಿಡಿಯೋ ನೋಡಿ : Fact Check | 2024ರಲ್ಲಿ 9,60,000 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *