Fact Check | ಬಾಂಗ್ಲಾದೇಶದ ಕೈದಿಗಳ ಅವಶೇಷಗಳು ಎಂದು ಫ್ರಾನ್ಸ್‌ನ ಫೋಟೋ ಹಂಚಿಕೆ

“ಸುಮಾರು 15 ವರ್ಷಗಳ ಅನ್ಯಾಯ ಮತ್ತು ದಬ್ಬಾಳಿಕೆಯಿಂದ ಸಾವಿರಾರು ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸಿನಾ” ಎಂದು ಮಾನವನ ಅಸ್ತಿಪಂಜರಗಳಿಂದ ತುಂಬಿರುವ ಕೋಣೆಯೊಂದರ ಫೋಟೋವನ್ನು ಹಂಚಿಕೊಂಡು, ಬಾಂಗ್ಲಾದೇಶದ ಮಾಜಿ ಪ್ರಧಾನಿಯಿಂದ ಶೋಷಣೆ ಎಂಬ ರೀತಿಯಲ್ಲಿ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಪೋಸ್ಟ್‌ನ ಪ್ರಕಾರವಾಗಿ ಬಾಂಗ್ಲಾದೇಶದ ಸರ್ಕಾರ ರಹಸ್ಯವಾಗಿ ಕೈದಿಗಳನ್ನು ಸೆರೆಮನೆಯಲ್ಲಿ ಇಟ್ಟು ಚಿತ್ರಹಿಂಸೆಯನ್ನು ನೀಡಿ ಭೀಕರವಾಗಿ ಕೊಂದಿದ್ದಾರೆ ಮತ್ತು ಕೈದಿಗಳ ಶವವನ್ನು ಅಲ್ಲೇ ಕೊಳೆಯಲು ಬಿಟ್ಟು, ಈಗ ಅಸ್ತಿ ಪಂಜರಗಳು ಮಾತ್ರ ಉಳಿದಿದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಹಲವರು ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಶೇರ್ ಮಾಡುತ್ತಿದ್ದಾರೆ ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನ ಸತ್ಯತೆಯನ್ನು ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ವಿವಿಧ ಕಿ ಪ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ r/StrangeEarth  ಅವರ ರೆಡ್‌ಇಟ್‌ ಪೋಸ್ಟ್ ಕಂಡು ಬಂದಿದೆ. ಆ ಪೋಸ್ಟ್ ನಲ್ಲಿ ವೈರಲ್ ವಿಡಿಯೋ ಕಂಡು ಬಂದಿದ್ದು ಇದು ಪ್ಯಾರಿಸ್ ನಲ್ಲಿರುವ ಕ್ಯಾಟಕಾಂಬ್ಸ್ ಎಂದು ತಿಳಿದು ಬಂದಿದೆ.

ಇದರಿಂದ ಮಾಹಿತಿ ಪಡೆದ ನಾವು ಕ್ಯಾಟಕಾಂಬ್ಸ್  ಎಂಬ ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ಹಿಸ್ಟರಿ ಯುಟ್ಯೂಬ್‌ ಚಾನಲ್‌ನಲ್ಲಿ ಈ ಕುರಿತು ವಿವಿಧ ಸರಣಿಗಳಲ್ಲಿ ಬಿಡುಗಡೆ ಮಾಡಲಾದ ಸಾಕ್ಷ್ಯಚಿತ್ರ ಕಂಡು ಬಂದಿದೆ. ಈ ಕುರಿತು ವಿವಿಧ ವರದಿಗಳು ಕೂಡ ಕಂಡು ಬಂದಿದ್ದು ಇವುಗಳನ್ನು ಗಮನಿಸಿದಾಗ ವೈರಲ್‌ ವಿಡಿಯೋಗೆ ಸಮ್ಯಾತೆ ಇರುವುದು ಕೂಡ ಕಂಡು ಬಂದಿದೆ.

ಈ ವರದಿಗಳು ಮತ್ತು ಸಾಕ್ಷ್ಯಚಿತ್ರದ ಪ್ರಕಾರ “ಹದಿನೆಂಟನೇ ಶತಮಾನದಲ್ಲಿ , ಪ್ಯಾರಿಸ್‌ನ ಜನಸಂಖ್ಯೆಯು ಹೆಚ್ಚಾಯಿತು ಮತ್ತು ರೋಗಗಳ ಹರಡುವಿಕೆ ಮತ್ತು ಸಾವಿನ ಪ್ರಮಾಣವೂ ಹೆಚ್ಚಾಯಿತು. ನಗರವು ಸ್ಮಶಾನಗಳಲ್ಲಿ ಸ್ಥಳಾವಕಾಶದ ಕೊರತೆಯನ್ನು ಅನುಭವಿಸಿತು ಹೀಗಾಗಿ ಮೃತ ದೇಹಗಳು ಕೊಳೆಯಲು ಪ್ರಾರಂಭಿಸಿದವು. ಇದು ಸ್ಥಳೀಯ ಆಡಳಿತವು ಶವಗಳನ್ನು ನಗರದ ಹೊರಗೆ, ಹಳೆಯ ಮತ್ತು ಬಳಕೆಯಾಗದ ಕ್ವಾರಿಯಲ್ಲಿ ಶವಗಳನ್ನು ವರ್ಗಾಯಿಲಾಯಿತು. ಈ ಜಾಗ ನಂತರ ಪ್ಯಾರಿಸ್ ಕ್ಯಾಟಕಾಂಬ್ಸ್ ಎಂದು ಕರೆಯಲ್ಪಟ್ಟಿತು ಹಾಗೂ  ಪ್ರವಾಸಿಗರಿಗೆ ತೆರೆಯಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ವಾಯ್ಸ್‌ ಆಫ್‌ ಅಮೆರಿಕ ಮತ್ತು ವಿವಿಧ ವರದಿಗಳ ಪ್ರಕಾರ ಶೇಖ್‌ ಹಸಿನಾ ಅವರ ಸರ್ಕಾರದ ಅಧೀನದಲ್ಲಿ ಸಾಕಷ್ಟು ರಹಸ್ಯ ಸೆರೆಮನೆಗಳು ಇದ್ದಿದ್ದರ ಕುರಿತು ಮಾಹಿತಿಗಳು ಇವೆ. ಆದರೆ ಅವುಗಳು ಯಾವುದು ಕೂಡ ವೈರಲ್‌ ವಿಡಿಯೋದಲ್ಲಿ ಹಂಚಿಕೊಂಡತೆ ಅಸ್ತಿ ಪಂಜರದಿಂದ ಕೂಡಿಲ್ಲ. ಅದೇ ವೈರಲ್‌ ವಿಡಿಯೋಗೂ ಬಾಂಗ್ಲಾದೇಶದಲ್ಲಿ ಕಂಡು ಬಂದಿರುವ ರಹಸ್ಯ ಸೆರೆಮನೆಗೂ ಹೋಲಿಕೆಯೂ ಇಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಬಾಂಗ್ಲಾದೇಶದಲ್ಲಿ ರಹಸ್ಯ ಸೆರೆಮನೆಯಲ್ಲಿ ಪತ್ತೆಯಾದ ಕೈದಿಗಳ ಅಸ್ತಿ ಪಂಜರ ಎಂಬ ವಿಡಿಯೋ ಫ್ರಾನ್ಸ್‌ನ ಕ್ಯಾಟಕಾಂಬ್ಸ್ ಆಫ್‌ ಪ್ಯಾರಿಸ್‌ಗೆ ಸಂಬಂಧಿಸಿದೆ. ಈ ವಿಡಿಯೋಗೂ ಬಾಂಗ್ಲಾದೇಶಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಹಾಗಾಗಿ ಇಂತಹ ಆಧಾರವಿಲ್ಲದ ಸುದ್ದಿಗಳನ್ನು ಹಂಚಿಕೊಳ್ಳುದಿರುವುದು ಉತ್ತಮ.


ಇದನ್ನೂ ಓದಿ : Fact Check| ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರಿಂದ ಬೆಂಕಿ ಹಚ್ಚಲಾದ ಧಾರ್ಮಿಕ ಕಟ್ಟಡ ಮಂದಿರವಲ್ಲ; ಸೂಫೀ ದರ್ಗಾ!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *