ಈ ಫೋಟೋ ನೋಡಿ. ಇದು ಹೆಜ್ಬುಲ್ಲಾ ಮತ್ತು ಹೌತಿಗಳೊಂದಿಗಿನ ಉದ್ವಿಗ್ನತೆಯ ನಡುವೆ ಇಸ್ರೇಲ್ ಅನ್ನು ಬೆಂಬಲಿಸಲು ಯುಎಸ್ (ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ) ತನ್ನ ವಿಮಾನವಾಹಕ ನೌಕೆಯನ್ನು ಕೆಂಪು ಸಮುದ್ರಕ್ಕೆ ಕಳುಹಿಸಿದೆ. ಆ ಮೂಲಕ ಅಮೆರಿಕ ಮತ್ತೊಂದು ನರಮೇಧಕ್ಕೆ ಸಿದ್ದವಾಗುತ್ತಿದೆ. ಈ ಬಗ್ಗೆ ಜಗತ್ತು ತಲೆಕೆಡಿಸಿಕೊಳ್ಳುವುದಿಲ್ಲ. ಈ ಸುದ್ದಿಯನ್ನು ಆದಷ್ಟು ಎಲ್ಲರಿಗೂ ಶೇರ್ ಮಾಡಿ ” ಎಂದು ಫೋಟೋವೊಂದರ ಜೊತೆ ಟಿಪ್ಪಣಿ ಬರೆದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
Are you ready to send your kids to die so Israel can steal more land? pic.twitter.com/7zyabi1Lii
— Jake Shields (@jakeshieldsajj) June 22, 2024
ಇನ್ನು ಕೆಲವರು “ಇಸ್ರೇಲ್ ಅನ್ನು ಅದರ ಶತ್ರುಗಳಿಂದ ರಕ್ಷಿಸಲು US ವಿಮಾನವಾಹಕ ನೌಕೆ ಮತ್ತು ಬೆಂಗಾವಲುಗಳನ್ನು ಕೆಂಪು ಸಮುದ್ರಕ್ಕೆ ಕಳುಹಿಸಿದೆ ಮಕ್ಕಳ ಕೊಲೆಗಡುಕರು ಮಧ್ಯಪ್ರಾಚ್ಯಕ್ಕೆ ಆಗಮಿಸುತ್ತಾರೆ. ಅಮೆರಿಕದ ಈ ಬೆಂಬಲ ಇನ್ನೂ ಅನೇಕ ಮಕ್ಕಳನ್ನು ಬಲಿ ಪಡೆಯಲಿದೆ ಎಂದು” ವೈಲರ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ವಿವಿಧ ಟಿಪ್ಪಣಿಗಳ ಮೂಲಕ ಪೋಸ್ಟ್‌ಗಳನ್ನು ಮಾಡಲಾಗುತ್ತುದ್ದು, ಇದು ಜನ ಸಾಮಾನ್ಯರಲ್ಲಿ ಗೊಂದಲವನ್ನು ಕೂಡ ಮೂಡಿಸುತ್ತಿದೆ. ಹಾಗಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಮೊದಲು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಲಾಯಿತು. ಈ ವೇಳೆ ನಮಗೆ 22 ಜೂನ್ 2024ರಂದು ಅಸೋಸಿಯೇಟೆಡ್ ಪ್ರೆಸ್ ಪ್ರಕಟಿಸಿದ ಚಿತ್ರವೊಂದು ಕಂಡು ಬಂದಿದ್ದು. ವೈರಲ್ ಪೋಸ್ಟ್‌ನಲ್ಲಿನ ಚಿತ್ರ ಅಮೆರಿಕ, ಇಸ್ರೇಲ್ ಅಥವಾ ಕೆಂಪು ಸಮುದ್ರಕ್ಕೆ ಸಂಬಂಧಿಸಿದ್ದಲ್ಲ ಬದಲಾಗಿ ಅದು ದಕ್ಷಿಣ ಕೊರಿಯಾದ್ದು ಎಂದು ತಿಳಿದು ಬಂದಿದೆ.
ಇದರ ಆಧಾರದ ಮೇಲೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದಾಗ ವಿಭಿನ್ನ ವೈಮಾನಿಕ ದೃಷ್ಟಿಕೋನದಿಂದ ವಾಹಕದ ಮತ್ತೊಂದು ಚಿತ್ರವನ್ನು ಒಳಗೊಂಡಿರುವ CNN ವರದಿ ಹಾಗೂ ಎಪಿ ನ್ಯೂಸ್ ವರದಿಯು 22 ಜೂನ್ 2024ರಂದು ಪರಮಾಣು-ಚಾಲಿತ US ವಿಮಾನವಾಹಕ ನೌಕೆ ಥಿಯೋಡರ್ ರೂಸ್‌ವೆಲ್ಟ್ (CVN 71) ದಕ್ಷಿಣ ಕೊರಿಯಾಕ್ಕೆ ಆಗಮಿಸಿದೆ ಎಂದು ಉಲ್ಲೇಖಿಸಿದೆ. ಇದು ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಕೊರಿಯಾ ಮತ್ತು ಜಪಾನ್ ಒಳಗೊಂಡ ಸಮರಾಭ್ಯಸದ ಚಿತ್ರ ಎಂದು ತಿಳಿದು ಬಂದಿದೆ. ಹಾಗಾಗಿ ವೈರಲ್ ಪೋಸ್ಟ್ ತಪ್ಪು ಸಂದೇಶವನ್ನು ಹರಡಿದೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ಚಿತ್ರವು ಇಸ್ರೇಲ್‌ನಲ್ಲಿ ಮತ್ತು ಕೆಂಪು ಸಮುದ್ರದಲ್ಲಿ US ವಿಮಾನವಾಹಕ ನೌಕೆಯನ್ನು ಹೊಂದಿದೆ ಎಂಬುದು ಸುಳ್ಳಾಗಿದೆ. ವೈರಲ್ ಫೋಟೋ ದಕ್ಷಿಣ ಕೊರಿಯಾದಲ್ಲಿ ವಾಡಿಕೆಯ ಮಿಲಿಟರಿ ಸಮರಾಭ್ಯಸದ ಚಿತ್ರವಾಗಿದೆ. ಹಾಗಾಗಿ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಆಪಾದನೆಯಿಂದ ಕೂಡಿದ್ದು, ಇಂತಹ ಸುದ್ದಿಗಳನ್ನು ಶೇರ್ ಮಾಡುವುದು ಅಪರಾದವಾಗಿದೆ.
ಇದನ್ನೂ ಓದಿ : Fact Check: ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ಕ್ಷಣದ ವೀಡಿಯೋ ಎಂದು ಹಳೆಯ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.