ರಸ್ತೆಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬನನ್ನು ಭದ್ರತಾ ಸಿಬ್ಬಂದಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಕಾಣೆಯಾದ ತನ್ನ ಮಗನ ಪೋಸ್ಟರ್‌ನೊಂದಿಗೆ ಬಾಂಗ್ಲಾದೇಶದ ಹಿಂದೂ ವ್ಯಕ್ತಿಯೊಬ್ಬರು ಪ್ರತಿಭಟಿಸುತ್ತಿರುವುದನ್ನು ಇದು ತೋರಿಸುತ್ತದೆ ಎಂದು ಹಂಚಿಕೊಳ್ಳುವವರು ಬರೆದಿದ್ದಾರೆ.
ಇದನ್ನು ಸುದ್ದಿ ಸಂಸ್ಥೆ ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ಎಎನ್ಐ) ಕೂಡ ಇದೇ ಹೇಳಿಕೆಯೊಂದಿಗೆ ವೀಡಿಯೋ ಹಂಚಿಕೊಂಡಿದೆವು.
ಇದೇ ರೀತಿಯ ಪ್ರತಿಪಾಧನೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಫ್ಯಾಕ್ಟ್ ಚೆಕ್:
ಈ ಹೇಳಿಕೆ ಸುಳ್ಳಾಗಿದ್ದು, ಎಎನ್ಐ ವೀಡಿಯೊದಲ್ಲಿರುವ ವ್ಯಕ್ತಿಯನ್ನು ಬಾಂಗ್ಲಾದೇಶದ ಹಿಂದೂ ಸಮುದಾಯಕ್ಕೆ ಸೇರಿದವನು ಎಂದು ತಪ್ಪಾಗಿ ಗುರುತಿಸಿದೆ. ವಾಸ್ತವವಾಗಿ, ಆ ವ್ಯಕ್ತಿಯ ಹೆಸರು ಬಾಬುಲ್ ಹವಾಲ್ದಾರ್, ಮುಸ್ಲಿಂ ಸಮುದಾಯಕ್ಕೆ ಸೇರಿದವನು. ಅವರು ತಮ್ಮ ಮಗನ ಫೋಟೋದೊಂದಿಗೆ ಪ್ರತಿಭಟನೆ ನಡೆಸುತ್ತಿದ್ದರು, ಅವರ ಹೆಸರು ಮೊಹಮ್ಮದ್ ಸನ್ನಿ ಹವಾಲ್ದಾರ್. 2013ರಿಂದ ಇವರ ಮಗ ನಾಪತ್ತೆಯಾಗಿದ್ದಾನೆ.
ಮೊದಲಿಗೆ, ನಾವು ವೀಡಿಯೊವನ್ನು ಅನೇಕ ಸ್ಕ್ರೀನ್ಶಾಟ್‌ಗಳಾಗಿ ವಿಭಜಿಸಿ ಅವುಗಳಲ್ಲಿ ಕೆಲವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಆಗಸ್ಟ್ 13 ರಿಂದ ಬಾರ್ಟಾ 24 ರ ವೀಡಿಯೊ ವರದಿಯೊಂದು ನಮಗೆ ಲಭ್ಯವಾಗಿದ್ದು ಇದರಲ್ಲಿ, ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ಇತರರೊಂದಿಗೆ ಪ್ರತಿಭಟಿಸುತ್ತಿರುವುದನ್ನು ಕಾಣಬಹುದು.
ವೀಡಿಯೊದ 2:04 ನಿಮಿಷಗಳಲ್ಲಿ, ಆ ವ್ಯಕ್ತಿ ತನ್ನ ಬಗ್ಗೆ ಬಾಂಗ್ಲಾದಲ್ಲಿ ಮಾತನಾಡಿದ್ದಾನೆ, ಅದನ್ನು ನಾವು ಇಂಗ್ಲಿಷ್‌ಗೆ ಅನುವಾದಿಸಿದ್ದೇವೆ. ತನ್ನ ಹೆಸರು ಬಾಬುಲ್ ಹವಾಲ್ದಾರ್ ಮತ್ತು ತನ್ನ ಮಗನ ಹೆಸರು ಮೊಹಮ್ಮದ್ ಸನ್ನಿ ಹವಾಲ್ದಾರ್ ಎಂದು ಅವರು ಉಲ್ಲೇಖಿಸಿದ್ದಾರೆ.
ಸುದ್ದಿ ವರದಿಯಲ್ಲಿ ಆ ವ್ಯಕ್ತಿ ತಲೆಬುರುಡೆಯ ಟೋಪಿ ಧರಿಸಿದ್ದನ್ನು ನಾವು ಗಮನಿಸಿದ್ದೇವೆ. ವೈರಲ್ ವೀಡಿಯೊದಲ್ಲಿ ಅದೇ ತಲೆಬುರುಡೆಯ ಟೋಪಿ ಅವರ ಕೈಗಳಲ್ಲಿಯೂ ಗೋಚರಿಸುತ್ತದೆ. ಹೋಲಿಕೆಗಳು ಈ ಕೆಳಗಿನಂತಿವೆ.
ಆಗಸ್ಟ್ 13ರ ಸಮಕಾಲ್ ನ್ಯೂಸ್ ನ ಮತ್ತೊಂದು ವರದಿಯಲ್ಲೂ ಈ ವ್ಯಕ್ತಿ ಕಾಣಿಸಿಕೊಂಡಿದ್ದರು. ಈ ವರದಿಯಲ್ಲಿ, ತನ್ನ ಮಗ ಏನು ತಪ್ಪು ಮಾಡಿದ್ದಾನೆಂದು ತನಗೆ ತಿಳಿದಿಲ್ಲ, ಆದರೆ ಜನವರಿ 2013 ರಲ್ಲಿ ದುರ್ಗಾಪುರದಿಂದ ಕರೆದೊಯ್ಯಲಾಯಿತು ಎಂದು ಆ ವ್ಯಕ್ತಿ ಹೇಳಿದ್ದಾರೆ.
ಆಗಸ್ಟ್ 14 ರ ಪ್ರೊಥೊಮಾಲೊ ವರದಿಯ ಪ್ರಕಾರ, ದೇಶಾದ್ಯಂತ ವಿವಿಧ ಸಮಯದಿಂದ ಕಾಣೆಯಾದ ವ್ಯಕ್ತಿಗಳ ಸಂಬಂಧಿಕರು ಬಾಂಗ್ಲಾದೇಶದ ಢಾಕಾದಲ್ಲಿ ಪ್ರತಿಭಟನೆಯಲ್ಲಿ ಒಟ್ಟುಗೂಡಿದ್ದಾರೆ. ವರದಿಯ ಮುಖಪುಟ ಚಿತ್ರದಲ್ಲಿ ಆ ವ್ಯಕ್ತಿಯ ಚಿತ್ರವಿತ್ತು.
ಬಾಂಗ್ಲಾದೇಶದ ಪತ್ರಕರ್ತ ಮತ್ತು ಸತ್ಯಶೋಧಕ ಶೋಹಾನುರ್ ರೆಹಮಾನ್ ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೊದಲ್ಲಿರುವ ವ್ಯಕ್ತಿ ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೇಲಿನ ಸುದ್ದಿ ವರದಿಗಳಲ್ಲಿ ಉಲ್ಲೇಖಿಸಲಾದ ಅದೇ ಹೆಸರಿನ ವ್ಯಕ್ತಿ ಮುಸ್ಲಿಂ ಎಂದು ಅವರು ಹೇಳಿದ್ದಾರೆ. 2013ರಿಂದ ಕಾಣೆಯಾಗಿದ್ದ ತನ್ನ ಮಗನಿಗಾಗಿ ಈ ವ್ಯಕ್ತಿ ಪ್ರತಿಭಟನೆ ನಡೆಸುತ್ತಿದ್ದ. ಕೊನೆಯದಾಗಿ, ಪ್ರತಿಭಟನೆಯು ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿಲ್ಲ ಎಂದು ಪತ್ರಕರ್ತ ಹೇಳಿದರು.
The man in the video is not a minority Hindu but a Muslim named Md. Babul Hawaldar. His son's name is Mohammad Sunny Hawlader, who has been missing since 2013. This protest is not related to missing minority people. If you watch the video, you can easily understand that these are… https://t.co/h4c98Lqwoz pic.twitter.com/G7LUCdYkOH
— Shohanur Rahman (@Sohan_RSB) August 13, 2024
ಎಎನ್ಐ ಸ್ಪಷ್ಟಪಡಿಸಿದೆ : ತಮ್ಮ ಪೋಸ್ಟ್ ಅನ್ನು ಪ್ರಕಟಿಸಿದ ನಂತರ ಮತ್ತು ಆ ವ್ಯಕ್ತಿಯನ್ನು ಬಾಂಗ್ಲಾದೇಶದ ಹಿಂದೂ ಎಂದು ಗುರುತಿಸಿದ ನಂತರ, ಎಎನ್ಐ ತಿದ್ದುಪಡಿಯನ್ನು ಹೊರಡಿಸಿತು ಮತ್ತು “ಈ ವ್ಯಕ್ತಿಯು ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದವನಲ್ಲದ ಕಾರಣ ಈ ಕೆಳಗಿನ ಟ್ವೀಟ್ ಅನ್ನು ಅಳಿಸಲಾಗಿದೆ. ತಪ್ಪಿಗೆ ಪಶ್ಚಾತ್ತಾಪ ಪಡುತ್ತೇನೆ.” ಎಂದಿದ್ದಾರೆ.
Correction: The below tweet has been deleted since this person is not from the minority Hindu community. Error regretted. pic.twitter.com/EY8FBnJc1g
— ANI (@ANI) August 13, 2024
ಮಣಿಪುರ ವೈರಲ್ ವೀಡಿಯೊ ಪ್ರಕರಣದ ಬಗ್ಗೆ ಕೂಡ ಎಎನ್‌ಐ ಇದೇ ರೀತಿ ದಾರಿತಪ್ಪಿಸುವ ಕೋಮು ತಪ್ಪು ಮಾಹಿತಿಯನ್ನು ಹರಡಿದ್ದರು. ಮಣಿಪುರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂದು ತಪ್ಪಾಗಿ ಗುರುತಿಸಿದ್ದರು. ಇದನ್ನು ಕ್ವಿಂಟ್ ಅವರು ಸತ್ಯಶೋಧನೆ ನಡೆಸಿದ್ದರು ಆ ವರದಿಯನ್ನು ಇಲ್ಲಿ ಓದಬಹುದು.
ಎಎನ್ಐ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತ ವ್ಯಕ್ತಿ ಎಂದು ತಪ್ಪಾಗಿ ಗುರುತಿಸಿದೆ ಮತ್ತು ವೀಡಿಯೊವನ್ನು ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯೊಂದಿಗೆ ಲಿಂಕ್ ಮಾಡಿದೆ.
ಇದನ್ನು ಓದಿ: ರಾಜ್ಯದಲ್ಲಿ ಇರಾನಿ ಗ್ಯಾಂಗ್ ಕಳ್ಳತನ ಮತ್ತು ದರೋಡೆ ಮಾಡುತ್ತಿರುವ ಪ್ರಕರಣಗಳು ನಿಜವಾಗಿದೆ
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ