Fact Check: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮೂಲತಃ ಮುಸ್ಲಿಂ ಎಂಬುದು ಸುಳ್ಳು

ಮಮತಾ ಬ್ಯಾನರ್ಜಿ

ಇತ್ತೀಚೆಗೆ ಒಂದು ಪಕ್ಷವನ್ನು ಮತ್ತು ಅದರ ಸಿದ್ದಾಂತವನ್ನು ಒಪ್ಪುವುದಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಮುಸ್ಲಿಂ ಎಂದು ಗುರುತಿಸಿ ಟೀಕಿಸುವ, ಅವಮಾನಿಸುವ ಸಂಸ್ಕೃತಿ ಭಾರತದಲ್ಲಿ ಹೆಚ್ಚಾಗುತ್ತಿದೆ. ಕಳೆದ ಅನೇಕ ಕೆಲವು ವರ್ಷಗಳಿಂದ ಜವಹರಲಾಲ್ ನೆಹರೂ ಅವರು ಮೂಲತಃ ಮುಸ್ಲಿಂ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಮಹಾತ್ಮಾ ಗಾಂಧಿಯವರನ್ನು ಸಹ ಮುಸ್ಲಿಂ ಮೂಲದವರು ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ನಂತರ ಪ್ರಖ್ಯಾತ ಯೂಟೂಬರ್ ಧ್ರುವ ರಾಠಿ ಸಹ ಮುಸ್ಲಿಂ ಆತನ ಮೂಲಕ ಪಾಕಿಸ್ತಾನ ಆ ಕಾರಣಕ್ಕಾಗಿಯೇ ಆತ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ವಿರೋಧಿಸುತ್ತಿದ್ದಾನೆ ಎಂದು ಬಿಂಬಿಸಲಾಗುತ್ತಿದೆ.

ಈಗ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಇಬ್ಬರೂ ಮೂಲತಃ ಮುಸ್ಲಿಂ ಎಂಬ ಸಂದೇಶವೊಂದನ್ನು ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶದ ಕೊನೆಯಲ್ಲಿ ಲಿಂಕ್ ಒಂದನ್ನು ನೀಡಲಾಗಿದ್ದು. ಈ ಲಿಂಕ್ ಬಳಸಿ ಮುಂದುವರೆದರೆ. ಕುಟುಂಬ ಆಫ್‌ – ಎಂಬ ಸಮುದಾಯ ಅಪ್ಲಿಕೇಶನ್ ಗೆ ರೀಡೈರೆಕ್ಟ್‌ ಆಗುತ್ತದೆ.

ಈ ವೈರಲ್ ಸಂದೇಶದಲ್ಲಿ, “ಮಮತಾ ಬ್ಯಾನರ್ಜಿ ಯಾರು ಗೊತ್ತಾ? ಅವರ ನಿಜವಾದ ಹೆಸರು ಮುಮ್ತಾಜ್ ಮಸಾಮಾ ಖಾತೂನ್.!! ಹಿಂದೂಗಳಿಗೆ ಸಿಕ್ಕಿದ ಅದೃಷ್ಟ…. ಸೋನಿಯಾ ಗಾಂಧಿಯವರ ನಿಜವಾದ ಹೆಸರು ಆಂಟೋನಿಯಾ ಅದ್ವಿಗೆ ಅಲ್ವಿನಾ. ಅದೇ ರೀತಿ ಮಮತಾ ಬ್ಯಾನರ್ಜಿಯವರ ಬಗ್ಗೆಯೂ ಒಂದು ದೊಡ್ಡ ಸತ್ಯವಿದೆ. ತೆಗೆದುಹಾಕಲಾಗಿದೆ. ಇಸ್ಲಾಂ ಇತಿಹಾಸದ ಕುರಿತು ಕೋಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ.. ಹಿಂದಿಗಿಂತ ಉರ್ದು ಚೆನ್ನಾಗಿ ಏಕೆ ಮಾತನಾಡುತ್ತಾಳೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇವತ್ತಿನವರೆಗೂ ಅವರ ಹಣೆಯಲ್ಲಿ ಹಿಂದುಗಳಂತೆ ಯಾರಾದರೂ ಚುಕ್ಕಿ ಕಂಡಿದ್ದಾರೆಯೇ? ಬಾಂಗ್ಲಾದೇಶಿಯರ ಮೊದಲ ನಿಲುಗಡೆ ಬಂಗಾಳ ಎಂದು ನಿಮಗೆ ತಿಳಿದಿದೆಯೇ.. ಅವರನ್ನು ಅಲ್ಲಿ “ಢಾಕಾ ಬೆಂಗಾಲಿಗಳು” ಎಂದು ಕರೆಯುತ್ತಾರೆ, ವಾಸ್ತವದಲ್ಲಿ ಮಮತಾಗೆ ಮೌಲ್ವಿ ಮತ್ತು ಇಮಾಮ್‌ಗಿಂತ ಹಿಂದೂಗಳ ಮೇಲೆ ಹೆಚ್ಚು ದ್ವೇಷವಿದೆ ಎಂದು ನಿಮಗೆ ತಿಳಿದಿಲ್ಲ. ಮಮತಾ ಬ್ಯಾನರ್ಜಿ ಅವರು ರೈಲ್ವೆ ಸಚಿವರಾಗಿದ್ದಾಗ ರೈಲಿನಿಂದ ಎಲ್ಲಾ ಹಿಂದೂ ದೇವತೆಗಳ ಹೆಸರು ಮತ್ತು ಚಿಹ್ನೆಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ.. ಮತ್ತು ತೀರ್ಥಯಾತ್ರೆಗಾಗಿ ಓಡುವ ಕೆಲವು ರೈಲುಗಳನ್ನು ನಿಷೇಧಿಸಲು ಬಯಸಿದ್ದರು *
ಮಮತಾ ಆಳ್ವಿಕೆಯಲ್ಲಿ ಇವತ್ತಿನವರೆಗೂ ಬಂಗಾಳದಲ್ಲಿ ಸಾವಿರಾರು ಹಿಂದೂಗಳ ಹತ್ಯೆಯಾಗಿದೆ.” ಎಂದು ಆರೋಪಿಸಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್:

ಮಾಜಿ ಕೇಂದ್ರ ಮಂತ್ರಿ ಮತ್ತು ಪ್ರಸ್ತುತ ಪಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿಯವರ ಧರ್ಮ ಮತ್ತು ಕುಟುಂಬದ ಕುರಿತು ಹುಡುಕಿದಾಗ, ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ (ಈಗ ಕೋಲ್ಕತ್ತಾ) ಬಂಗಾಳಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ಪ್ರಮಿಲೇಶ್ವರ ಬ್ಯಾನರ್ಜಿ ಮತ್ತು ತಾಯಿ ಗಾಯೆತ್ರಿ ದೇವಿ ಎಂದು ತಿಳಿದು ಬಂದಿದೆ. ಬ್ಯಾನರ್ಜಿಯವರ ತಂದೆ ಪ್ರೋಮಿಲೇಶ್ವರ್ ಅವರು 17 ವರ್ಷದವರಾಗಿದ್ದಾಗ ವೈದ್ಯಕೀಯ ಚಿಕಿತ್ಸೆಯ ಕೊರತೆಯಿಂದಾಗಿ ನಿಧನರಾದರು. ಎಂದು ವಿಕಿಪಿಡಿಯ ಮಾಹಿತಿ ನೀಡುತ್ತದೆ.

1970 ರಲ್ಲಿ, ಬ್ಯಾನರ್ಜಿಯವರು ದೇಶಬಂಧು ಶಿಶು ಶಿಕ್ಷಾಲಯದಿಂದ ಉನ್ನತ ಮಾಧ್ಯಮಿಕ ಬೋರ್ಡ್ ಪರೀಕ್ಷೆಯನ್ನು ಪೂರ್ಣಗೊಳಿಸಿದರು. ಅವರು ಜೋಗಮಯ ದೇವಿ ಕಾಲೇಜಿನಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ, ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಇಸ್ಲಾಮಿಕ್ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಇದರ ನಂತರ ಶ್ರೀ ಶಿಕ್ಷಾಯತನ್ ಕಾಲೇಜಿನಿಂದ ಶಿಕ್ಷಣದಲ್ಲಿ ಪದವಿ ಮತ್ತು ಕೋಲ್ಕತ್ತಾದ ಜೋಗೇಶ್ ಚಂದ್ರ ಚೌಧುರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದಾರೆ. 

ಇನ್ನೂ ವೈರಲ್ ಸಂದೇಶದಲ್ಲಿ ಉಲ್ಲೇಖಿಸಿರುವಂತೆ ಮಮತಾ ಬ್ಯಾನರ್ಜಿಯವರ ಆಡಳಿತಾವಧಿಯಲ್ಲಿ ಸಾವಿರಾರು ಹಿಂದುಗಳ ಹತ್ಯೆ ನಡೆಸಲಾಗಿದೆ ಎಂಬುದು  ಸುಳ್ಳು. ಈ ಕುರಿತು ಹುಡುಕಿದಾಗ ಮಮತಾ ಬ್ಯಾನರ್ಜಿಯವರ ಸರ್ಕಾರ ಸಾವಿರಾರು ಹಿಂದುಗಳ ಹತ್ಯೆ ನಡೆಸಲಾಗಿದ ಕುರಿತು ಒಂದೇ ಒಂದು ವರದಿಗಳು ಸಹ ಸಿಗುವುದಿಲ್ಲ. ಇದೊಂದು ಬೀಸು ಹೇಳಿಕೆಯಾಗಿದ್ದು ಸಂಪೂರ್ಣ ಸುಳ್ಳು ಆರೋಪವಾಗಿದೆ. 

ಇನ್ನೂ ಮಮತಾ ಬ್ಯಾನರ್ಜಿಯವರು ರೈಲುಗಳ ಹೆಸರುಗಳನ್ನು ಮರುನಾಮಕರಣ ಮಾಡಲು ಹೊರಡಿದ್ದರು ಎಂಬ ಹೇಳಿಕೆಯನ್ನು ಪರಿಶೀಲಿದಾಗ, 2009 ರಲ್ಲಿ ಕೇಂದ್ರ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿಯವರು  ಹೌರಾ ಮತ್ತು ದಿಘಾ ನಡುವಿನ ದೈನಂದಿನ ರೈಲುಗಳಲ್ಲಿ ಒಂದರ ಹೆಸರನ್ನು ನಂದಿಮಾ ಎಕ್ಸ್ ಪ್ರೆಸ್ ನಿಂದ ತಾಮ್ರಲಿಪ್ತಾ ಎಕ್ಸ್ ಪ್ರೆಸ್ ಎಂದು ಬದಲಾಯಿಸಲು ನಿರ್ಧರಿಸಿದ್ದರು. ನಂದಿಮಾ ಎಂಬ ಪದವನ್ನು ಮಮತಾ ಅವರು ನಂದಿಗ್ರಾಮದಿಂದ ರಚಿಸಿದ್ದರು(ನಂದಿ ಗ್ರಾಮದ ಹೋರಾಟದಿಂದ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದಲ್ಲಿ ಅತಿ ದೊಡ್ಡನಾಯಕಿಯಾಗಿ ಹೊರಹೊಮ್ಮಿದ್ದರು) ಇದರಿಂದ ಮಮತಾ ಅವರ ಕೆಲವು ನಿಕಟ ಸಹವರ್ತಿಗಳು ಸಹ ಈ ಹೆಸರಿನಿಂದ ಅಸಮಧಾನವನ್ನು ಹೊರಹಾಕಿದರು. ನಂತರ ಅವರು ರೈಲಿನ ಹೆಸರನ್ನು ಬದಲಾಯಿಸಲಿಲ್ಲ.

ನಂತರ 2019 ರಲ್ಲಿ ಪಶ್ಚಿಮ ಬಂಗಾಳದ ರಾಜ್ಯದ ಹೆಸರನ್ನು ಬಂಗ್ಲಾ ಎಂದು ಬದಲಿಸಲು ಕೇಂದ್ರಕ್ಕೆ ಮನವಿ ಮಾಡಿದ್ದರು. ಹಾಗೆಯೇ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ‘ಬಾಂಗ್ಲಾ’ವನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಅದು ಇನ್ನೂ ಸಾಧ್ಯವಾಗಿಲ್ಲ.

ಇನ್ನೂ ಸೋನಿಯಾ ಗಾಂಧಿಯವರ ಧರ್ಮಕ್ಕೆ ಸಂಬಂಧಿಸಿದಂತೆ, ಸೋನಿಯಾ ಮೈನೊ 9 ಡಿಸೆಂಬರ್ 1946 ರಂದು ಲುಸಿಯಾನಾದಲ್ಲಿ (ಮೈನಿ ಬೀದಿಯಲ್ಲಿ) ಸ್ಟೆಫಾನೊ ಮತ್ತು ಪಾವೊಲಾ ಮೈನೊ ದಂಪತಿಗೆ ಜನಿಸಿದರು, ಇಟಲಿಯ ವೆನೆಟೊದಲ್ಲಿ ವಿಸೆಂಜಾದಿಂದ ಸುಮಾರು 35 ಕಿಮೀ ದೂರದಲ್ಲಿರುವ ಐತಿಹಾಸಿಕವಾಗಿ ಸಿಂಬ್ರಿಯನ್-ಮಾತನಾಡುವ ಹಳ್ಳಿ ಅವರದಾಗಿದೆ. ನಾಡಿಯಾ ಮತ್ತು ಅನೌಷ್ಕಾ ಸೋನಿಯಾ ಅವರ ಸಹೋದರಿಯರಾಗಿದ್ದಾರೆ. ಇವರು ಸಾಂಪ್ರದಾಯಿಕ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಕುಟುಂಬದಲ್ಲಿ ಬೆಳೆದಿದ್ದಾರೆ. 

ಸೋನಿಯಾ ಮೈನೋ ಅವರು ರಾಜೀವ್ ಗಾಂಧಿಯವರನ್ನು ಪ್ರೀತಿಸಿದ ಬಳಿಕ ಹಿಂದು ಧರ್ಮದ ಸಂಪ್ರದಾಯಿಸಿದ ಪ್ರಕಾರವೇ ಇಬ್ಬರೂ ಮದುವೆಯಾಗಿದ್ದಾರೆ. ಮತ್ತು ಹಿಂದು ಧರ್ಮವನ್ನು ಅನುಸರಿಸುತ್ತಿದ್ದಾರೆ.

ಆದ್ದರಿಂದ ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ ಇಬ್ಬರು ಮೂಲತಃ ಮುಸ್ಲಿಂ ಎಂಬುದು ಸುಳ್ಳು. ಉದ್ದೇಶಪೂರ್ವಕವಾಗಿ ಕೆಲವರು ಈ ರೀತಿಯ ಸುಳ್ಳುಗಳನ್ನು ಹಂಚಿಕೊಳ್ಳುತ್ತಿದ್ದಾರೆ.


ಇದನ್ನು ಓದಿ: ಇಂಗ್ಲೆಂಡ್‌ನ ಪೊಲೀಸರು ಮುಸಲ್ಮಾನರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *