Fact Check | ಕೋಲ್ಕತ್ತಾ ಪ್ರಕರಣದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿ ಕೊಲೆಗೈಯ್ಯಲಾಗಿದೆ ಎಂಬುದು ಸುಳ್ಳು

“14 ಆಗಸ್ಟ್ 2024 ರ ರಾತ್ರಿ, ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಮಹಿಳೆಯರಿಂದ “ರಿಕ್ಲೈಮ್ ದಿ ನೈಟ್” ಪ್ರತಿಭಟನೆಯನ್ನು ಆಯೋಜಿಸಲಾಯಿತು. ಈ ಫ್ರತಿಭಟನೆಯಲ್ಲಿ ಭಾಗಿಯಾಗಿ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿ ಅಂಕಿತಾ ಬೌರಿ ಎಂಬಾಕೆಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಪ್ರಕರಣದ ಕುರಿತು ಯಾರು ಕೂಡ ಏನನ್ನು ಮಾತನಾಡುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯೇ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಈ ಪೋಸ್ಟ್‌ ನೋಡಿದ ಹಲವರು ಆಕ್ರೋಶವನ್ನು ವ್ಯಕ್ತಪಡಿಸಿ ಪಶ್ಚಿಮ ಬಂಗಾಳದ ಪೊಲೀಸರ ವಿರುದ್ಧ ತಮ್ಮ ತಮ್ಮೆ ಅಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ, ಅಲ್ಲಿನ ಸರ್ಕಾರದ ವಿರುದ್ಧ ಕೂಡ ಕಿಡಿ ಕಾರುತ್ತಿದ್ದಾರೆ. ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂಡ ಇದೇ ರೀತಿಯ ಸಂದೇಶವನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾದಲ್ಲಿ ಹುಡುಕಾಟವನ್ನು ಕೂಡ ನಡೆಸಲಾಯಿತು. ಈ ವೇಳೆ ನಮಗೆ 17 ಆಗಸ್ಟ್‌ 2024 ರಂದು ಅಮನ್‌ ದೇಸಾಯಿ ಎಂಬ ಎಕ್ಸ್‌ ಬಳಕೆದಾರು ” ಅಂಕಿತಾ ಬೌರಿ ಪ್ರಕರಣವು ನಕಲಿಯಾಗಿದೆ. ದಯವಿಟ್ಟು ಯಾವುದೇ ತಪ್ಪು ಮಾಹಿತಿಯನ್ನು ಹರಡಬೇಡಿ. ಸಂತ್ರಸ್ತೆಯ ನಿಜವಾದ ಹೆಸರು ಪ್ರಿಯಾಂಕಾ ಹನ್ಸ್ದಾ, ಇದಕ್ಕೂ ಕೋಲ್ಕತ್ತಾ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಪೋಸ್ಟ್‌ ಮಾಡಿದ್ದಾರೆ.

ಇದರ ಆಧಾರದಲ್ಲಿ ಇನ್ನಷ್ಟು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಿದಾಗ 17 ಆಗಸ್ಟ್ 2024 ರಂದು ದಿ ಸ್ಟೇಟ್ಸ್‌ಮನ್ ಪ್ರಕಟಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ . ಈ ವರದಿಯಲ್ಲಿ ನಂದೂರ್ ಗ್ರಾಮದ ಹೊಲವೊಂದರಲ್ಲಿ ಬುಡಕಟ್ಟು ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ, ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಲಾಗಿದೆ. ಬರ್ಧಮಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

22 ವರ್ಷದ ಪ್ರಿಯಾಂಕಾ ಹನ್ಸ್ಡಾ ಬುರ್ದ್ವಾನ್ ವಿಶ್ವವಿದ್ಯಾನಿಲಯದಲ್ಲಿ ಎಂಎ (ತತ್ವಶಾಸ್ತ್ರ) ವಿದ್ಯಾರ್ಥಿನಿಯಾಗಿದ್ದಳು ಮತ್ತು ಬರ್ಧಮಾನ್‌ನ ಶಾಪಿಂಗ್ ಮಾಲ್‌ನಲ್ಲಿ ಮಾರಾಟ ಕಾರ್ಯನಿರ್ವಾಹಕಳಾಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದಳು ಎಂದು ವರದಿ ಬಹಿರಂಗಪಡಿಸಿದೆ. ಸ್ವಾತಂತ್ರ್ಯ ದಿನದಂದು ಆಕೆಯ ಅತ್ಯಾಚಾರ ಮತ್ತು ಕೊಲೆಯ ಸುದ್ದಿ ವೈರಲ್ ಆಗಿತ್ತು. ಆದಾಗ್ಯೂ, ಪೂರ್ವ ಬುರ್ದ್ವಾನ್ ಎಸ್ಪಿ ಅಮನದೀಪ್ ಸಿಂಗ್ ಅತ್ಯಾಚಾರದ ಸಾಧ್ಯತೆಯನ್ನು ನಿರಾಕರಿಸಿದರು, “ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರದ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಕುಟುಂಬ ಸದಸ್ಯರು ಕೂಡ ಅಂತಹ ಯಾವುದೇ ದೂರು ನೀಡಿಲ್ಲ” ಎಂದು ಹೇಳಿದ್ದಾರೆ.

17 ಆಗಸ್ಟ್ 2024 ರಂದು ದಿ ಟೆಲಿಗ್ರಾಫ್‌ನ ವರದಿಯಲ್ಲಿ , ಬಾಲಕಿಯ ಅತ್ಯಾಚಾರ ಮತ್ತು ಕೊಲೆಯ ವೈರಲ್ ಹಕ್ಕುಗಳ ಬಗ್ಗೆ ಪೊಲೀಸರು ಸ್ಪಷ್ಟೀಕರಣವನ್ನು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಎಸ್ಪಿ ಅಮನದೀಪ್ ಖಚಿತಪಡಿಸಿದ್ದಾರೆ.

ಇದರ ನಂತರ, ನಾವು ಪೂರ್ವ ಬರ್ಧಮಾನ್ ಪೊಲೀಸರ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳನ್ನು ಪರಿಶೀಲಿಸಿದ್ದೇವೆ ಮತ್ತು ಅಂಕಿತಾ ಬೌರಿ ಒಳಗೊಂಡ ಪ್ರಕರಣವನ್ನು ಅವರು ನಿರಾಕರಿಸಿದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ . ಆ ಪೋಸ್ಟ್‌ನಲ್ಲಿ, “ಆರ್‌ಜಿ ಕರ್ ಘಟನೆಗೆ ಸಂಬಂಧಿಸಿದ ಮೆರವಣಿಗೆಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದ ಅಂಕಿತಾ ಬೌರಿ ಎಂಬ ಯುವತಿಯನ್ನು ಆಗಸ್ಟ್ 14 ರಂದು ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಎಂದು ಕೆಲವರು ವದಂತಿಗಳನ್ನು ಹರಡುತ್ತಿದ್ದಾರೆ, ನಿಜವೆಂದರೆ ಅಂತಹ ಅತ್ಯಾಚಾರ ಮತ್ತು ಹತ್ಯೆಯ ಘಟನೆ ನಡೆದಿಲ್ಲ. ಅಂಕಿತಾ ಬೌರಿ ಎಂಬ ಬಾಲಕಿಯ ಹತ್ಯೆ ಬರ್ಧಮಾನ್‌ನಲ್ಲಿ ನಡೆದಿದ್ದು, ಇಂತಹ ವದಂತಿಗಳನ್ನು ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಪೂರ್ವ ಬರ್ಧಮಾನ್ ಪೊಲೀಸರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್‌ ಪೋಸ್ಟ್‌ನಲ್ಲಿ ಹಂಚಿಕೊಂಡಂತೆ ಆರ್‌ಜಿ ಕರ್ ಘಟನೆಗೆ ಸಂಬಂಧಿಸಿದ ಮೆರವಣಿಗೆಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದ ಅಂಕಿತಾ ಬೌರಿ ಎಂಬ ಯುವತಿಯ ಹತ್ಯಾಚಾರ ನಡೆದಿದೆ ಎಂಬುದು ಸುಳ್ಳು ಪ್ರತ್ಯೇಕ ಪ್ರಕರಣಕ್ಕೆ ಸುಳ್ಳು ಮಾಹಿತಿಯುಳ್ಳ ಕತೆ ಕಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ಶೇರ್‌ ಮಾಡುವುದು ಅಪರಾದವಾಗಿದೆ ಮತ್ತು ಈ ರೀತಿಯ ಸುದ್ದಿಗಳು ಕಂಡು ಬಂದರೆ ಪರಿಶೀಲಿಸಿ.


ಇದನ್ನೂ ಓದಿ: Fact Check| ಐಶ್ವರ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಭಿಷೇಕ್ ವಿಚ್ಛೇದನ ಘೋಷಿಸಿದ್ರಾ? ಸತ್ಯ ಇಲ್ಲಿದೆ ಓದಿ…


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *