“ಇಂಗ್ಲೆಂಡ್‌ನ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಅವರ ಪ್ರಾಬಲ್ಯ ಅಲ್ಲಿನ ಭವಿಷ್ಯಕ್ಕೆ ಆಪತ್ತನ್ನು ತರಲಿದೆ. ಇದು ಆ ದೇಶಕ್ಕೆ ಅರ್ಥವಾಗುತ್ತಿಲ್ಲ ಈಗ ಇಂಗ್ಲೆಂಡಿನ ಪೊಲೀಸರು ಮುಸ್ಲಿಂ ನಾಯಕರ ಕಾಲಿಗೆ ಬಿದ್ದಿದ್ದಾರೆ. ಇದು ಶರಣಾಗತಿಯ ಸಂಕೇತ” ಎಂದು ಹಲವರು ಸಾಮಾಜಿಕ ಜಾಲತನದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದು ಇಂಗ್ಲೆಂಡ್‌ನಲ್ಲಿ ಕ್ರೈಸ್ತ ಸಮುದಾಯದ ಅವನತಿಯ ಸಂಕೇತವೆಂದು ಕೂಡ ಹಂಚಿಕೊಳ್ಳುತ್ತಿದ್ದಾರೆ.
This image reflects current policing strategy perfectly. pic.twitter.com/QEOUAzEbY5
— Paul Golding (@GoldingBF) August 15, 2024
ಈ ಫೋಟೋ ನೋಡಿದ ಹಲವರು ಇದು ನಿಜವಾದ ಚಿತ್ರವೆಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ ಜೊತೆಗೆ ಮುಸಲ್ಮಾನ ಸಮುದಾಯದ ವಿರುದ್ಧ ಆಧಾರ ರಹಿತ ವಿಚಾರಕ್ಕಾಗಿ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋ ಕುರಿತು ಈ ಫ್ಯಾಕ್ಟ್‌ಚೆಕ್ ನಲ್ಲಿ ಪರಿಶೀಲನೆ ನಡೆಸೋಣ
This image reflects current policing strategy perfectly. pic.twitter.com/bBb46VT4BL
— Godfrey Bloom (@GodfreyBlool) August 16, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ವೈರಲ್ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಲವು ಲೋಪಗಳು ಅದರಲ್ಲಿ ಇರುವುದು ಪತ್ತೆಯಾಗಿದೆ. ಹೀಗಾಗಿ ಈ ಫೋಟೋವನ್ನು AI ನಿಂದ ಸೃಷ್ಟಿಸಿರುವ ಸಾಧ್ಯತೆ ಹೆಚ್ಚಿರುವುದು ನಮಗೆ ಕಂಡು ಬಂದಿದೆ. ಹೀಗಾಗಿ ನಾವು ಈ ಫೋಟೋವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲು ಮುಂದಾದೆವು.
ಇದಕ್ಕಾಗಿ ವೈರಲ್ ಫೋಟೋವನ್ನು AI ಪತ್ತೆ ಹಚ್ಚುವ ಸಾಧನವಾದ ಎಐ ಡಿಟೆಕ್ಟರ್, ಹೈವ್ ಮಾಡರೇಶನ್, ಹಗ್ಗಿಂಗ್ ಫೇಸ್ ಸೇರಿದಂತೆ ವಿವಿಧ AI ಪತ್ತೆ ಹಚ್ಚುವ ಸಾಧಾನಗಳಲ್ಲಿ ವೈರಲ್ ಫೋಟೋವನ್ನು ಪರಿಶೀಲನೆ ನಡೆಸಲಾಯಿತು. ಈ ವೇಳೆ ಬಹುತೇಕ AI ಪತ್ತೆ ಹೆಚ್ಚುವ ಸಾಧನಗಳು ಈ ಫೋಟೋ AIನಿಂದ ನಿರ್ಮಿತ ಆಗಿದೆ ಎಂಬುದನ್ನು ಸ್ಪಷ್ಟಪಡಿಸುವೆ. ಅದರಲ್ಲಿ ಪ್ರಮುಖವಾಗಿ ಹೈವ್ ಮಾಡರೇಶನ್ ಶೇ.99.2ರಷ್ಟು ಈ ಚಿತ್ರ ಆರ್ಟಿಫಿಷಲ್ ಇಂಟಲಿಜೆನ್ಸ್‌ನನಿಂದ ಹಂಚಿಕೊಳ್ಳಲಾಗಿದೆ ಎಂಬುದನ್ನು ದೃಢ ಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ಆಗುತ್ತಿರುವ ಫೋಟೋವನ್ನು AI ನಿಂದ ನಿರ್ಮಿಸಲಾಗಿದ್ದು, ಈ ಫೋಟೋವಿನ ಮೂಲಕ ಮುಸ್ಲಿಂ ಸಮುದಾಯವು ಇಂಗ್ಲೆಂಡಿನಲ್ಲಿ ಪ್ರಾಬಲ್ಯವನ್ನು ಹೆಚ್ಚು ಮಾಡಿಕೊಂಡಿದೆ ಎಂಬುದನ್ನು ತೋರಿಸಲು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸಾಬೀತಾಗಿದೆ. ಹಾಗಾಗಿ ಇಂತಹ ವೈರಲ್ ಫೋಟೋಗಳು ನಿಮಗೆ ಕಂಡುಬಂದರೆ ಅದನ್ನು ಪರಿಶೀಲಿಸದೆ ಹಂಚಿಕೊಳ್ಳಬೇಡಿ ಮತ್ತು ಇಂತಹ ಸುಳ್ಳು ಮಾಹಿತಿಯ ಫೋಟೋಗಳನ್ನು ಹಂಚಿಕೊಳ್ಳುವುದು ಅಪರಾಧವಾಗಿದೆ.