Fact Check| ಐಶ್ವರ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಭಿಷೇಕ್ ವಿಚ್ಛೇದನ ಘೋಷಿಸಿದ್ರಾ? ಸತ್ಯ ಇಲ್ಲಿದೆ ಓದಿ…

ಬಾಲಿವುಡ್ ತಾರಾ ದಂಪತಿ ಐಶ್ವರ್ಯ ರೈ ಬಚ್ಚನ್‌ರೊಂದಿಗೆ ಅಭಿಷೇಕ್ ಬಚ್ಚನ್ ವಿಚ್ಛೇದನ ತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಅನಂತ್ ಅಂಬಾನಿ ವಿವಾಹ ಸಂಭ್ರಮದಲ್ಲಿ ಐಶ್ವರ್ಯಾ ರೈ ಬಚ್ಚನ್​​ ತಮ್ಮ ಮಗಳು ಆರಾಧ್ಯ ಜೊತೆ ಪ್ರತ್ಯೇಕವಾಗಿ ಫೋಟೋ ಬೂತ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಈ ವಿಡಿಯೋ ಹರಿಬಿಡಲಾಗಿದ್ದು, ವಿಚ್ಛೇದನ ಕುರಿತ ಊಹಾಪೋಹಗಳಿಗೆ ಇನ್ನಷ್ಟು ಪುಷ್ಠಿ ನೀಡಿತ್ತು.

ಫ್ಯಾಕ್ಟ್‌ಚೆಕ್

ವಿಚ್ಚೇದನ ಪಡೆಯುತ್ತಿದ್ದೇವೆ ಎಂದು ಅಭಿಷೇಕ್ ಹೇಳಿದ್ದಾರೆ ಎನ್ನಲಾದ ವಿಡಿಯೋ ಡೀಪ್ ಫೇಕ್​ ತಂತ್ರಜ್ಞಾನ ಬಳಸಿ ತಯಾರಿಸಿದ್ದು ಎಂಬುದು ಸಾಬೀತಾಗಿದ್ದು, 2022ರಲ್ಲಿ ‘ನನ್ಹಿ ಕಲಿ’ ಎಂಬ ಎನ್ಜಿಓ ಸಂಸ್ಥೆಗಾಗಿ ಅಭಿಷೇಕ್ ಪ್ರಚಾರ ಮಾಡಿದ್ದ ವಿಡಿಯೋವನ್ನು AI(ಕೃತಕ ತಂತ್ರಜ್ಞಾನ) ಬಳಸಿ ಧ್ವನಿಯನ್ನು ನಕಲು ಮಾಡಿ ತಿರುಚಲಾಗಿದೆ. ವಿಚ್ಚೇದನ ಪಡೆಯುತ್ತಿದೇವೆ ಎಂದು ಹೇಳಿರುವ ವಿಡಿಯೋ ನಕಲಿ ಎಂಬುದು ಇದರಿಂದ ಸಾಬೀತಾಗಿದೆ.

 

View this post on Instagram

 

A post shared by Project Nanhi Kali (@nanhikali)

‘ನನ್ಹಿ ಕಲಿ’ ಎಂಬ ಎನ್‌ಜಿಓ ಸಂಸ್ಥೆಯೊಂದರ ಪ್ರಚಾರದ ಭಾಗವಾಗಿ ಅಭಿಷೇಕ್ ಬಚ್ಚನ್‌ರವರು ಜನರಿಗೆ ಫೋಟೋ ಫ್ರೇಮ್‌ಗಳನ್ನು ಖರೀದಿಸಲು ಕರೆ ನೀಡುತ್ತಿದ್ದು, ವಿಡಿಯೋದಲ್ಲಿ ‘ನನ್ಹಿ ಕಲಿ’ ಹೇಗೆ ಭಾರತದಲ್ಲಿ ಹಿಂದುಳಿದ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ ಎಂಬುದನ್ನು ವಿವರಿಸಿದ್ದರು. ಈ ವಿಡಿಯೋವನ್ನು 2022ರ ನವೆಂಬರ್ 7ರಂದು ‘ನನ್ಹಿ ಕಲಿ’ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿತ್ತು.

ಇದೇ ವಿಡಿಯೋವನ್ನು ಬಳಸಿ ವಿಚ್ಛೇದನದ ಬಗ್ಗೆ ಡೀಪ್ ಫೇಕ್ ವಿಡಿಯೋ ತಯಾರಿಸಲಾಗಿದ್ದು ಅಭಿಷೇಕ್ ಹಿಂದೆ ಇರುವ ದೀಪದ ಚಿತ್ರವು ವಿಡಿಯೋ ತಿರುಚಿರುವುದಕ್ಕೆ ಸಾಕ್ಷಿ ಆಗಿದೆ.

ಈ ಹಿಂದೆ ನಟಿ  ಕಾಜಲ್, ಖ್ಯಾತ ನಟ ಅಮಿತಾಬ್‌ ಬಚ್ಚನ್ ಸೇರಿದಂತೆ ಇತರೆ ಬಾಲಿವುಡ್ ತಾರೆಗಳು ಕೂಡ ತಮ್ಮ ಬಗ್ಗೆ ಡೀಪ್ ಫೇಕ್ ವಿಡಿಯೋಗಳು ಹರಿದಾಡುತ್ತಿರುವ ಬಗ್ಗೆ ಆಗಾಗ ಮಾತಾಡಿರುವುದನ್ನು ಇಲ್ಲಿ ಸ್ಮರಿಸಬಹುದು.


ಇದನ್ನು ಓದಿ: Fact Check|ಆರ್ ಜಿ ಕರ್ ಸಂತ್ರಸ್ತೆಯ ದೇಹದಲ್ಲಿ 150 ಗ್ರಾಂ ವೀರ್ಯ ಪತ್ತೆಯಾಗಿಲ್ಲ, ಮರಣೋತ್ತರ ಪರೀಕ್ಷೆಯ ವರದಿಯು ಜನನಾಂಗದ ತೂಕವನ್ನು ಉಲ್ಲೇಖಿಸುತ್ತದೆ


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *