Fact Check: ಮುಂಬೈನ ರಸ್ತೆ ಜಗಳದ ವೀಡಿಯೋವನ್ನು ಹಿಂದೂ ಅರ್ಚಕನಿಗೆ ಜಿಹಾದಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿದೆ

ಹಿಂದೂ

ಕಳೆದ ಅನೇಕ ದಶಕಗಳಿಂದ ರಸ್ತೆ ಜಗಳಗಳ ವೀಡಿಯೋಗಳನ್ನು ಮತ್ತು ಸಂಬಂಧವಿರದ ವೈರಲ್ ವೀಡಿಯೋಗಳನ್ನು ಹಿಂದು ಮುಸ್ಲಿಂ ಜಗಳ ಎಂದು ಬಿಂಬಿಸಿ ಜನರ ನಡುವೆ ಹರಿಬಿಡಲಾಗುತ್ತಿದೆ. ಮತ್ತು ಈ ಮೂಲಕ ಕೋಮು ಸೌಹಾರ್ಧವನ್ನು ಹಾಳು ಮಾಡಲು ಕೆಲವು ರಾಜಕೀಯ ಪಕ್ಷಗಳ ಮುಖಂಡರು ಮತ್ತು ಅವರ ಬೆಂಬಲಿಗರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.

ಮಿಸ್ಟರ್. ಸಿನ್ಹಾ ಎಂಬ ಬಲಪಂಥೀಯ ಮತ್ತು ಬಿಜೆಪಿ ಐಟಿ ಸೆಲ್‌ನ ಪ್ರಭಾವಿಯೊಬ್ಬರು ಇತ್ತೀಚೆಗೆ ವೀಡಿಯೋ ಒಂದನ್ನು ಹಂಚಿಕೊಂಡು ಅದನ್ನು ಹಿಂದು ಮುಸ್ಲಿಂ ಕಲಹ ಎಂದು ಆರೋಪಿಸಿದ್ದಾರೆ. “ಮುಂಬೈನಿಂದ ಕಂಡಿವಲಿ ಲಾಲ್ಜಿಪಾಡಾ ಪ್ರದೇಶದಲ್ಲಿ ಪೂಜೆ ಮುಗಿಸಿ ಹಿಂತಿರುಗುತ್ತಿದ್ದ ಅರ್ಚಕರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾದ ಆಘಾತಕಾರಿ ವಿಡಿಯೋ.” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಸಿನ್ಹಾನ ನಂತರ ಈ ವೀಡಿಯೋವನ್ನು ಅನೇಕರು ಹಂಚಿಕೊಂಡಿದ್ದಾರೆ ಮತ್ತು ಇದೇ ರೀತಿ ಆರೋಪಿಸಿ ಮುಸ್ಲಿಂ ಸಮುದಾಯವನ್ನು ಟೀಕಿಸುತ್ತಿದ್ದಾರೆ.

ಇಂತಹ ಇನ್ನಷ್ಟು ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್ ಚೆಕ್:

ವೈರಲ್ ವೀಡಿಯೋ ಹಿಂದು ಮುಸ್ಲಿಂ ಜಗಳಕ್ಕೆ ಸಂಬಂಧಿಸಿರದೆ ರಸ್ತೆಯಲ್ಲಿ ನಡೆದ ಕಲಹಕ್ಕೆ ಸಂಬಂಧಿಸಿದ್ದಾಗಿದೆ. ಪ್ರಥಮ್ ದಿಗಂಬರ್ ಖಿಲ್ಲರೆ ಅವರು ಮೋಟಾರು ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಲಾಲ್ಜಿಪಾಡಾ ಪ್ರದೇಶದಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ತೀವ್ರ ವಾಗ್ವಾದ ನಡೆದಿದೆ. ಆಗ ಪ್ರಥಮ್ ತನ್ನ ಸ್ನೇಹಿತ ಖಲೀಲುಲ್ಲಾ ಮಣಿಯಾರ್ ಗೆ ಕರೆ ಮಾಡಿದ್ದಾನೆ. ಇಬ್ಬರೂ ಪೂಜಾರಿ ಮತ್ತು ಅವರ ಸೋದರ ಮಾವನ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದಾರೆ. ಪ್ರಥಮ್ ದಿಗಂಬರ್ ಮತ್ತು ಆತನ ಸ್ನೇಹಿತ ಖಲೀಲುಲ್ಲಾ ಮಣಿಯಾರ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ನಾವು ವೈರಲ್ ವೀಡೀಯೋದ ಕೆಲವು ಫ್ರೇಮ್‌ಗಳನ್ನು ಬಳಸಿ ಕೀವರ್ಡ್‌ ಸರ್ಚ್‌ ನಡೆಸಿದಾಗ ಗುಜರಾತಿ ಮಿಡ್ಡೆ ಎಂಬ ಮಾಧ್ಯಮದ ವರದಿಯೊಂದು ಲಭ್ಯವಾಗಿದ್ದು ಈ ವರದಿಯಲ್ಲಿ ವೈರಲ್ ವೀಡಿಯೋದ ಪೋಟೋಗಳನ್ನೇ ಬಳಸಿರುವುದು ಕಂಡು ಬಂದಿದೆ. ಈ ಕೆಳಗೆ, ಗೂಗಲ್ ಟ್ರಾನ್ಸ್‌ಲೆಟ್‌ ಮೂಲಕ ಸುದ್ಧಿಯನ್ನು ಕನ್ನಡಕ್ಕೆ ಬದಲಾಯಿಸಲಾಗಿದೆ.

ಹಾಗೆಯೇ ಗೊಂಡ್‌ವನ ಯುನಿವರ್ಸಿಟಿ ಎಂಬ ಸುದ್ದಿ ಮಾಧ್ಯಮ ಸಹ ಈ ಘಟನೆಯನ್ನು ವರದಿ ಮಾಡಿರುವುದು ಕಂಡು ಬಂದಿದ್ದು “ಮಹಾರಾಷ್ಟ್ರದಲ್ಲಿ ಮತ್ತೆ ಗುಂಪು ಹತ್ಯೆ! ಈಗ ಮುಂಬೈನಲ್ಲಿ ಅರ್ಚಕರ ಮೇಲೆ ಹಲ್ಲೆ, ಲಾಠಿ ಪ್ರಹಾರ; ಚಾಕುವಿನಿಂದ ಹೊಡೆದರು” ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿದ್ದಾರೆ.

ಆದ್ದರಿಂದ ಈ ಘಟನೆ ಹಿಂದು-ಮುಸ್ಲಿಂ ಜಗಳವಾಗಿರದೇ ರಸ್ತೆಯಲ್ಲಿ ನಡೆದ ಕಲಹವಾಗಿದೆ. ವೈರಲ್ ವೀಡಿಯೋವನ್ನು ಹಂಚಿಕೊಳ್ಳುತ್ತಿರುವಂತೆ ಹಿಂದೂ ಅರ್ಚಕರಿಗೆ ಜಿಹಾದಿಗಳು ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು.


ಇದನ್ನು ಓದಿ: ಉದ್ಧವ್ ಠಾಕ್ರೆಯನ್ನು ನಕಲಿ ಸಂತಾನ ಎಂದು ಕೇಜ್ರಿವಾಲ್ ನಿಂದಿಸಿಲ್ಲ. ಅದು ಎಡಿಟೆಡ್‌ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *