ಕೋಲ್ಕತ್ತಾ ಆರ್‌ಜಿ ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊಲೆ ಹಾಗೂ ಅತ್ಯಾಚಾರಕ್ಕೊಳಗಾದ ವೈದ್ಯಕೀಯ ವಿದ್ಯಾರ್ಥಿನಿಯ ಜೀವನದ ಕೊನೆಯ ಕ್ಷಣಗಳು ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕೋಲ್ಕತ್ತಾ ಮೂಲದ ಮೇಕಪ್ ಕಲಾವಿದೆ ಝೀನತ್ ರಹ್ಮಾನ್ ಅವರದ್ದು ಎಂದು ಗುರುತಿಸಲಾಗಿದೆ.
ಸಿನೆಮಾ ನಟಿಯರ ಮೇಕಪ್ ಹಾಗೂ ಉಡುಗೆಯ ನಕಲು, ಭೀಕರ ಘಟನೆಗಳು ಹಾಗೂ ಸಿನೆಮಾದ ತುಣುಕುಗಳನ್ನು ಮರು ಸೃಷ್ಟಿಸುವ ಕೆಲಸವನ್ನು ಝೀನತ್ ರಹ್ಮಾನ್ ಮಾಡುತ್ತಾರೆ.
2020ರಿಂದ ತಮ್ಮ ಇನ್ಸ್ಟಾ ಖಾತೆಯಲ್ಲಿ ಇಂತಹ ವಿಡಿಯೋ ಹಾಗೂ ಚಿತ್ರಗಳನ್ನು ಹಂಚಿಕೊಳ್ಳುತ್ತಿರುವ ಝೀನತ್ ರಹ್ಮಾನ್ ಅತ್ಯಾಚಾರ ತಡೆ ಜಾಗೃತಿ ಬಗ್ಗೆ ಮಾಡಿದ ಚಿತ್ರವೊಂದನ್ನು ಕೂಡ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು ಇದು ಬಹಳಷ್ಟು ಪ್ರಚಾರ ಪಡೆದಿತ್ತು.
ಈ ಎಲ್ಲ ಫೋಟೋಗಳು ಹಾಗೂ ವಿಡಿಯೋಗಳನ್ನು ಪರಿಶಿಲನೆ ನಡೆಸಿದಾಗ ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿಯ ಜೀವನದ ಕೊನೆಯ ಕ್ಷಣಗಳು ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕೂಡ ಝೀನತ್ ರಹ್ಮಾನ್‌ರದ್ದು ಎಂಬುದು ಸಾಬೀತಾಗಿದೆ.
ಆದರೆ, ಈ ಕಲಾವಿದೆ ನಿಜವಾಗಿಯೂ ಆರ್ ಜಿ ಕರ್ ಸಂತ್ರಸ್ತೆಯ ಹೆಸರನ್ನು ಬಳಸಿ ವಿಡಿಯೋ ಫೋಸ್ಟ್ ಮಾಡಿದ್ದಾರೆಯೋ ಅಥವಾ ಅತ್ಯಾಚಾರ ಸಂತ್ರಸ್ತೆಯ ಕುರಿತು ವಿಡಿಯೊವೊಂದನ್ನು ಸೃಷ್ಟಿಸಿದ್ದರೋ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕಿದೆ.
ಯಾಕೆಂದರೆ, “ಸಂತ್ರಸ್ತೆಯ ಹೆಸರನ್ನು ಬಳಸಿ- ಅವಳ ಕೊನೆಯ ಉಸಿರಿರುವ ಮೊದಲು ಆಕೆ ತಾಯಿಗೆ ತೋರಿಸಿದ ಗುರುತುಗಳು..ನಮಗೆ ನ್ಯಾಯ ಬೇಕು. ದಯವಿಟ್ಟು ಸಾಧ್ಯವಾದಷ್ಟು ಹಂಚಿಕೊಳ್ಳಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಒಂದು ವೇಳೆ, ಈ ಪೋಸ್ಟ್ ಮೇಕಪ್ ಕಲಾವಿದೆ ಮಾಡಿದ್ದೇ ಆಗಿದ್ದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದವರ ಗುರುತನ್ನು ಬಹಿರಂಗಪಡಿಸಿದ ಆರೋಪದಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಅತ್ಯಾಚಾರ ಸಂತ್ರಸ್ತೆಯ ಹೆಸರು ಹಾಗೂ ಗುರುತನ್ನು ಬಹಿರಂಗ ಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂಬುದರ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಬೇಕಿದೆ.
ಇದನ್ನು ಓದಿದ್ದೀರಾ?: Fact Check| ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿ ಟಿಎಂಸಿ ನಾಯಕನ ಮಗನಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.