Fact Check| ಈ ಹಿಂದೂ ಮಹಿಳೆಗೆ 24 ಮಕ್ಕಳಿದ್ದಾರೆ ಎಂಬುದು ಸುಳ್ಳು

“ಈ ಹಿಂದೂ ಮಹಿಳೆ 16ಗಂಡು ಮಕ್ಕಳು ಮತ್ತು 8 ಹೆಣ್ಣು ಮಕ್ಕಳು ಸೇರಿದಂತೆ 24 ಮಕ್ಕಳಿಗೆ ಜನ್ಮ ನೀಡಿದ್ದಾಳೆ” ಎಂಬ ಶೀರ್ಷಿಕೆಯಲ್ಲಿ ಪತ್ರಕರ್ತನೊಬ್ಬ ನಡೆಸುವ ಸಂದರ್ಶನದ ಹಾಗೆ ಚಿತ್ರಿಸಲಾದ ವಿಡಿಯೋ ಕ್ಲಿಪ್‌ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಮಹಿಳೆಯೊಂದಿಗೆ ಹಲವು ಯೂಟ್ಯೂಬ್ ಚಾನೆಲ್‌ಗಳು ಸಂದರ್ಶನ ನಡೆಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್: ವಿಡಿಯೋದಲ್ಲಿ ತನಗೆ 24 ಮಕ್ಕಳಿದ್ದಾರೆ ಎಂದು ಹೇಳಿಕೊಳ್ಳುವ ಹಿಂದೂ ಮಹಿಳೆಯ ಹೆಸರು ಖುಷ್ಬು ಪಾಠಕ್. ಸಾಮಾಜಿಕ ಜಾಲತಾಣದಲ್ಲಿ…

Read More

Fact Check: 2014ರ ಈಜಿಪ್ಟಿನ ಹಳೆಯ ವೀಡಿಯೋವನ್ನು ರಾಜ್‌ಬಾಗ್ ಡಿ.ಪಿ.ಎಸ್ ಶಾಲೆಯಲ್ಲಿ ಮುಸ್ಲಿಂ ಶಿಕ್ಷಕನೊಬ್ಬ ಮಕ್ಕಳನ್ನು ಅಮಾನವೀಯವಾಗಿ ಥಳಿಸಿದ್ದಾನೆ ಎಂದು ಹಂಚಿಕೆ

ಶಿಕ್ಷಕನೊಬ್ಬ ಚಿಕ್ಕಮಕ್ಕಳಿಗೆ ಅಮಾನವೀಯವಾಗಿ ಥಳಿಸುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋವಿಗೆ “ನಿಮ್ಮ ವಾಟ್ಸಾಪ್‌ನಲ್ಲಿ ನೀವು ಯಾವುದೇ ಸಂಖ್ಯೆಗಳು ಮತ್ತು ಗುಂಪುಗಳನ್ನು ಹೊಂದಿದ್ದರೂ, ಈ ವೀಡಿಯೊವನ್ನು ಎಲ್ಲರಿಗೂ ಕಳುಹಿಸಿಕೊಡಿ, ಇದು ಡಿ.ಪಿ.ಎಸ್ ಶಾಲೆಯ ರಾಜ್‌ಬಾಗ್, ಶಕೀಲ್ ಅಹಮದ್ ಅನ್ಸಾರಿ ವಲ್ಪಾದ್‌ನ ಶಿಕ್ಷಕನ ಅಮಾನಿವೀಯ ಕೃತ್ಯ ಮುಚ್ಚಿಹಾಕಲಾಗಿದೆ. ವೀಡಿಯೊ ವೈರಲ್ ಆಗುವುದರಿಂದ ಸಾಕಷ್ಟು ವ್ಯತ್ಯಾಸವಾಗುತ್ತದೆ.” ಎಂಬ ಕನ್ನಡ ಮತ್ತು ಹಿಂದಿ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಎಕ್ಸ್‌ನಲ್ಲಿಯೂ ಸಹ ಅನೇಕರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ….

Read More

Fact Check | ಮಗಳನ್ನು ಅತ್ಯಾಚಾರಗೈದ ಆರೋಪಿಯನ್ನು ತಾಯಿ ಕೊಲ್ಲುವ ವಿಡಿಯೋ ನಿಜವಲ್ಲ, ಸಿನಿಮಾ ದೃಶ್ಯವಾಗಿದೆ

“ಈ ವಿಡಿಯೋ ನೋಡಿ ಜರ್ಮನಿಯ ಮಹಿಳೆ ಮರಿಯಾನ್ನೆ ಬ್ಯಾಚ್ಮಿಯರ್ ತನ್ನ ಏಳು ವರ್ಷದ ಮಗಳನ್ನು ಲೈಂಗಿಕವಾಗಿ ದೌರ್ಜನ್ಯ ಎಸಗಿ ಕೊಂದ ವ್ಯಕ್ತಿಯನ್ನು ನ್ಯಾಯಾಲಯದಲ್ಲಿ ಶೂಟ್ ಮಾಡಿದ್ದಾರೆ.  ಅವರ ಆಕ್ರೋಶ ಮತ್ತು ತನ್ನ ಮಗಳ ಸಾವಿಗೆ ನ್ಯಾಯ ಕೊಡಸಲೇ ಬೇಕು ಎನ್ನುವ ಉದ್ದೇಶದಿಂದ ಅವರು ತೆಗೆದುಕೊಂಡ ಈ ನಿರ್ಧಾರದಿಂದ ಅಲ್ಲಿ ಮಹತ್ತರವಾದ ಬದಲಾವಣೆ ಮತ್ತು ಪ್ರಬಲವಾದ ಕಾನೂನು ಜಾರಿಗೆ ಬಂದಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Marianne Bachmeier, a West German woman, took…

Read More
ಟ್ರಂಪ್

Fact Check: COVID-19 ಕುರಿತು ಟ್ರಂಪ್ ಮಾತನಾಡಿರುವ ಹಳೆಯ ವೀಡಿಯೊವನ್ನು ಇತ್ತೀಚಿನ ವೀಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

2024 ರ ಯುಎಸ್ಎ ಅಧ್ಯಕ್ಷೀಯ ಚುನಾವಣೆಯನ್ನು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಲು ಲಾಕ್‌ಡೌನ್‌ಗಳನ್ನು ಮತ್ತು ಲಸಿಕೆಗಳ ಆದೇಶಗಳನ್ನು ಹೊರಡಿಸಲು ಸಜ್ಜಾಗಿರುವುದರಿಂದ, ಯುನೈಟೆಡ್‌ ಸ್ಟೇಟ್ಸ್‌ನ ಮಾಜಿ ಅಧ್ಯಕ್ಷರು ಮತ್ತು ರಿಪಬ್ಲಿಕನ್‌ ಅಧ್ಯಕ್ಷೀಯ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್‌ರವರು ಅವುಗಳ ವಿರುದ್ಧ ಹೊಸ ರೂಪಾಂತರವನ್ನು ತರುವ ಉದ್ದೇಶದಿಂದ ಸಲಹೆಯನ್ನು ನೀಡುತ್ತಿರುವ ವಿಡೀಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ವೀಡಿಯೊಗಳನ್ನು ನೀವು ( ಇಲ್ಲಿ , ಇಲ್ಲಿ , ಇಲ್ಲಿ , ಮತ್ತು ಇಲ್ಲಿ ) ನೋಡಬಹುದು. ಅಂತರಾಷ್ಟ್ರೀಯ ಮಟ್ಟದಲ್ಲಿ  ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಕಾಳಜಿಯ ಉದ್ದೇಶವನ್ನಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆಯು…

Read More
ಸಿಬಿಐ

Fact Check: ಆರ್ ಜಿ. ಕರ್ ಆಸ್ಪತ್ರೆಯ ಅತ್ಯಾಚಾರ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಸಿಬಿಐನ ಡಾ. ಆಕಾಶ್ ನಾಗ್ ಅವರು ರಾಜೀನಾಮೆ ನೀಡಿಲ್ಲ

ಕೋಲ್ಕತಾದ ಸಿಬಿಐನ ಅಪರಾಧ ವಿಭಾಗದ ಉಪ ಇನ್ಸ್ಪೆಕ್ಟರ್ ಜನರಲ್ ಮತ್ತು ಜಂಟಿ ನಿರ್ದೇಶಕ ಡಾ. ಆಕಾಶ್ ನಾಗ್ ಅವರ ರಾಜೀನಾಮೆಯನ್ನು ಪ್ರತಿನಿಧಿಸುವ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆರ್. ಜಿ. ಕರ್ ಆಸ್ಪತ್ರೆಯ ಅತ್ಯಾಚಾರ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಾಗದ ಕಾರಣ ಡಾ. ನಾಗ್ ರಾಜೀನಾಮೆ ನೀಡಿದ್ದಾರೆ ಮತ್ತು ತನಿಖೆಯಿಂದ ಹಿಂದೆ ಸರಿಯಲು ಪ್ರಯತ್ನಿಸಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ ಎಂದು, ಈ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಹಂಚಿಕೊಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ…

Read More
ರಾಹುಲ್ ಗಾಂಧಿ

Fact Check: ರಾಹುಲ್‌ ಗಾಂಧಿ ಅನೇಕ ಮಹಿಳೆಯರ ಜೊತೆಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂಬುದು ಸುಳ್ಳು

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರ ಕುರಿತು ವಿರೋಧ ಪಕ್ಷದ ಬಿಜೆಪಿ ನಾಯಕರು ಮತ್ತು ಬಲಪಂಥೀಯ ಬೆಂಬಲಿಗರು ಪ್ರತಿದಿನವೂ ಒಂದಿಲ್ಲೊಂದು ಆರೋಪಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಹಾಗೆಯೇ ಜವಹರಲಾಲ್‌ ನೆಹರೂ ಅವರ ಕುಟುಂಬದ ಎಲ್ಲಾ ಸದಸ್ಯರ ಮೇಲೂ ಸಹ ನಿರಂತರವಾದ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅವರ ತೇಜೋವದೆಯನ್ನು ಮಾಡಲಾಗುತ್ತಿದೆ. ಈ ಹಿಂದೆ ನೆಹರೂ ಅವರ ಕುಟುಂಬ ಮೂಲತಃ ಮುಸ್ಲಿಂ ಕುಟುಂಬ. ಅವರ ತಂದೆಯ ಹೆಸರು ಮುಬಾರಕ್ ಅಲಿ ಎಂದು ತಾಯಿಯ ಹೆಸರು ತುಸು ರೆಹಮಾನ್ ಬಾಯಿ ಎಂದು ಎಂಬ…

Read More

Fact Check | ಸರ್ಕಾರಿ ಕೆಲಸ ತೊರೆಯುವಂತೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಸದ್ಯದ ಮಟ್ಟಿಗೆ ಮಧ್ಯಂತರ ಸರ್ಕಾರ ರಚನೆಯಾದರೂ ಅಲ್ಲಿನ ಹಿಂದೂಗಳ ಪರಿಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಅದರಲ್ಲೂ ಹಲವು ದುರುಳರು ಹಿಂದೂಗಳ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಿರುಕುಳವನ್ನು ನೀಡುತ್ತಿದ್ದಾರೆ. ಈಗ ಬಾಂಗ್ಲಾದೇಶದ ಸರ್ಕಾರಿ ಹುದ್ದೆಯಲ್ಲಿರುವ ಹಿಂದೂಗಳಿಗೆ ರಾಜೀನಾಮೆಯನ್ನು ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ. https://twitter.com/jpsin1/status/1822686838236258409 ಇನ್ನು ಕೆಲವರು “ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳನ್ನು ಸರ್ಕಾರಿ ಕೆಲಸದಿಂದ ಒತ್ತಾಯಪೂರ್ವಕವಾಗಿ ರಾಜೀನಾಮೆ ಕೊಡಿಸುತ್ತಿದ್ದಾರೆ” ಎಂದು…

Read More