Fact Check: 2014ರ ಈಜಿಪ್ಟಿನ ಹಳೆಯ ವೀಡಿಯೋವನ್ನು ರಾಜ್‌ಬಾಗ್ ಡಿ.ಪಿ.ಎಸ್ ಶಾಲೆಯಲ್ಲಿ ಮುಸ್ಲಿಂ ಶಿಕ್ಷಕನೊಬ್ಬ ಮಕ್ಕಳನ್ನು ಅಮಾನವೀಯವಾಗಿ ಥಳಿಸಿದ್ದಾನೆ ಎಂದು ಹಂಚಿಕೆ

ಶಿಕ್ಷಕನೊಬ್ಬ ಚಿಕ್ಕಮಕ್ಕಳಿಗೆ ಅಮಾನವೀಯವಾಗಿ ಥಳಿಸುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋವಿಗೆ “ನಿಮ್ಮ ವಾಟ್ಸಾಪ್‌ನಲ್ಲಿ ನೀವು ಯಾವುದೇ ಸಂಖ್ಯೆಗಳು ಮತ್ತು ಗುಂಪುಗಳನ್ನು ಹೊಂದಿದ್ದರೂ, ಈ ವೀಡಿಯೊವನ್ನು ಎಲ್ಲರಿಗೂ ಕಳುಹಿಸಿಕೊಡಿ, ಇದು ಡಿ.ಪಿ.ಎಸ್ ಶಾಲೆಯ ರಾಜ್‌ಬಾಗ್, ಶಕೀಲ್ ಅಹಮದ್ ಅನ್ಸಾರಿ ವಲ್ಪಾದ್‌ನ ಶಿಕ್ಷಕನ ಅಮಾನಿವೀಯ ಕೃತ್ಯ ಮುಚ್ಚಿಹಾಕಲಾಗಿದೆ. ವೀಡಿಯೊ ವೈರಲ್ ಆಗುವುದರಿಂದ ಸಾಕಷ್ಟು ವ್ಯತ್ಯಾಸವಾಗುತ್ತದೆ.” ಎಂಬ ಕನ್ನಡ ಮತ್ತು ಹಿಂದಿ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ಎಕ್ಸ್‌ನಲ್ಲಿಯೂ ಸಹ ಅನೇಕರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ ಚೆಕ್:

ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ ಇದೇ ಚಿತ್ರಗಳನ್ನು ಒಳಗೊಂಡ ಸುದ್ದಿ ವರದಿಗಳು ಲಭ್ಯವಾಗಿವೆ. ಈ ಘಟನೆ ಈಜಿಪ್ಟ್‌ನಲ್ಲಿ ನಡೆದಿದ್ದು ಅನಾಥಾಶ್ರಮದ ಮ್ಯಾನೇಜರ್ ಮಕ್ಕಳನ್ನು ದೊಣ್ಣೆಯಿಂದ ಹೊಡೆಯುವ ದೃಶ್ಯವನ್ನು ಆತನ ಪತ್ನಿ ರಹಸ್ಯ ಚಿತ್ರಿಕರಿಸಿದ್ದಾರೆ. ಎಂದು 5 ಆಗಸ್ಟ್‌ 2014 ರ ಮೈಲ್ ಆನ್‌ಲೈನ್‌ ವರದಿ ತಿಳಿಸಿದೆ.

“ಅನಾಥಾಶ್ರಮದ ಮ್ಯಾನೇಜರ್ ಪತಿ ಮಕ್ಕಳನ್ನು ದೊಣ್ಣೆಯಿಂದ ಹೊಡೆದು ಒದೆಯುವ ದೃಶ್ಯವನ್ನು ಪತ್ನಿಯೊಬ್ಬರು ರಹಸ್ಯವಾಗಿ ಚಿತ್ರೀಕರಿಸಿದ್ದಾರೆ. ಒಸಾಮಾ ಮೊಹಮ್ಮದ್ ಒತ್ಮಾನ್ ಮಕ್ಕಳನ್ನು ಒದೆಯುವ ಮೊದಲು ಅವರು ಓಡಿಹೋಗುವಾಗ ನೋವಿನಿಂದ ಕಿರುಚುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಎರಡು ತಿಂಗಳ ಹಿಂದೆ ಗಿಜಾದಲ್ಲಿರುವ ದಾರ್ ಮೆಕ್ಕಾ ಅಲ್-ಮೊಕರಾಮ ಅನಾಥಾಶ್ರಮದಲ್ಲಿ ಓತ್ಮಾನ್ ಅವರ ವಿಚ್ಛೇದಿತ ಪತ್ನಿ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂದು ಸರ್ಕಾರಿ ಅಲ್-ಅಹ್ರಾಮ್ ಪತ್ರಿಕೆ ಹೇಳಿದೆ.” 

ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಸಿಸ್ಸಿ ಅವರು ‘ತಪ್ಪು ಮಾಡಿದವರನ್ನು’ ನ್ಯಾಯಕ್ಕೆ ತರಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದರು ಮತ್ತು ಸೋಮವಾರ ರಾತ್ರಿ ಒತ್ಮಾನ್ ಅವರನ್ನು ಬಂಧಿಸಲಾಯಿತು.” ಎಂದು ಮೈಲ್‌ ಆನ್‌ಲೈನ್‌ ವರದಿ ಮಾಡಿದೆ.

ಆದ್ದರಿಂದ ಇದು 2014 ರ ಹಳೆಯ ಈಜಿಪ್ಟ್‌ಗೆ ಸಂಬಂಧಿಸಿದ ವೀಡಿಯೋ ಆಗಿದ್ದು ವೈರಲ್ ವೀಡಿಯೋವಿಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ.


ಇದನ್ನು ಓದಿ: ಆರ್ ಜಿ. ಕರ್ ಆಸ್ಪತ್ರೆಯ ಅತ್ಯಾಚಾರ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಸಿಬಿಐನ ಡಾ. ಆಕಾಶ್ ನಾಗ್ ಅವರು ರಾಜೀನಾಮೆ ನೀಡಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *