Fact Check: COVID-19 ಕುರಿತು ಟ್ರಂಪ್ ಮಾತನಾಡಿರುವ ಹಳೆಯ ವೀಡಿಯೊವನ್ನು ಇತ್ತೀಚಿನ ವೀಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

ಟ್ರಂಪ್

2024 ರ ಯುಎಸ್ಎ ಅಧ್ಯಕ್ಷೀಯ ಚುನಾವಣೆಯನ್ನು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಲು ಲಾಕ್‌ಡೌನ್‌ಗಳನ್ನು ಮತ್ತು ಲಸಿಕೆಗಳ ಆದೇಶಗಳನ್ನು ಹೊರಡಿಸಲು ಸಜ್ಜಾಗಿರುವುದರಿಂದ, ಯುನೈಟೆಡ್‌ ಸ್ಟೇಟ್ಸ್‌ನ ಮಾಜಿ ಅಧ್ಯಕ್ಷರು ಮತ್ತು ರಿಪಬ್ಲಿಕನ್‌ ಅಧ್ಯಕ್ಷೀಯ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್‌ರವರು ಅವುಗಳ ವಿರುದ್ಧ ಹೊಸ ರೂಪಾಂತರವನ್ನು ತರುವ ಉದ್ದೇಶದಿಂದ ಸಲಹೆಯನ್ನು ನೀಡುತ್ತಿರುವ ವಿಡೀಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ವೀಡಿಯೊಗಳನ್ನು ನೀವು ( ಇಲ್ಲಿ , ಇಲ್ಲಿ , ಇಲ್ಲಿ , ಮತ್ತು ಇಲ್ಲಿ ) ನೋಡಬಹುದು.

ಅಂತರಾಷ್ಟ್ರೀಯ ಮಟ್ಟದಲ್ಲಿ  ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಕಾಳಜಿಯ ಉದ್ದೇಶವನ್ನಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆಯು (WHO)  ಘೋಷಿಸಿರುವ  ವಿಡೀಯೊವನ್ನು 2024ರ Mpox ಟ್ರಂಪ್‌ರವರು ಕೋವಿಡ್‌ 19ರಲ್ಲಿ ಮಾಡಿರುವ ಭಾಷಣವನ್ನು ಲಿಂಕ್‌ ಮಾಡುವುದರ ಮುಖಾಂತರ ಇತ್ತೀಚಿನ ಪೋಸ್ಟರ್‌ಗಳಲ್ಲಿ, ವಿಡೀಯೋಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂಬುದರ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳೋಣ.

ಸುಳ್ಳು: ಮುಂಬರುವ 2024ರ ಯುಎಸ್‌ಎ ಅಧ್ಯಕ್ಷೀಯ ಚುನಾವಣೆಯಲ್ಲಿ MPOX ಡೊನಾಲ್ಡ್‌ ಟ್ರಂಪ್‌ನ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ವೈರಲ್ ವೀಡಿಯೊದ ಮಾಹಿತಿ ಸುಳ್ಳು.

ಸತ್ಯ: ಈ ವೈರಲ್ ವೀಡಿಯೊವನ್ನು ಆಗಸ್ಟ್ 2023 ರಲ್ಲಿ ಹಂಚಿಕೊಳ್ಳಲಾಗಿದೆ. 2024 ರ Mpox ಗೂ ಮತ್ತು ಈ ವೈರಲ್‌ ವಿಡೀಯೋಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅಗಷ್ಟ್‌ 2023 ರಲ್ಲಿ USA ನಲ್ಲಿ ಹೊಸದಾಗಿ COVID-19 ರೂಪಾಂತರದ ಹರಡುವಿಕೆಯನ್ನು ಕುರಿತು  ಟ್ರಂಪ್‌ರವರು ವಿರೋಧಿಸುತ್ತಿರುವುದನ್ನು ಈ ವೀಡಿಯೊದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಪೋಸ್ಟ್‌ರ್‌ಗಳಲ್ಲಿ ಹರಡಲಾದ ಮಾಹಿತಿ ಸುಳ್ಳಾಗಿದೆ.

ಸಂಪೂರ್ಣ ವೀಡಿಯೊವನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಟ್ರಂಪ್‌ರವರು ತಮ್ಮ ಭಾಷಣದಲ್ಲಿ  Mpox ಬಗ್ಗೆ ಯಾವುದೇ ವಿಷಯವನ್ನುಮಾತನಾಡಿಲ್ಲ ಎಂಬುದು ಖಚಿತವಾಗಿ ತಿಳಿದುಬರುತ್ತದೆ. ಈ ವೈರಲ್ ವೀಡಿಯೊದ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಕೀಫ್ರೇಮ್‌ಗಳನ್ನು ಬಳಸಿಕೊಂಡು Google ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ  31 ಆಗಸ್ಟ್ 2023 ರಂದು ಡೊನಾಲ್ಡ್ ಟ್ರಂಪ್ ಅವರ ಅಧಿಕೃತ Instagram ಪುಟದಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಂಡ  ವೀಡಿಯೊ ನಮಗೆ ಸಿಕ್ಕಿತು.  ಆ  ವಿಡೀಯೊದಲ್ಲಿ “COVIDನ ನಿರಂಕುಶಾಧಿಕಾರಿಗಳು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಬಯಸುತ್ತಾರೆ.”ಎಂಬ ವೈರಲ್ ವೀಡಿಯೊವನ್ನು 31 ಆಗಸ್ಟ್ 2023 ರಂದು ಮಾಜಿ ಯುಎಸ್ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರು ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದ್ದರಿಂದ ಈ ವೈರಲ್ ವೀಡಿಯೋ ಒಂದು ವರ್ಷ ಹಳೆಯದಾಗಿದೆ ಮತ್ತು ಇತ್ತೀಚೆಗೆ ಹರಡಿರುವ Mpox ಪ್ರಕರಣಕ್ಕೂ ಈ ವಿಡೀಯೊಗು ಯಾವುದೇ ರೀತಿಯ ಸಂಬಂಧವಿಲ್ಲ. ಅದನ್ನು ನೀವು ( ಇಲ್ಲಿ , ಇಲ್ಲಿ ) ನೋಡಬಹುದು.

ಈ ವೀಡಿಯೊ ಬಹಳಷ್ಟು ಸುದ್ದಿ ವರದಿಗಳಿಗೆ ( ಇಲ್ಲಿ , ಇಲ್ಲಿ , ಇಲ್ಲಿ ) ಕಾರಣವಾಗಿರುವುದು  ನಮಗೆ ತಿಳಿದುಬಂದಿದೆ. ಈ ವರದಿಗಳ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನ ಹಲವಾರು ಆಸ್ಪತ್ರೆಗಳು, ಕಾಲೇಜುಗಳು ಮತ್ತು ಸಂಸ್ಥೆಗಳು ಆಗಸ್ಟ್ 2023 ರಲ್ಲಿ ಸಿಬ್ಬಂದಿ ಮತ್ತು ಸಂದರ್ಶಕರಿಗೆ ಕೋವಿಡ್‌ನ ಅಸಲಿ ಬಣ್ಣವನ್ನು ಬಯಲು ಮಾಡುವುದನ್ನುಪುನಃ ತಿಳಿಸಿಕೊಟ್ಟಿವೆ.

EG.5 ಮತ್ತು BA.2.86ಗಳು ಹೊಸದಾಗಿ ಸೃಷ್ಠಿಯಾಗಿರುವ ಕೊರೋನವೈರಸ್‌ನ ರೂಪಾಂತರಗಳ ಹರಡುವಿಕೆಯನ್ನು ನಿಯಂತ್ರಿಸಲು,  (ಇಲ್ಲಿ , ಇಲ್ಲಿ ) ಕಾರಣವಾಗಿವೆ.ಇದಾದ ನಂತರ ಟ್ರಂಪ್‌ರವರು ತಮ್ಮ ಭಾಷಣದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕೊರೋನ ವೈರಸ್‌ನ ಅಸಲಿ ಮುಖವಾಡ, ಅದಕ್ಕೆ ಬಳಸಬಹುದಾದ ಲಸಿಕೆಗಳು ಮತ್ತು ಲಾಕ್‌ಡೌನ್‌ಗಳ ಪುನರ್‌ಸ್ಥಾಪನೆಯ ವಿರುದ್ಧ ದೃಢವಾಗಿ ನಿಲ್ಲುವಂತೆ ಯುನೈಟೆಡ್ ಸ್ಟೇಟ್ಸ್‌ನ ಜನರನ್ನು ಒತ್ತಾಯಿಸಿದರು. ಯುಎಸ್‌ಎನಲ್ಲಿ ಹೊಸ COVID-19 ರೂಪಾಂತರಗಳ ಮೇಲಿರುವ ಎಚ್ಚರಿಕೆಯು ಮುಂಬರುವ ಚುನಾವಣೆಗಳನ್ನು ಸುಶ್ರುತವಾಗಿ ನಿರ್ವಹಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ಆರೋಪಿಸಿದರು. ಈ ಮಾಹಿತಿಯಿಂದ, ವೈರಲ್ ವೀಡಿಯೊದಲ್ಲಿ, ಟ್ರಂಪ್ ಅವರು ಆಗಸ್ಟ್ 2023 ರಲ್ಲಿ USA ನಲ್ಲಿ ಹರಡುತ್ತಿರುವ COVID-19 ನ ಹೊಸ ರೂಪಾಂತರದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ನಮಗೆ ತಿಳಿದುಬಂದಿದೆ.

ಎಂಪಾಕ್ಸ್ ಅಥವಾ ಮಂಕಿಪಾಕ್ಸ್ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಜ್ವರ ಮತ್ತು ದುಗ್ಧರಸ ಗ್ರಂಥಿಗಳ ಊತದಿಂದ ಬರುವ ಕಾಯಿಲೆಯಾಗಿದೆ. Mpox ಕುರಿತು ಹೆಚ್ಚಿನ ವಿವರಗಳನ್ನು ನಾವು ಇಲ್ಲಿಇಲ್ಲಿ , ಮತ್ತು ಇಲ್ಲಿ ನೋಡಬಹುದು. ವಿಶ್ವ ಆರೋಗ್ಯ ಸಂಸ್ಥೆ (WHO) 2022 ರಲ್ಲಿ “ಮಂಕಿಪಾಕ್ಸ್” ಪದವನ್ನು “Mpox” ನೊಂದಿಗೆ ಬದಲಿಸಲು ಶಿಫಾರಸ್ಸನ್ನು ಮಾಡಿದೆ. ಏಕೆಂದರೆ ಜನಾಂಗೀಯ ಮತ್ತು ಕಳಂಕಿತ ಭಾಷೆಯನ್ನು ಅಂತರ್ಜಾಲದಲ್ಲಿ 14 ಆಗಸ್ಟ್ 2024 ರಂದು ಹರಡುತ್ತಿರುವುದನ್ನು, WHO ವೈರಸ್‌ನ ಹೊಸ ರೂಪಾಂತರವನ್ನು ಗುರುತಿಸಿದ ನಂತರ ಆಫ್ರಿಕಾದಲ್ಲಿ ಹೆಚ್ಚುತ್ತಿರುವ ಎಂಪಾಕ್ಸ್ (ಹಿಂದೆ ಮಂಕಿಪಾಕ್ಸ್ ಎಂದು ಕರೆಯಲಾಗುತ್ತಿತ್ತು) ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ.

ಇದಾದ ನಂತರ ಜನವರಿ 2023 ರಲ್ಲಿ  27,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಮತ್ತು 1,100 ಜನರು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಸಾವನ್ನಪ್ಪಿದ್ದಾರೆ ( ಇಲ್ಲಿ ) ಎಂಬ ಮಾಹಿತಿ ನಮಗೆ ತಿಳಿದುಬಂದಿದೆ. ಹೆಚ್ಚು ಸಾಂಕ್ರಾಮಿಕ ರೋಗವು ಜಗತ್ತಿನೆಲ್ಲಡೆಯಲ್ಲೂ ಹರಡಿದೆ.  ಸ್ವೀಡನ್ ಮತ್ತು ಪಾಕಿಸ್ತಾನದಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪಿಲಿಫೈನ್ಸ್‌ ತನ್ನ ಮೊದಲ ಪ್ರಕರಣವನ್ನು 19 ಆಗಸ್ಟ್ 2024 ರಂದು ವರದಿ ಮಾಡಿದೆ. Mpox ನ ಏಕಾಏಕಿ ಅಪಾಯವು ಇಲ್ಲಿಯವರೆಗೂ ಭಾರತದಲ್ಲಿ ಕಡಿಮೆಯಾಗಿದೆ ಎಂದು ಭಾರತ ಸರ್ಕಾರವು  ಹೇಳಿದೆ.

ಒಟ್ಟಾರೆಯಾಗಿ COVID-19 ಕುರಿತು ಟ್ರಂಪ್ ಮಾತನಾಡಿರುವ ಹಳೆಯ ವೀಡಿಯೊವನ್ನು 2024 ರ Mpox ಏಕಾಏಕಿ ಲಿಂಕ್ ಮಾಡುವ ಮೂಲಕ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿದ್ದೀರಾ?


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯವನ್ನು ತಿಳಿಸುತ್ತೇವೆ.

Leave a Reply

Your email address will not be published. Required fields are marked *