“ಈ ಹಿಂದೂ ಮಹಿಳೆ 16ಗಂಡು ಮಕ್ಕಳು ಮತ್ತು 8 ಹೆಣ್ಣು ಮಕ್ಕಳು ಸೇರಿದಂತೆ 24 ಮಕ್ಕಳಿಗೆ ಜನ್ಮ ನೀಡಿದ್ದಾಳೆ” ಎಂಬ ಶೀರ್ಷಿಕೆಯಲ್ಲಿ ಪತ್ರಕರ್ತನೊಬ್ಬ ನಡೆಸುವ ಸಂದರ್ಶನದ ಹಾಗೆ ಚಿತ್ರಿಸಲಾದ ವಿಡಿಯೋ ಕ್ಲಿಪ್‌ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಈ ವಿಡಿಯೋ ವೈರಲ್ ಆದ ಬಳಿಕ ಮಹಿಳೆಯೊಂದಿಗೆ ಹಲವು ಯೂಟ್ಯೂಬ್ ಚಾನೆಲ್‌ಗಳು ಸಂದರ್ಶನ ನಡೆಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಫ್ಯಾಕ್ಟ್‌ಚೆಕ್:
ವಿಡಿಯೋದಲ್ಲಿ ತನಗೆ 24 ಮಕ್ಕಳಿದ್ದಾರೆ ಎಂದು ಹೇಳಿಕೊಳ್ಳುವ ಹಿಂದೂ ಮಹಿಳೆಯ ಹೆಸರು ಖುಷ್ಬು ಪಾಠಕ್. ಸಾಮಾಜಿಕ ಜಾಲತಾಣದಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡುವ ಮೂಲಕವೇ ಈಕೆ ಪ್ರಸಿದ್ಧಿ ಪಡೆದಿದ್ದು, ತನ್ನದೇ ಆದ ‘ಅಪ್ನಾ ಆಜ್‘ ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಈ ಚಾನೆಲ್‌ನಲ್ಲಿ 24 ಮಕ್ಕಳ ಬಗ್ಗೆ ವಿಭಿನ್ನ ರೀತಿಯಲ್ಲಿ ಕಥೆಗಳನ್ನು ಹೆಣೆದು ವಿಡಿಯೋ ಮಾಡಿರುವುದನ್ನು ಕಾಣಬಹುದು.
ಸಂದರ್ಶನ ಮಾಡಿದ ಭಾರತ್ ಪ್ರೈಮ್ ಯೂಟ್ಯೂಬ್ ಚಾನೆಲ್ ಆಗಸ್ಟ್ 11ರಂದು “ಹಿಂದೂ ಮಹಿಳೆಗೆ 24ಮಕ್ಕಳು” ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದೆಯಾದರೂ, 24 ಮಕ್ಕಳಿರುವ ಬಗ್ಗೆ ದೃಢೀಕರಿಸಿಲ್ಲ ಎಂದು ತನ್ನ ಹೇಳಿಕೆಯಲ್ಲಿ ನಮೂದಿಸಿದೆ. ಆದರೆ, ಈ ಬಗ್ಗೆ ವಿಡಿಯೋದಲ್ಲಿ ಯಾವುದೇ ಹೇಳಿಕೆಯನ್ನು ನೀಡದೇ ಇರುವುದು ವಿಕ್ಷಕರು ಇದು ನೈಜ ಸುದ್ದಿ ಎಂದು ಭಾವಿಸಲು ಕಾರಣವಾಗಿದೆ.
ಖುಷ್ಬು ಅಕ್ಕಪಕ್ಕದಲ್ಲಿ ನಿಂತ ಸಹನಟರೂ ಕೂಡ ಈ ಸಂದರ್ಶನ ವಿಡಿಯೋ ಚಿತ್ರೀಕರಣದ ವೇಳೆ ಖುಷ್ಬುಗೆ 24 ಮಕ್ಕಳಿದ್ದಾರೆ ಎಂದು ಹೇಳುವಾಗ ಸಂದರ್ಶನ ನಡೆಸುವಾತ ತಬ್ಬಿಬ್ಬಾಗುವುದು ಚಿತ್ರಣವಾಗಿತ್ತು.
ಇದನ್ನೇ ನಿಜವೆಂದು ಭಾವಿಸಿ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಆಯಾಮದಲ್ಲಿ ಜನರು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
मुसलमान औरतें अगर 4 बच्चा पैदा कर ले तो टना टनी का करेजा में दर्द हो जाता है.! और इधर 24 बच्चों की हिंदू महिला से 16 लड़के और 8 लड़कियां है यूपी राज्य की यह महिला इधर डबल क्रिकेट टीम बना डाली इसके बारे मे टनाटन वाले कुछ कहना चाहेंगे..! pic.twitter.com/jYYkdKKIFj
— Krantikari parinda 鳥 (@99parinda) August 11, 2024
ಆದರೆ, ಪಿಜಿ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್‌ವೊಂದು ನಡೆಸಿದ ಸಂದರ್ಶನದಲ್ಲಿ ಖುಷ್ಬು “ತನ್ನ ಇಬ್ಬರು ಮಕ್ಕಳು ಮನೆಯಲ್ಲಿದ್ದಾರೆ ಮಿಕ್ಕುಳಿದ 22 ಮಕ್ಕಳು ಹೊಲದಲ್ಲಿದ್ದಾರೆ” ಎಂದು ಹೇಳಿಕೆ ನೀಡಿದ್ದಾಳೆ. “22 ಮಕ್ಕಳು ತಾನು ನೆಟ್ಟ ಗಿಡಗಳು” ಎಂದು ಖುಷ್ಬು ಇದರಲ್ಲಿ ಪರಿಚಯಿಸಿದ್ದು, ತನ್ನ ಎರಡು ಮಕ್ಕಳು ಮಾತ್ರ ಮನೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಹಿಂದೂ ಮಹಿಳೆಗೆ 24 ಮಕ್ಕಳಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕಾಲ್ಪನಿಕ ಕಥೆಯಾಗಿದೆ ಎಂಬುದು ಇದರಿಂದ ಸಾಬೀತಾಗಿದೆ.
ಇದನ್ನು ಓದಿದ್ದೀರಾ?: Fact Check| ಮಗಳನ್ನು ಅತ್ಯಾಚಾರಗೈದ ಆರೋಪಿಯನ್ನು ತಾಯಿ ಕೊಲ್ಲುವ ವಿಡಿಯೋ ನಿಜವಲ್ಲ, ಸಿನಿಮಾ ದೃಶ್ಯವಾಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.