“ಈ ಫೋಟೋಗಳನ್ನು ಗಮನಿಸಿ ಇದು ಯಾವುದೋ ಮುಸಲ್ಮಾನ ನಾಯಕ ಹಾಕಿದ ಶುಭಾಶಯಗಳ ಫೋಟೋವಲ್ಲ, ವಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದೂಗಳ ಹಬ್ಬಕ್ಕೆ ಶುಭಾಶಯ ತಿಳಿಸುವಾಗ ಹಾಕಿದ ಫೋಟೋ. ಈ ಯಾವ ಪೋಸ್ಟ್‌ಗಳಲ್ಲಿ ಕೂಡ ಹಿಂದೂ ದೇವರುಗಳ ಫೋಟೋ ಇಲ್ಲ. ರಾಹುಲ್ ಗಾಂಧಿ ಅವರು ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಹಿಂದೂ ದೇವರುಗಳ ಫೋಟೋಗಳನ್ನು ಬಳಸಿಕೊಳ್ಳುತ್ತಾರೆಯೇ ಹೊರತು, ಅವರು ಎಂದಿಗೂ ಹಿಂದೂ ದೇವರುಗಳ ಫೋಟೋವನ್ನು ಗೌರವಿಸಿಯೇ ಇಲ್ಲ” ಎಂಬ ರೀತಿಯಲ್ಲಿ ವಿವಿಧ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಅವರ ಪೋಸ್ಟ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
Rahul Gandhi has been meticulously walking a tightrope—projecting himself as a Hindu leader while also appeasing his core vote bank that harbours deep disdain for idolatry and pictorial representation of Godshttps://t.co/XVByeN3ODA
— OpIndia.com (@OpIndia_com) August 26, 2024
ಈ ಫೋಟೋ ನೋಡಿದ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು ರಾಹುಲ್ ಗಾಂಧಿ ಅವರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿರುವುದರ ಜೊತೆಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ನಾಯಕರು ಕೇವಲ ಮುಸಲ್ಮಾನರ ಮತ್ತು ಅಲ್ಪ ಸಂಖ್ಯಾತರ ಪರವಾಗಿ ಇದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿರುವುದರಿಂದ, ಇದರ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
Rahul Gandhi never uses Hindu gods/goddess picture while wishing on our festivals..
It seems he also follows the "Idol worshipping is haram" philosophy… pic.twitter.com/6DJXAvrVhn— Mr Sinha (@MrSinha_) August 26, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್‌ಗೆ ಸಂಬಂಧ ಪಟ್ಟಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ರಾಹುಲ್ ಗಾಂಧಿ ಅವರು ವಿವಿಧ ಹಿಂದೂ ಹಬ್ಬಗಳ ಸಂದರ್ಭದಲ್ಲಿ, ದೇವರುಗಳ ಫೋಟೊದೊಂದಿಗೆ ಶುಭಾಶಯ ಕೋರಿರುವ ಹಲವು ಪೋಸ್ಟ್‌ಗಳು ನಮಗೆ ಪತ್ತೆಯಾಗಿವೆ.
सभी देशवासियों को महा शिवरात्रि की हार्दिक शुभकामनाएं।
Wishing everyone a Happy Maha Shivaratri!#MahaShivaratri pic.twitter.com/v1GKM2pLVD
— Rahul Gandhi (@RahulGandhi) February 13, 2018
ಇನ್ನೂ ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ರಾಹುಲ್ ಗಾಂಧಿ ಅವರ ಟ್ವಿಟರ್ ಪೇಜ್‌ನ ಕೆಲವೇ ಕೆಲವು ಆಯ್ದ ಭಾಗಗಳಾಗಿವೆ ಎಂಬುದು ತಿಳಿದು ಬಂದಿದೆ. ಅದರಲ್ಲಿ ಕೆಲವೊಂದರಲ್ಲಿ ರಾಹುಲ್ ಗಾಂಧಿಯವರು ಪೋಸ್ಟರ್‌ಗಳೊಂದಿಗೆ ಶುಭಾಶಯಗಳನ್ನು ಮಾತ್ರ ಕೋರಿದರೆ, ಇನ್ನೂ ಕೆಲವೊಂದು ಪೋಸ್ಟ್‌ಗಳಲ್ಲಿ ದೇವರ ಫೋಟೊದೊಂದಿಗೆ ಕೂಡ ಶುಭಾಶಯವನ್ನು ಕೋರಿದ್ದಾರೆ. ಈ ಕುರಿತು ಇನ್ನಷ್ಟು ಪರಿಶೀಲನೆ ನಡೆಸುವಾಗ ಆಲ್ಟ್‌ನ್ಯೂಸ್ ಸಹ ಸಂಪಾದಕ ಮೊಹಮ್ಮದ್ ಜುಬೈರ್ ಅವರು ಕೂಡ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ವೈರಲ್ ಪೋಸ್ಟ್ ಸುಳ್ಳಿನಿಂದ ಕೂಡಿದೆ ಎಂಬುದನ್ನು ಅವರು ಕೂಡ ಉಲ್ಲೇಖಿಸಿದ್ದಾರೆ.
What these right wing handles @MrSinha_ @OpIndia_com @OpIndia_in @UnSubtleDesi
are sharing is not Misinformation but Disinformation. By selectively sharing tweets deliberately to prove @RahulGandhi is Anti Hindu. Unlike the fake narrative by Right Wing Trolls, Here are tweets by… pic.twitter.com/Y24MK1y2Sz— Mohammed Zubair (@zoo_bear) August 27, 2024
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದೂಗಳ ಹಬ್ಬಕ್ಕೆ ಹಿಂದೂ ದೇವರುಗಳ ಫೋಟೋದೊಂದಿಗೆ ಶುಭಾಶಯಗಳನ್ನೇ ಕೋರಿಲ್ಲ ಎಂಬುದು ಸುಳ್ಳಾಗಿದೆ. ಅವರ ಕೆಲವೇ ಕೆಲವು ಆಯ್ದ ಪೋಸ್ಟ್‌ಗಳನ್ನು ತೆಗೆದುಕೊಂಡಿರುವ ಕಿಡಿಗೇಡಿಗಳು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಹೀಗಾಗಿ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : Fact Check | ಸೇನೆಯ ಮೇಲೆ ದಾಳಿ ಎಂದು ತಪ್ಪಾಗಿ ಅಸ್ಸಾಂ ರೈಫಲ್ಸ್ – ಮಣಿಪುರ ಪೊಲೀಸರ ಘರ್ಷಣೆಯ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.