ಹಮಾಸ್-ಇಸ್ರೇಲ್ ಸಂಘರ್ಷ ಮುಂದುವರೆದಿದ್ದು, ಈ ನಡುವೆ “ಹಮಾಸ್ ನಿರ್ಮಿಸಿದ ಶಸ್ತ್ರಾಸ್ತ್ರ ಕಾರ್ಖಾನೆ ಸೇರಿದಂತೆ ದೊಡ್ಡ ಸುರಂಗವನ್ನು ಇಸ್ರೇಲ್ ಪತ್ತೆ ಹಚ್ಚಿದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ಭೂಗತ ಜಾಗಕ್ಕೆ ಮೆಟ್ಟಿಲುಗಳನ್ನು ಇಳಿದು ಹೋಗುತ್ತಿರುವ ದೃಶ್ಯಗಳು ಈ ವೀಡಿಯೊದಲ್ಲಿವೆ.
“ಇಸ್ರೇಲ್‌ನ ಗಾಜಾ ಭೂಭಾಗದಲ್ಲಿ ಭಯೋತ್ಪಾದಕರ ಸಿದ್ಧತೆಯನ್ನು ನೋಡಿ ಆಘಾತವಾಯಿತು. ಇಸ್ರೇಲ್‌ನ ಮೊಸಾದ್ ಭೂಗರ್ಭದಲ್ಲಿ ಕಾಂಕ್ರೀಟ್ ಆರ್‌ಸಿಸಿ ಸುರಂಗವನ್ನು ಎಷ್ಟು ಆಳದಲ್ಲಿ ನಿರ್ಮಿಸಲಾಗಿದೆ ನೋಡಿ… 150 ಅಡಿಗಿಂತಲೂ ಕೆಳಗೆ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಇದು ಹೊಂದಿದೆ. ಅಂತಾರಾಷ್ಟ್ರೀಯ ಭಯೋತ್ಪಾದನಾ ಬೆಂಬಲವಿಲ್ಲದೆ ಇದು ಅಸಾಧ್ಯ. ಆದರೆ, ಇಸ್ರೇಲ್ ಈ ಬಂಕರ್‌ನ್ನು ಕಂಡುಹಿಡಿದಿದೆ”. ಎಂಬ ಮಲಯಾಳಂ ಸಂದೇಶದೊಂದಿಗೆ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್:
ನ್ಯೂಸ್‌ಮೊಬೈಲ್ ಎಂಬ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಇದು ಸುಳ್ಳು ಸುದ್ದಿ ಎಂದು ವರದಿ ಮಾಡಿದೆ.
2024ರ ಜನವರಿಯಲ್ಲಿ ‘ಲಾಸ್ಟ್‌ಹಿಸ್ಟರಿ’ (losthistorie) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು “Deep Nuclear Bunker”( ಆಳವಾದ ಪರಮಾಣು ಬಂಕರ್) ಎಂದು ಉಲ್ಲೇಖಿಸಿ ಪೋಸ್ಟ್ ಮಾಡಲಾಗಿದೆ.
View this post on Instagram
2024ರ ಜನವರಿ 6ರಂದು ಅಪ್‌ಲೋಡ್ ಮಾಡಲಾದ ಈ ಸುದೀರ್ಘ ವೀಡಿಯೊದಲ್ಲಿ, ವೈರಲ್ ವೀಡಿಯೊದ ತುಣುಕು ಸೇರಿದಂತೆ ಬಂಕರ್‌ನ ಹೆಚ್ಚುವರಿ ದೃಶ್ಯಗಳು ಲಭ್ಯವಿದೆ.
“ಹಂಗೇರಿಯ ರಾಜಧಾನಿಯಲ್ಲಿ ಸುಮಾರು 50 ಮೀಟರ್ ಭೂಗರ್ಭದಲ್ಲಿ ಈಗಾಗಲೇ ಪಾಳು ಬಿದ್ದಿರುವ ನ್ಯೂಕ್ಲಿಯರ್ ಪ್ಲಾಂಟ್(ಪರಮಾಣು ಸ್ಥಾವರ)” ಎಂದು ಈ ವಿಡಿಯೋದಲ್ಲಿ ಸ್ಪಷ್ಟವಾಗಿದೆ.
ಈ ಪ್ಲಾಂಟ್ 3,800 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು 2,200 ಜನರಿಗೆ ಅವಕಾಶ ಕಲ್ಪಿಸುವ ಬಂಕರ್ ಆಗಿತ್ತು. ಇದನ್ನು 1960ರ ದಶಕದ ಆರಂಭದಲ್ಲಿ ಹಂಗೇರಿಯನ್ ಸರ್ಕಾರವು ರಹಸ್ಯವಾಗಿ ಕೈದಿಗಳ ಮೂಲಕ ನಿರ್ಮಿಸಿತ್ತು ಎಂದು ವರದಿಯಾಗಿದೆ.
ಯೂಟ್ಯೂಬ್ ಚಾನೆಲ್ LostHistorie ನಲ್ಲಿ ಕಳೆದ ಜುಲೈ 10, 2024 ರಂದು ವೈರಲ್ ತುಣುಕನ್ನು ಒಳಗೊಂಡಿರುವ ವಿಡಿಯೋ ಕೂಡ ಪೋಸ್ಟ್ ಮಾಡಿದೆ.
ವೈರಲ್ ಮಾಡಲಾಗಿರುವ ವೀಡಿಯೋಗೂ ಇಸ್ರೇಲ್-ಹಮಾಸ್ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.
ಇದನ್ನು ಓದಿದ್ದೀರಾ? Fact Check| ಸಿರಿಯಾದ ಹಳೆಯ ವೀಡಿಯೊವನ್ನು ಇಸ್ರೇಲ್‌ನಲ್ಲಾದ ಇತ್ತೀಚಿನ ಘಟನೆಯೆಂದು ತಪ್ಪಾಗಿ ಹಂಚಿಕೊಳ್ಳುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ